ಮಂಗನ ಕೈಯಲ್ಲಿ ಮಾಣಿಕ್ಯ! ಅಫ್ಘಾನ್​​ನಲ್ಲಿ ತಾಲಿಬಾನಿಗಳ ಕಪಿಚೇಷ್ಟೆ ಹೇಗಿದೆ ಗೊತ್ತಾ..?

ಮಂಗನ ಕೈಯಲ್ಲಿ ಮಾಣಿಕ್ಯ! ಅಫ್ಘಾನ್​​ನಲ್ಲಿ ತಾಲಿಬಾನಿಗಳ ಕಪಿಚೇಷ್ಟೆ ಹೇಗಿದೆ ಗೊತ್ತಾ..?

ಮಕ್ಕಳಿಗೆ ಹೊಸದೇನಾದರೂ ಕಂಡರೆ, ಅದೇನೋ ಉತ್ಸಾಹದಿಂದ, ಅದನ್ನೊಮ್ಮೆ ಮುಟ್ಟಿ ನೋಡಬೇಕು, ಅದರ ಜೊತೆ ಆಟವಾಡಿ ಬಿಡಬೇಕು ಅಂದುಕೊಳ್ಳೋ ಹಾಗೆ, ಅಫ್ಘಾನ್ ನೆಲದಲ್ಲಿ ತಾಲಿಬಾನಿಗಳು ಮಕ್ಕಳಂತೆ ಆಡುತ್ತಿದ್ದಾರೆ. ಇವರ ವರ್ತನೆ ನೋಡಿದರೆ, ಇವರು ನಿಜಕ್ಕೂ ದೇಶ ಆಳಲು ಕೇಳುತ್ತಿದ್ದಾರ ಅನ್ನೋ ಹಾಗಿದೆ. ಅಂತದ್ದೇನು ಮಾಡಿದರೂ ಅಂತಿರಾ ? ಏನ್ಮಾಡಿಲ್ಲ ಕೇಳಿ.. ತಾಲಿಬಾನಿಗಳ ಕಪಿ ಚೇಷ್ಟೆಗಳು ಏನೇನು?

ಕಪಿ ಚೇಷ್ಟೆಗಳು
ಆಡೋ ಮಕ್ಕಳಿಗೆ ಮದುವೆ ಮಾಡ್ಬೇಡಿ ಅನ್ನೋ ಗಾದೆ ಗೊತ್ತು ಅಲ್ವಾ ನಿಮ್ಗೆ? ಹಾಗೆ ಬುದ್ಧಿ ಇಲ್ಲದ ಜನಗಳಿಗೆ ದೇಶವನ್ನು ಕೊಡ್ಬಾರ್ದು. ಕೊಟ್ರೇ ಏನಾಗುತ್ತೆ ಅಂತ ನಿಮ್ಗೆ ಕುತೂಹಲನಾ? ಯೋಚಿಸ ಬೇಡಿ.. ಬುದ್ಧಿ ಇಲ್ಲದ ಪ್ರಜೆಗಳಿಗೆ ಸಂಪೂರ್ಣ ಸ್ವಾತಂತ್ರ ಸಿಕ್ಕಿದ್ದಿದರೇ ಏನಾಗ್ತಾ ಇತ್ತು ಅನ್ನೋದನ್ನು ಉದಾಹರಣೆ ಸಮೇತ ತೋರ್ಸಕ್ಕೆ ಅಂತಾನೇ, ತಾಲಿಬಾನಿಗಳು ನಮ್ಮ ಪಾಲಿಗೆ ಸಿಕ್ಕಿರೋದು. ಇವರಿಗೆ ನಿಜವಾಗಿಯೋ ದೇಶ ಆಳಲೂ ಬೇಕೋ ಅಥವಾ ಆಟ ಆಡಲು ಅಫ್ಘಾನ್ ನಷ್ಟು ದೊಡ್ಡ ಮೈದಾನ ಬೇಕೋ ಗೊತ್ತಿಲ್ಲ. ಆದ್ರೆ ತಾಲಿಬಾನಿ ಅನ್ನೋ ಬೋರ್ಡ್ ಹಾಕಿಕೊಂಡು ಅಫ್ಘಾನ್ ನೆಲವನ್ನು ಅಕ್ಷರಶಃ ಆಟದ ಮೈದಾನ ಮಾಡಿಕೊಂಡಿದ್ದಾರೆ.

