‘ಕಲಬುರಗಿ ಜನ ಲೇಜಿ’ ಹೇಳಿಕೆಗೆ ಕೊನೆಗೂ ವಿಷಾದ ವ್ಯಕ್ತಪಡಿಸಿದ ಸಚಿವ ನಿರಾಣಿ

‘ಕಲಬುರಗಿ ಜನ ಲೇಜಿ’ ಹೇಳಿಕೆಗೆ ಕೊನೆಗೂ ವಿಷಾದ ವ್ಯಕ್ತಪಡಿಸಿದ ಸಚಿವ ನಿರಾಣಿ

ಕಲಬುರಗಿ: ಇತ್ತೀಚಿಗೆ ಜಿಲ್ಲೆಯ ಜನಕ್ಕೆ ನದಿ ಇದ್ರೂ ನೀರಾವರಿ ಮಾಡುವ ಹವ್ಯಾಸ ಇಲ್ಲ. ಆ ಜನ ಬಹಳ ಲೇಜಿ ಎಂದು ಹೇಳಿಕೆ ನೀಡಿದ್ದ ಸಚಿವ ಮುರುಗೇಶ್​ ನಿರಾಣಿ, ಇಂದು ಹೇಳಿಕೆ ಕುರಿತು ಕಲಬುರಗಿ ಜನತೆಯಲ್ಲಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ಆಯೊಜಿಸಿ ಮಾತನಾಡಿದ ಅವರು, ಕಲಬುರಗಿ ಜನ ಲೇಜಿ ಅನ್ನೋ ನನ್ನ ಹೇಳಿಕೆಗೆ ಸಂಬಂಧಿಸಿದಂತೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. ನಾನು ಮನಸ್ಸಿನಿಂದ ಆ ಮಾತು ಆಡಿಲ್ಲ, ಆ ಮಾತು ನನ್ನ ಬಾಯಿಂದ ಹೊರ ಬಂದಿರೋದಕ್ಕೆ ನನಗೂ ಬೇಜಾರಿದೆ. ನು ಹೇಳುವ ಆ ಉದ್ದೇಶ ಅದಾಗಿರಲಿಲ್ಲ. ಕಲಬುರಗಿಯ ಅಭಿವೃದ್ಧಿ ಆಗಬೇಕು ಅನ್ನೋ ದೃಷ್ಟಿಕೋನದಲ್ಲಿ ಹೇಳಿರೋದು ಎಂದಿದ್ದಾರೆ.

ಇದನ್ನೂ ಓದಿ: ‘ಕಲಬುರಗಿ ಜನರು ಬಹಳ ಲೇಜಿ’ ಮುರುಗೇಶ್ ನಿರಾಣಿ ವಿವಾದಾತ್ಮಕ ಹೇಳಿಕೆ

Source: newsfirstlive.com Source link