ಹು-ಧಾ ಪಾಲಿಕೆ ಚುನಾವಣೆ: ಅಕ್ರಮವಾಗಿ ಸಾಗಿಸುತ್ತಿದ್ದ ₹82.75 ಲಕ್ಷ ಹಣ ಜಫ್ತಿ..!

ಹು-ಧಾ ಪಾಲಿಕೆ ಚುನಾವಣೆ: ಅಕ್ರಮವಾಗಿ ಸಾಗಿಸುತ್ತಿದ್ದ ₹82.75 ಲಕ್ಷ ಹಣ ಜಫ್ತಿ..!

ಧಾರವಾಡ: ಅವಳಿ ನಗರದಲ್ಲಿ ಪಾಲಿಕೆ ಚುನಾವಣೆ ಹಿನ್ನೆಲ್ಲೆ ಎಲ್ಲೆಂದರಲ್ಲಿ ಕುರುಡು ಕಾಂಚಾಣದ ಹಾವಳಿ ಜೋರಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಕಾವು ಪಡೆದುಕೊಳ್ಳುತ್ತಿದೆ. ಇದರ ನಡುವೆ ಮತದಾರರನ್ನು ಸೆಳೆಯಲು ಪ್ರಮುಖ‌ ಪಕ್ಷಗಳು ಹಣ ಹಂಚಿಕೆ ಮಾಡುತ್ತಿವೆ ಎಂಬ, ಆರೋಪ ಕೇಳಿ ಬಂದ ಬೆನ್ನಲ್ಲೇ ಸಾಕ್ಷ್ಯ ಎಂಬಂತೆ 82.75 ಲಕ್ಷ ರೂಪಾಯಿ ಅಕ್ರಮ ಹಣವನ್ನು ಪೊಲೀಸರು ಜಫ್ತಿ ಮಾಡಿದ್ದಾರೆ.

ಇದನ್ನೂ ಓದಿ: ಕೂಲಿ ಕೆಲಸದತ್ತ ಮುಖ ಮಾಡಿದ ಮಕ್ಕಳು -ಬಳ್ಳಾರಿಯಲ್ಲಿ ಡಂಗೂರ ಸಾರಿ ಪೋಷಕರಿಗೆ ಎಚ್ಚರಿಕೆ

ಹೌದು ಸ್ವಿಪ್ಟ್ ಡಿಜೈರ್ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 82.75 ಲಕ್ಷ ರೂಪಾಯಿಗಳನ್ನು ಕೇಶ್ವಾಪುರ ಠಾಣೆ ಪೊಲೀಸರು ನಿನ್ನೆ ರಾತ್ರಿ ವಶಪಡಿಸಿಕೊಂಡಿದ್ದಾರೆ. ಅಕ್ರಮ ಹಣ ಸಾಗಣೆಯ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಇಲ್ಲಿನ ಕುಸುಗಲ್ ರಸ್ತೆಯ, ಆಕ್ಸಫರ್ಡ್ ಕಾಲೇಜ್ ಬಳಿ ನಗರಕ್ಕೆ ಬರುತ್ತಿದ್ದ ಸ್ವಿಪ್ಟ್ ಡಿಜೈರ್​ ಕಾರನ್ನ ತಡೆದು ಪರಿಶೀಲಿಸಿದಾಗ ಹಣ ಸಾಗಿಸುತ್ತಿರುವುದು ಪತ್ತೆಯಾಗಿದ್ದು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮೂಲತಃ ರಾಜಸ್ಥಾನ ಮೂಲದ ಸದ್ಯ ಬಾಗಲಕೋಟೆಯಲ್ಲಿ ವಾಸಿಸುತ್ತಿರುವ ಗೋಕುಲರಾಮ ವೀರಾಮಾರಾಮ ರಬಾರಿ(34) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಇನ್ನು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲೇ ಭಾರಿ ಮೊತ್ತದ ‌ ಹಣ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

 ಇದನ್ನೂ ಓದಿ: ಮೈಸೂರು ಕೇಸ್​​: ಸಂಬಂಧಿಕರ ಮನೆಯಲ್ಲಿ ಅವಿತಿದ್ದರಂತೆ ಶಂಕಿತರು.. ಹೇಗಿತ್ತು ಪೊಲೀಸ್ ಬೇಟೆ?

Source: newsfirstlive.com Source link