blank

ಭಯಾನಕ ವೆಪನ್ಸ್
ಹೌದು ಕಣಮ್ಮ, ಮಾಡಿಬಿಟ್ರಿ.. ನಿಮ್ಮ ತಲೆಯಲ್ಲಿ ಏನ್ ಪ್ಲಾನ್ ಗಳಿದ್ಯೂ ಗೊತ್ತಿಲ್ಲ. ಆದ್ರೆ ಸದ್ಯಕ್ಕಂತೂ ನೀವು ಮಾಡಿದ ಎಡವಟ್ಟಿನಿಂದ ಒಂದು ದೇಶ ಪೂರ್ತಿ ಹೀಗಾಗಿದೆ ನೋಡಿ. ಇದಿಷ್ಟೆ ಅಲ್ಲ , ಅದನ್ನು ವಿಸ್ತರಿಸಲು ತಾಲಿಬಾನಿಗಳು ತುಂಬ ತಲೆ ಉಪಯೋಗಿಸುತ್ತಿದ್ದಾರೆ. ಆದ್ರೆ ಅವರ ನಡೆ ಮಾತ್ರ ದೇಶ ಕಟ್ಟವವರಲ್ಲಿ ಇರುವ ಯೋಚನೆಗಳು ಕಾಣ್ತಾನೆ ಇಲ್ಲ. ಅಂತಹದ್ದೇನು ಮಾಡಿದರು ಕೇಳಿದ್ರಾ? ಅಯ್ಯೋ ನೀವು ಈಗಾಗಲೇ ನೋಡಿದ ಹಾಗೆ ಆ ಕಪಿಮುಷ್ಟಿಗಳಲ್ಲಿ ಭಯಾನಕ ವೆಪನ್ಸ್ ಗಳಿದೆ. ಮಾತಿಗೆ ನಿಲ್ಲುವ ಮೊದಲೇ ಗುಂಡಿಗೆಗೆ ಗುಂಡು ಹಾರಿ ಬರುತ್ತೆ. ಹೀಗಿದ್ದ ಮೇಲು ತೆಪ್ಪಗೆ ಕಣ್ಣಿಗೆ ಕಾಣದ ಹಾಗೆ ಅಫ್ಘಾನಿಗಳು ಜೀವಿಸುತ್ತಿದ್ದಾರೆ.

ನೀವೆಂದಾದರೂ ಹೀಗೆ ಗಡ್ಡ ಮೀಸೆ ಬೆಳದ ಮಕ್ಕಳು ಆಡುವುದನ್ನು ನೋಡಿದ್ದಿರಾ? ಇದನ್ನೆಲ್ಲಾ ನೋಡ್ತಾ ಇದ್ರೆ ಇವರು ತಮ್ಮ ಬಾಲ್ಯವನ್ನು ಮಿಸ್ ಮಾಡ್ಕೊಂಡಿದ್ದಾರೆ ಅನ್ಸುತ್ತೆ. ನಮಗೂ ಚಿಕ್ಕ ಹುಡುಗರಿದ್ದಾಗ ಕೈಯಲ್ಲಿ ಗನ್ ಇದ್ರೆ ಚನ್ನಾಗಿರ್ತಾ ಇತ್ತು ಅನ್ಸಿತ್ತು. ಆದ್ರೆ ನಮ್ಮ ತಂದೆ ತಾಯಿ ಆಟಿಕೆ ಕೊಟ್ಟು ಸುಮ್ಮನಾಗಿಸಿದ್ದರು. ಇಲ್ಲಿ ತಾಲಿಬಾನಿಗಳನ್ನು ನೋಡಿದರೆ ಚಿಕ್ಕ ವಯಸ್ಸಿನಲ್ಲಿ ಇವರ ತಂದೆ ಆಟಕೆಗಳನ್ನು ಕೊಡ್ಸಿಲ್ಲಾ ಅನ್ಸುತ್ತೆ, ಅದಕ್ಕೆ ಬೆಳದ ಮೇಲೆ ನಿಜವಾದ ವೆಪನ್ಸ್ ಹಿಡಿದು ಆಸೆ ಪೂರೈಸಿಕೊಳ್ಳುತ್ತಿದ್ದಾರೆ ಅನ್ನೋ ಹಾಗಿದೆ. ಆ Spring jump ನಲ್ಲಿ ನೋಡಿ.. ನಿಮಗೆಲ್ಲ ನಗು ಬರ್ತಾ ಇರ್ಬೋದು.. ಆದ್ರೆ ಪಾಪ ಅವರ ಬಾಲ್ಯ ಹೇಗಿತ್ತೋ ಅನ್ಸುತ್ತೆ. ಇಂತಹ ಆಟಗಳನ್ನು ಆಡ್ಲಿ ಬಿಡ್ರಿ.. ಆದ್ರೆ ಗುರಿ ಇಡಲು ಗೊತ್ತಿಲ್ಲದೆ. ದಢಬಢ ಎನ್ನುವಂತೆ ಗುಂಡು ಹಾರಿಸಿ ಬಿಟ್ರೇ ? ಅಲ್ಲಿ ಅದೇ ಆಗ್ತಾ ಇರೋದು.

