ಮೈಸೂರಲ್ಲಿ ಗ್ಯಾಂಗ್ ರೇಪ್.. ಮಂಗಳೂರಲ್ಲಿ ‘ERSS 112’ ಜಾಗೃತಿಗೆ ಚಾಲನೆ ಕೊಟ್ಟ ಪೂವಮ್ಮ

ಮೈಸೂರಲ್ಲಿ ಗ್ಯಾಂಗ್ ರೇಪ್.. ಮಂಗಳೂರಲ್ಲಿ ‘ERSS 112’ ಜಾಗೃತಿಗೆ ಚಾಲನೆ ಕೊಟ್ಟ ಪೂವಮ್ಮ

ದಕ್ಷಿಣಕನ್ನಡ: ಮೈಸೂರು ಗ್ಯಾಂಗ್ ರೇಪ್ ಘಟನೆ ಬಳಿಕ ಹೈ-ಅಲರ್ಟ್ ಆದ ಮಂಗಳೂರು ಪೊಲೀಸರು, ಮಹಿಳಾ ಸುರಕ್ಷತೆಗಾಗಿ ‘ERSS 112’  (Emergency Response Support System) ಕುರಿತು ಒಂದು ದಿನದ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸುತ್ತಿದೆ.

ನಗರದಲ್ಲಿ ‘ERSS 112’ ಎಮರ್ಜೆನ್ಸಿ ನಂಬರ್ ಬಳಕೆ ಮಾಡುವಂತೆ ಜಾಗೃತಿ ಕಾರ್ಯಕ್ರಮ ಆರಂಭಿಸಲಾಗಿದೆ. ಒಲಿಂಪಿಯನ್ ಎಂ.ಆರ್ ಪೂವಮ್ಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಮಹಿಳೆಯರು, ವಿದ್ಯಾರ್ಥಿನಿಯರು ತುರ್ತು ಸಂದರ್ಭದಲ್ಲಿ 112 ಬಳಕೆ ಮಾಡುವಂತೆ ಕರೆ ನೀಡಿದ್ದಾರೆ.

ಇದನ್ನೂ ಓದಿ: ಬಿಹಾರ್​ದಲ್ಲಿ ಕೊಲೆ, ಬೆಂಗಳೂರಲ್ಲಿ ಕಳ್ಳತನ; ಪೊಲೀಸ್​ ಬಲೆಗೆ ಬಿದ್ದ ಖತರ್ನಾಕ್​ ಖದೀಮರು

ಎಮರ್ಜೆನ್ಸಿ ಕರೆ ಬಂದ ಸ್ಥಳಕ್ಕೆ ಗರಿಷ್ಠ 15 ನಿಮಿಷದ ಒಳಗೆ ತಲುಪುವ ERSS ವೆಹಿಕಲ್ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ. ನಗರ ವ್ಯಾಪ್ತಿಯಲ್ಲಿ ಕರೆ ಬಂದ 5 ನಿಮಿಷದಲ್ಲಿ ಸಿಬ್ಬಂದಿ ಸ್ಥಳಕ್ಕೆ ಬರುತ್ತಾರೆ. ಹಾಗಾಗಿ ತುರ್ತು ಸಂದರ್ಭಗಳಲ್ಲಿ ‘ERSS 112’ ಹೆಚ್ಚಿನ ಬಳಕೆ ಮಾಡುವಂತೆ ನಗರಾದಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ.

ಸಾರ್ವಜನಿಕರ ಪ್ರತಿಕ್ರಿಯೆ ಬಗೆಗೆ ಪ್ರಾಯೋಗಿಕವಾಗಿ ಕರೆ ಮಾಡಿ ಚೆಕ್ ಮಾಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್, ಡಿ.ಸಿ.ಪಿ, ಸಿಬ್ಬಂದಿ ಸೇರಿದಂತೆ ‌ ಕರೆ ಬಂದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜಾಗೃತಿ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದಾರೆ. ಸದ್ಯ ನಗರದಲ್ಲಿ 20ಕ್ಕೂ ‘ERSS 112’ ಎಮರ್ಜೆನ್ಸಿ ಪೊಲೀಸ್ ವೆಹಿಕಲ್ ಬಳಕೆ ಮಾಡಲಾಗುತ್ತಿದೆ.

ಸತತ 7 ವರ್ಷಗಳಿಂದ ಹೊರ ಪ್ರಪಂಚವನ್ನೇ ಕಾಣದ ತಾಯಿ, ಮಗಳು; ಸಮಾಜ ಸೇವಕನಿಂದ ರಕ್ಷಣೆ

Source: newsfirstlive.com Source link