ಟ್ರ್ಯಾಕ್ಟರ್​ ವ್ಯವಹಾರದಲ್ಲಿ ಕಿರುಕುಳ ಆರೋಪ: ಫೇಸ್​ಬುಕ್​ ಲೈವ್ ಬಂದು ಆತ್ಮಹತ್ಯೆಗೆ ಯತ್ನಿಸಿದ ರೈತ

ಟ್ರ್ಯಾಕ್ಟರ್​ ವ್ಯವಹಾರದಲ್ಲಿ ಕಿರುಕುಳ ಆರೋಪ: ಫೇಸ್​ಬುಕ್​ ಲೈವ್ ಬಂದು ಆತ್ಮಹತ್ಯೆಗೆ ಯತ್ನಿಸಿದ ರೈತ

ಬೆಳಗಾವಿ: ಟ್ಯಾಕ್ಟರ್ ವ್ಯವಹಾರ ಒಂದರಲ್ಲಿ ಕಿರುಕುಳ ಆರೋಪದ ಮೇಲೆ ರೈತನೋರ್ವ ಫೇಸ್​ಬುಕ್​ ಲೈವ್​ನಲ್ಲಿ ಬಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಗೋಕಾಕ್​ನಲ್ಲಿ ನಡೆದಿದೆ.

ಮಕ್ಕಳಗೇರಿ ಗ್ರಾಮದ ಲಕ್ಷ್ಮಣ ಈಳಗೇರಿ(30)ಎಂಬಾತ ಆತ್ಮಹತ್ಯೆಗೆ ಯತ್ನಿಸಿದ ರೈತ. ಅರುನ್ ಪವಾ ರ್, ಅಶೋಕ ಅಂಕಲಗಿ, ಯಲ್ಲಪ್ಪ ಗಸ್ತಿ ಎಂಬಾತರು ರೈತನಿಗೆ ಟ್ಯಾಕ್ಟರ್​ಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರವೊಂದರಲ್ಲಿ ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

ರೈತನಿಂದ ಟ್ಯಾಕ್ಟರ್ ಕಸಿದುಕೊಂಡು ಆಟಾಟೋಪ ನಡೆಸಿದ್ದರು ಎನ್ನಲಾಗಿದ್ದು, ರೈತ ಇವರೆಗೆ 1 ಲಕ್ಷದವರೆಗೆ ಹಣ ಕಟ್ಟಿದ್ದು, ಇನ್ನೂ 3.5ಲಕ್ಷ ರೂಪಾಯಿ ಪಾವತಿಸದಿದ್ದರೆ ನಿನ್ನ ಹೊಲ, ಮನೆ ಮಾರಿಸ್ತೀನಿ, ಹೆಂಡತಿ ಮಕ್ಕಳನ್ನ ಬಿಡೋದಿಲ್ಲ ಎಂದು ಅವಾಜ್​ ಹಾಕಿದ್ದರು ಎನ್ನಲಾಗಿದೆ.

blank

ಇದನ್ನೂ ಓದಿ: ಮೈಸೂರು ಬೆನ್ನಲ್ಲೇ ಬೆಳಗಾವಿಯಲ್ಲಿ ಮತ್ತೊಂದು ಕೇಸ್​​; ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ

ಕಳೆದ 3 ತಿಂಗಳ ಹಿಂದೆ ಸಾಲ ತೀರಿಸಿಲ್ಲ ಎಂದು ಟ್ಯಾಕ್ಟರ್ ಕಸಿದುಕೊಂಡು ಹೋಗಿರುವ ಆರೋಪಿಗಳು, ಹಣ ಕಟ್ಟುವಂತೆ ಕಿರುಕುಳ ನೀಡ್ತಿದ್ದರಂತೆ. ಇದರಿಂದ ಮನನೊಂದ ರೈತ ಮಾನಸಿಕ‌ ಹಿಂಸೆ ತಾಳಲಾಗದೇ ಫೇಸ್​ಬುಕ್​ ಲೈವ್​ನಲ್ಲಿ ವಿಷ ಸೇವನೆ ಮಾಡುತ್ತಿದ್ದೇನೆ ಎಂದು ಹೇಳಿ ವಿಷ ಸೇವಿಸಿದ್ದಾನೆ. ಲೈವ್ ವಿಡಿಯೋ ಗಮನಿಸಿದ ಕುಟುಂಬಸ್ಥರು ತಕ್ಷಣವೇ ರೈತನ ರಕ್ಷಣೆಗೆ ಧಾವಿಸಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಮೈಸೂರು ಗ್ಯಾಂಗ್ ರೇಪ್: ಪೊಲೀಸರ ‘ತಲೆದಂಡ’ದ ಸುಳಿವು ಕೊಟ್ಟ ಸರ್ಕಾರ

Source: newsfirstlive.com Source link