blank

ಬೆಳೆದ ಮಕ್ಕಳಿಗೆ ಆಡಲು ಆಟಿಕೆ ಸಿಕ್ಕಿಂತಾಗಿದೆ
2001ರಲ್ಲಿ ಅಫ್ಘಾನ್​ನಲ್ಲಿ ಅಮೆರಿಕ ಸೇನೆ ನೆಲೆಸಿದಾಗ, ಅಫ್ಘಾನ್ ಸರ್ಕಾರ ತಮ್ಮ ಬೆಳವಣಿಗೆಗೆ ಯೋಜನೆಗಳನ್ನು ಹಾಕಿದ್ದರು. ಅದರಂತೆ ಸಾಕಷ್ಟು ಬದಲಾವಣೆ, ಬೆಳವಣೆಗೆಗಳು ಕೂಡ ಆಗಿತ್ತು. ಆದರೆ ಇಲ್ಲಿ ತಾಲಿಬಾನಿಗಳು ಅಲ್ಲೆಲ್ಲೋ ಕೂತು ದೇಶಕ್ಕೆ ನುಗ್ಗಲು ಪ್ಲಾನ್ ಮಾಡ್ತಾ ಇದ್ದಾರೆ ಅನ್ನೋದು ನಮಗೆಲ್ಲ ಅಚ್ಚರಿಯ ವಿಷಯವೇ.. ಆದ್ರೆ ದೇಶವನ್ನು ಸಂಪೂರ್ಣವಾಗಿ ಅಫ್ಘಾನ್ ಸರ್ಕಾರಕ್ಕೆ ವಹಿಸುವ ಮೊದಲು ಅಮೆರಿಕನ್ನರಿಗೆ ಈ ವಿಷಯ ತಲೆಗೆ ಬರಲಿಲ್ವಾ ಗೊತ್ತಿಲ್ಲ. ಅಲ್ಲಿಂದ ಅಮೆರಿಕ ಸೇನೆ ಏನೋ ಹೊರಟಿತು.. ಹೋಗೋದ್ ಹೋದ್ರೂ ಅವರ ಶಸ್ತ್ರಾಸ್ತ್ರಗಳನ್ನು ಜೊತೆಗೆ ತೆಗದುಕೊಂಡು ಹೋಗೊ ಬದಲು ಅಲ್ಲೆ ಬಿಟ್ಟು ಎಡವಟ್ಟು ಮಾಡಿದರು. ಆ ಶಸ್ತ್ರಗಳಲ್ಲೆ ಅಫ್ಘಾನ್ ನಲ್ಲಿ ತಯಾರಾದ ಯೋಧರ ಪಾಲಾಗುತ್ತೆ ಅಂದ್ರೆ ಅದು ನೇರವಾಗಿ ಈ ತಾಲಿಬಾನಿಗಳ ವಶವಾಗಿದೆ. ಅಲ್ಲಿಗೆ ಗಡ್ಡ ಮೀಸೆ ಬೆಳೆದ ಮಕ್ಕಳಿಗೆ ಆಡಲು ಆಟಿಕೆ ಸಿಕ್ಕಿದಂತಾಯಿತು.

