ಒಂದೇ ದಿನ 1 ಕೋಟಿ ಡೋಸ್​​ ಲಸಿಕೆ ನೀಡಿ ದಾಖಲೆ ಬರೆದ ಭಾರತ; ‘ಮಹತ್ವದ ಮೈಲುಗಲ್ಲು’ ಎಂದ ಬಿಲ್​ ಗೇಟ್ಸ್

ಒಂದೇ ದಿನ 1 ಕೋಟಿ ಡೋಸ್​​ ಲಸಿಕೆ ನೀಡಿ ದಾಖಲೆ ಬರೆದ ಭಾರತ; ‘ಮಹತ್ವದ ಮೈಲುಗಲ್ಲು’ ಎಂದ ಬಿಲ್​ ಗೇಟ್ಸ್

ನವದೆಹಲಿ: ಜಾಗತಿಕ ಹೆಮ್ಮಾರಿ ಕೊರೊನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರಗಳಿಗೆ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಈ ಹಿಂದೆಯ ಶ್ಲಾಘನೆ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೀಗ ಭಾರತದಲ್ಲಿ ಒಂದೇ ದಿನ 1 ಕೋಟಿ ಡೋಸ್ ಲಸಿಕೆ ನೀಡುವ ಮೂಲಕ ಹೊಸ ದಾಖಲೆ ಬರೆದ ಮೋದಿ ಸರ್ಕಾರಕ್ಕೆ ಬಿಲ್​​ ಗೇಟ್ಸ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಂದೇ ದಿನಕ್ಕೆ ಒಂದು ಕೋಟಿ ಡೋಸ್​​ ಲಸಿಕೆ ನೀಡಿ ಮಹತ್ವದ ಮೈಲುಗಲ್ಲು ಸಾಧಿಸಿದ ಭಾರತಕ್ಕೆ ಅಭಿನಂದನೆಗಳು. ಈ ಸಾಧನೆಗೆ ಕೇಂದ್ರ ಸರ್ಕಾರ, ವ್ಯಾಕ್ಸೀನ್​​ ಉತ್ಪಾದಕರು ಸೇರಿದಂತೆ ಹತ್ತಾರು ಲಕ್ಷ ಆರೋಗ್ಯ ಸಿಬ್ಬಂದಿ ಪರಿಶ್ರಮ ಕಾರಣ ಎಂದು ಶ್ಲಾಘಿಸಿ ಬಿಲ್​​ ಗೇಟ್ಸ್​ ಟ್ವೀಟ್​​ ಮಾಡಿದ್ದಾರೆ.

ಇದನ್ನೂ ಓದಿ: ಇಂದು ಒಂದು ಕೋಟಿ ಮಂದಿಗೆ ವ್ಯಾಕ್ಸಿನೇಷನ್; ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ

blank

ಆಗಸ್ಟ್​ 27ನೇ ತಾರೀಕಿನಂದು ಭಾರತದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಕೊರೊನಾ ಲಸಿಕೆ ನೀಡಲಾಗಿದೆ. ಭಾರತವು ನಿತ್ಯ ಒಂದು ಕೋಟಿ ಡೋಸ್ ಲಸಿಕೆಯನ್ನ ನೀಡಬೇಕೆಂಬ ಗುರಿ ಹಾಕಿಕೊಂಡಿದೆ. ಈ ಟಾರ್ಗೆಟ್​ ರೀಚ್​​ ಆಗಲು ಸಾಧ್ಯವೇ ಎಂಬ ಪ್ರಶ್ನೆ ಎಲ್ಲರಲ್ಲೂ ಇರುವಾಗಲೇ ನಿತ್ಯ ಒಂದು ಕೋಟಿ ಡೋಸ್ ಲಸಿಕೆ ನೀಡಲು ಸಾಧ್ಯ ಎಂಬುದನ್ನು ಭಾರತ ಸಾಧಿಸಿ ತೋರಿಸಿರುವುದು ಗಮನಾರ್ಹ.

ಇದನ್ನೂ ಓದಿ: ಇಂದು ಒಂದು ಕೋಟಿ ಮಂದಿಗೆ ವ್ಯಾಕ್ಸಿನೇಷನ್; ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ

Source: newsfirstlive.com Source link