ಅಫ್ಘಾನ್​ ಅರಾಜಕತೆ: ‘ಮುಂದೆ ಯುದ್ಧ ಆಗ್ಬೋದು’ ಅಂದ್ರು ವಿನಯ್​ ಗುರೂಜಿ

ಅಫ್ಘಾನ್​ ಅರಾಜಕತೆ: ‘ಮುಂದೆ ಯುದ್ಧ ಆಗ್ಬೋದು’ ಅಂದ್ರು ವಿನಯ್​ ಗುರೂಜಿ

ರಾಯಚೂರು: ಅಫ್ಘಾನಿಸ್ತಾನದಲ್ಲಿ ಅರಾಜಕತೆ ಕುರಿತು ಅವಧೂತ ವಿನಯ್​ ಗುರೂಜಿ ಪ್ರತಿಕ್ರಿಯೆ ನೀಡಿದ್ದು, ಪ್ರಪಂಚದ ಇತರೆ ದೇಶಗಳು ಅಫ್ಘಾನ್​ ನೆರವಿಗೆ ನಿಲ್ಲಬೇಕಾಗಿದೆ, ತಾಲಿಬಾನಿಗರು ನಾಳೆ ನಮ್ಮ ಪ್ರಧಾನಿ ಬಳಿ ಹೋದರೆ ಏನು ಮಾಡೋದು, ಈ ನಿಟ್ಟಿನಲ್ಲಿ ಉಗ್ರವಾದವನ್ನು ಮಟ್ಟಹಾಕಬೇಕು ಎಂದಿದ್ದಾರೆ.

ಇದನ್ನೂ ಓದಿ:  ಸಾಮೂಹಿಕ ಅತ್ಯಾಚಾರ: ನಮ್ಮಲ್ಲಿಯ ಕಳ್ಳರು ಪೊಲೀಸರಿಗಿಂತ ಬುದ್ಧಿವಂತರಿದ್ದಾರೆ- ವಿನಯ್​ ಗುರೂಜಿ

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾಲಿಬಾನ್​ ಅಟ್ಟಹಾಸ ಅಫ್ಘಾನಿಸ್ತಾನದಲ್ಲಿ ವಿಕೃತ ರೂಪ ತಾಳಿದೆ. ಉಳಿದೆಲ್ಲ ದೇಶಗಳು ಅಫ್ಘಾನ್​ನ ನೆರವಿಗೆ ಬಂದು ತಾಲಿಬಾನ್​ ಅನ್ನು ಮಟ್ಟ ಹಾಕಬೇಕಾಗಿದೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಯುದ್ಧ ಆಗುವ ಸಂಭವ ಇದೆ ಎನ್ನಲಾಗ್ತಿದೆ. ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳು ಪಕ್ಷಭೇದ ಮರೆತು ಒಗ್ಗಟ್ಟಾದರೆ ಈ ಉಗ್ರವಾದವನ್ನು ಮಟ್ಟ ಹಾಕಬಹುದು ಎಂದರು.

ನನಗೆ ಧಾರ್ಮಿಕವಾಗಿ ದತ್ತಾತ್ರೇಯ ಸ್ವಾಮಿ ಸಾಮಾಜಿಕವಾಗಿ ಗಾಂಧೀಜಿ ಇಷ್ಟದ ವ್ಯಕ್ತಿಗಳು, ಮತ್ತು ನನ್ನ ಗುರುಗಳು ಕೂಡ. ಶುದ್ಧ ಮನಸ್ಸಿನಿಂದ ಮಾಡಿದ ಕಾಯಕ ಶ್ರೀಮಂತಿಕೆಯತ್ತ ಕರೆದೊಯ್ಯುತ್ತದೆ ಎಂದರು.

 

Source: newsfirstlive.com Source link