blank

ದೂರದ ಕಾಡಲ್ಲಿ ಕೋತಿಗಳು ಒಮ್ಮೆಲೇ ನಗರಕ್ಕೆ ನುಗ್ಗಿ ಸಿಕ್ಕಿ ಸಿಕ್ಕಿದನ್ನು ಹರಿದು, ಕಿತ್ತು ಹಾಕಿ, ಎಳೆದು ಹಾಳು ಮಾಡುವ ಹಾಗೆ ಇಂದು ಅಫ್ಘಾನ್ ನೆಲದಲ್ಲಿ ತಾಲಿಬಾನಿಗಳು, ಅಮೆರಿಕ ಸೇನೆ ಹೋಗಿದ್ದೆ ತಡ ಆಟವಾಡಲು ಸಿಟಿಗೆ ಬಂದಿದ್ದಾರೆ. ಈಗ ಅವರು ಏನ್ ಮಾಡಿದ್ದಾರೆ ಗೊತ್ತಾ ? ಹೇಳಿದ್ರೇ ನೀವು ನಗ್ತಿರೋ, ಶಾಕ್ ಆಗ್ತಿರೋ.. ಅಥವಾ.. ಇವರ ಬಾಳು ಇಷ್ಟೆ ಅನ್ಕೋತಿರೋ ಗೊತ್ತಿಲ್ಲ.. ಆದ್ರೆ ಹೇಳದಂತು ಹೇಳ್ತಿವಿ..

ಆಕಾಶ ಮಾರ್ಗವಾಗಿ ಯಾವುದೇ ಅಡೆ ತಡೆ ಇಲ್ಲದೆ ಹಾರಾಡಬೇಕಿದ್ದ ಹೆಲಿಕಾಪ್ಟರ್ ಹೀಗೇಕೆ ಕಾರುಗಳ ರೀತಿ ಅಲ್ಲಿಂದ ಇಲ್ಲಿಗೆ.. ಇಲ್ಲಿಂದ ಅಲ್ಲಿಗೆ ಓಡಾಡುತ್ತಿದೆ ? ಹೆಲಿಕಾಪ್ಟರ್ ಏನಾದ್ರೂ ಹಾರುವ ಸಾಮರ್ಥ್ಯ ಕಳೆದುಕೊಂಡಿದ್ಯಾ ? ಇದೇ ನಾ ನಿಮ್ಮ ಪ್ರಶ್ನೆ ? ಇಲ್ಲಿ ಹೆಲಿಕಾಪ್ಟರ್​ಗೆ ಏನೂ ಆಗಿಲ್ಲ.. ಆದರೆ ಅದನ್ನು ಚಲಾಯಿಸುತ್ತಿರುವ ಪೈಲೇಟ್​ಗೆ ಸ್ವಲ್ಪ… ಹೆಚ್ಚು ಕಮ್ಮಿಯಾಗಿದೆ.. ಅಂದ್ರೆ ತನಗೆ ಗೊತ್ತಿಲ್ಲದಿದ್ದರು ಆತ ಹೆಲಿಕಾಪ್ಟರ್ ಚಲಾಯಿಸಲು ಇಳಿದಿದ್ದಾನೆ. ಇವನು ಹೆಲಿಕಾಪ್ಟರ್ ಹತ್ತುವ ಮುಂಚೆ ತನ್ನ ತಾಲಿಬಾನಿ ಸ್ನೇಹಿತನ ಜೊತೆ ಏನ್ ಮಾತಾಡಿರ ಬಹುದು ?

blank

ತಾಲಿಬಾನಿ 1 : ದೇಶ ನಮ್ಮದಾಗಿದೆ.. ಇಲ್ಲಿರೋ ವೆಪೆನ್ಸ್ ಸಹ ನಮ್ದೆ!
ತಾಲಿಬಾನಿ 2: ಎಲ್ಲವನ್ನು ಒಮ್ಮೆ ಟ್ರೈ ಮಾಡ್ಬೇಕು.. ನಂಗೆ ಚಿಕ್ಕ ವಯಸ್ಸಿನಿಂದ ಅದನ್ನು ಓಡಿಸಬೇಕು ಅನ್ನೋ ಆಸೆ
ತಾಲಿಬಾನಿ 1 : ಏನ್ ಓಡಿಸಬೇಕು ? ಹೇಳು.. ಎಲ್ಲ ನಮ್ದೆ!
ತಾಲಿಬಾನಿ 2: ಕೈಯಲ್ಲಿ ಗನ್ ಇದೆ.., ಎಲ್ಲ ಕಾರು ಗಾಡಿ ಓಡಿಸಿದ್ದಾಯ್ತು.. ಈಗ ಅಲ್ಲಿ ಇರೋ ಹೆಲಿಕಾಪ್ಟರ್ ಒಂದು ಒಡಿಸಬೇಕು ಅನ್ನೋ ಆಸೆ..
ತಾಲಿಬಾನಿ 1: ಗುಡ್!! ನಮ್ಮಲ್ಲಿ ಯಾರು ಅದನ್ನು ಓಡಿಸುವ ದೈರ್ಯ ಮಾಡಿಲ್ಲ.. ಬಾ ನೀ ಓಡ್ಸು.. ನಾ ಇದ್ದಿನಿ.. ಒಂದು ವೇಳೆ ಚನ್ನಾಗಿ ಡ್ರೈವ್ ಮಾಡಿದ್ರೆ.. ಅಣ್ಣಾಗೆ ಹೇಳಿ ನಿನ್ನ ಪೈಲೆಟ್ ಮಾಡ್ಸತೀನಿ.. ಬನ್ನಿ ಎಲ್ಲ ಹೋಗಣ
ತಾಲಿಬಾನಿ 3: ನೀವ್ ಇಬ್ರೂ ಹೋಗಿ.. ನಾನು ವಿಡಿಯೋ ಮಾಡ್ತಿನಿ..

ಹೀಗೆ ಈ ಮಕ್ಕಳ ಆಟ ಆಗಿದ್ಯೇನೋ ಗೊತ್ತಿಲ್ಲ.. ಆದ್ರೆ ನಿಮಗೆ ಒಂದು ವಿಷಯ ಏನು ಗೊತ್ತಾ? ಅಲ್ಲಿ ಕೆಟ್ಟ ಚಾಪರ್ ನಂತೆ ಓಡಾಡುತ್ತಿರುವ ಹೆಲಿಕಾಪ್ಟರ್ ಸಾಮಾನ್ಯವಾದ ಹೆಲಿಪಾಕ್ಟರ್ ಅಲ್ಲ. ಅದರ ಇತಿಹಾಸ ಕೇಳಿದ್ರೇ ನೀವು ದಂಗ್ ಆಗ್ತಿರ.. ಅಷ್ಟಕ್ಕೂ ಯಾವುದು ಆ ಹೆಲಿಕಾಪ್ಟರ್ ಗೊತ್ತಾ ? ಅಮೆರಿಕನ್ ಪ್ರೈಡ್ ಎಂದೆ ಹೆಸರುವಾಸಿ ಆಗಿರುವ ಬ್ಲಾಕ್ ಹಾಕ್ ಯುದ್ಧ ಹೆಲಿಕಾಪ್ಟರ್..

blank

ಇಲ್ಲಿ ತಾಲಿಬಾನಿಗಳ ಕೈಯಲ್ಲಿ ಹಾರಾಡದೇ ಓಡಾಡುತ್ತಿರುವ ಈ ಹೆಲಿಕಾಪ್ಟರ್ ಸಾಮಾನ್ಯನಲ್ಲ.. ಇದು ಅಮೆರಿಕ ಸೇನೆಯಲ್ಲಿ ಮುಂಚೂಣಿಯಲ್ಲಿ ಹಾರಾಡುವ ಮಲ್ಟಿ ಮಿಷಿನರಿ ಏರ್ ಚಾಪರ್. ಇದರಲ್ಲಿ 30 ರೌಂಡ್ಸ್ ಗಳ ಶಸ್ತ್ರಗಳಿದ್ದು, ಯಾವಾಗಲೂ ಯುದ್ಧಕ್ಕೆ ಸನ್ನದ್ಧವಾಗಿರುತ್ತದೆ. ಆದರೆ ಇತ್ತಿಚೆಗೆ ರಕ್ಷಣಾ ಕಾರ್ಯಾಚರಣೆ, ಹುಡುಕಾಟಕ್ಕಾಗಿ ಅದನ್ನು ಬಳಸುತ್ತಿದ್ದಾರೆ ಅಮೆರಿಕಾ ಸೇನೆ. ಆದರೂ ಆ ಹೆಲಿಕಾಪ್ಟರ್​ನ ಸಾಮರ್ಥ್ಯ ಇನ್ನು ಕುಂದಿಲ್ಲ. ಈಗಲೂ ಯುದ್ಧಗಳಾದರೇ ಅಮೆರಿಕ ಸೇನೆಯ ಜೊತೆ ಯಾವಾಗಲೂ ಕೈಜೋಡಿಸುತ್ತೆ ಈ ಬ್ಲಾಕ್ ಹಾಕ್. ಅಷ್ಟೆ ಅಲ್ಲ ಆಲ್ ಖೈದ ನಾಯಕ ಬಿನ್ ಲ್ಯಾಡನ್ ಅನ್ನು ಹೊಡೆದುರುಳಿಸಿದ ಅಮೆರಿಕ ಸೇನೆ ಇದೇ ಹೆಲಿಕಾಪ್ಟರ್ ನಲ್ಲಿ ದಾಳಿ ಮಾಡಿತ್ತು. ಅಫ್ಘಾನ್ ಸೇನೆಯ ಶಕ್ತಿ ವೃದ್ಧಿಸಲು ಇದೆ ಹೆಲಿಕಾಪ್ಟರ್ ಅಲ್ಲಿದ್ದರೆ.. ಈಗ ಅದು ನೇರವಾಗಿ ತಾಲಿಬಾನಿಗಳ ಪಾಲಾಗಿ ಬಿಟ್ಟಿದೆ. ಇದರ ಬೆಲೆ ಎಷ್ಟು ಅನ್ನೊದು ಗೊತ್ತಾ ? 10 ಮಿಲಿಯನ್ ಡಾಲರ್ಸ್!

ಇದಿಷ್ಟೆ ಅಲ್ಲ ಅಮೆರಿಕ ತಂದಿಟ್ಟಿದ್ದ ಅದೆಷ್ಟೋ ಶಕ್ತಿಶಾಲಿ ವೆಪನ್ಸ್ ಗಳು ಈಗ ತಾಲಿಬಾನಿಗಳ ಕೈ ಸೇರಿವೆ. ಅದುವೆ ಆ ಶಸ್ತ್ರಗಳನ್ನು ಉಪಯೋಗಿಸಲು ಬರದೆ, ಯಾವುದನ್ನು ಪರಿಣಿತವಾಗದೆ ಕೈ ನಲ್ಲಿ ಹಿಡಿದು ಓಡಾಡುತ್ತಿದ್ದಾರೆ. ಇಲ್ಲಿ ನಾವು ಎರಡು ವಿಷಯಗಳನ್ನು ಪರಿಗಣಿಸಲೇ ಬೇಕು .. ಒಂದು ಈ ವೆಪಸ್ಸ್ ಗಳನ್ನು ಬಳಸಲು ಬರದೆ, ಎಡವಟ್ಟು ಮಾಡಿದರೆ ಭಾರಿ ಹಾನಿ ಆಗುವುದು.. ಇನ್ನೋಂದು ಇದನ್ನು ಬಳಸಿ ತಾಲಿಬಾನಿಗಳು ಪರಿಣಿತರಾದರೇ ? ತಮ್ಮ ಕೌರ್ಯ ಇನ್ನಷ್ಟು ಹೆಚ್ಚಾಗುವುದು. ಆದರೆ ಇಲ್ಲಿ ನಡೆಯುತ್ತಿರುವುದನ್ನು ನೋಡಿದರೆ.. ಮುಂದೆ ಏನೋ ಭೀಕರವಾದ ಸಮಸ್ಯೆ ಎದುರಾಗಲಿದೆ ಅನ್ನಿಸುತ್ತಿದೆ.
ತಾಲಿಬಾನಿಗಳು ಸರ್ಕಾರ ರಚಿಸುವ ಹಾಗೂ ಶರಿಯಾ ಕಾನೂನು ಪಾಲಿಸುವ ಹೆಸರಲ್ಲಿ ಮೊದಲು ಕಾಲಿಟ್ಟಿತ್ತು. ಆದರೆ ಇದೀಗ ಅಲ್ಲಿ ಬೇರೇನೋ ನಡಿತಾ ಇದೆ. ಸಿಕ್ಕ ಸಿಕ್ಕವರೆಲ್ಲ. ಕೈಯಲ್ಲಿ ಗನ್ಸ್ ಗಳನ್ನು ಹಿಡಿದು. ಯಾವುದೇ ಭಯವಿಲ್ಲದೆ ತಮ್ಮ ಕೌರ್ಯ ಮೆರೆಯುತ್ತಿದ್ದಾರೆ. ಗನ್ ಹಿಡಿದು ಗುರಿ ಇಲ್ಲದಿದ್ದರು ಒಂದೆ ಸಮನೆ ಸಿಡಿಸಿದರೇ ಒಂದಾದರೂ ಗುರಿ ತಲುಪ ಬಹುದು ಅಂದುಕೊಳ್ಳ ಬಹುದು.. ಆದರೆ ಒಂದು ಸೇನಾ ವಿಮಾನ.. ಅದರಲ್ಲಿ ಇರುವ ಸ್ಪೆಸಿಫಿಕೇಷನ್ ಒಬ್ಬ ನುರಿತ ಪೈಲಟ್ ಕಲಿತಿರುತ್ತಾನೆ. ಆದರೆ ಅದನ್ನು ಆಟಿಕೆಯಂತೆ ಉಪಯೋಗಿಸುತ್ತಿರುವ ತಾಲಿಬಾನಿಗಳು, ಮುಂದೇನು ಅನಾಹುತ ಮಾಡಿಬಿಡುತ್ತಾರೋ ಅನ್ನೋದನ್ನು ವಿಶ್ವದ ಬಲೀಷ್ಟರು ಎಚ್ಚರಿಕೆ ವಹಿಸಿ ನೋಡಬೇಕು.

 

ಎಲ್ಲ ರಾಷ್ಟ್ರಗಳಿಗೂ ಕುತ್ತು..?
ಈ ತಾಲಿಬಾನಿಗಳು ಇರುವ ಸೌಕರ್ಯಗಳನ್ನು ಸರಿಯಾಗಿ ಬಳಸಿಕೊಳ್ಳದೆ ಒಂದೊಂದೇ ಎಡವಟ್ಟಿನ ಹೆಜ್ಜೆಗಳನ್ನು ಇಡುತ್ತಲೇ ಇದ್ದಾರೆ.. ಇದೀಗ ಅಮೆರಿಕಾ ಸೇನೆಯ ಹೆಲಿಕಾಪ್ಟರ್​ನಲ್ಲಿ ಕೂತು ಮಕ್ಕಳಾಟ. ಇದನೆಲ್ಲ ನೋಡುತ್ತಿದ್ದರೆ.. ಇದಕ್ಕೆ ಕಾರಣರಾದ ಬಲಿಷ್ಟರು ಗಮನ ಹರಿಸಬೇಕು.. ಇದು ಕೇವಲ ಅಫ್ಘಾನ್ ನಾಡಿಗೆ ಸೀಮಿತ ಎಂದು ಕಣ್ಣು ಮುಚ್ಚಿ ಕುಳಿತರೇ ಮುಂದಾಗುವ ಅನಾಹುತಕ್ಕೆ ನಾಂದಿ ಹಾಡಿದಂತೆ. ಅಫ್ಘಾನ್ ನೆಲದಲ್ಲಿ ನಡೆಯುತ್ತಿರುವ ಅಟ್ಟಹಾಸ ಮುಂದೆ ಎಲ್ಲ ರಾಷ್ಟ್ರಗಳಿಗೂ ಕುತ್ತು ಆಗಬಹುದು. ಆದಷ್ಟು ಬೇಗ., ಸೂಕ್ತ ನಿರ್ಧಾರಗಳನ್ನು ಪಡೆದು ಅಲ್ಲಿನ ಕಪಿ ನರ್ತನಕ್ಕೆ ಈಗಲೇ ಅಂತ್ಯ ಹಾಡಿದರೇ ಅಫ್ಘಾನಿಗಳೀಗೂ.. ಹಾಗೂ ಎಲ್ಲರಿಗೂ ಒಳ್ಳೆಯದು.

blank

ಒಂದು ಕಡೆ ಉಗ್ರ ನಾಯಕರು ಬಲವಾದ ವಾರ್ನಿಂಗ್ ಗಳನ್ನು ಕೊಡುತ್ತಿದ್ದರೆ, ಮತ್ತೊಂದು ಕಡೆ ಅಫ್ಘಾನ್ ಸಿಕ್ಕ ಖುಷಿಗೆ ತಾಲಿಬಾನಿಗಳು ಕೌರ್ಯದ ಜೊತೆ ದಡ್ಡತನದಲ್ಲಿ ಮೆರೆಯುತ್ತಿದ್ದಾರೆ. ಇದು ಅವರದ್ದೇ ಅಂತ್ಯವೋ ಅಥವಾ ವಿಶ್ವಕ್ಕೆ ಕುತ್ತೋ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲ.

Source: newsfirstlive.com Source link