ಗ್ಯಾಂಗ್ ರೇಪ್​ ಕೇಸ್​ನ ಓರ್ವ ಆರೋಪಿ ಮೇಲೆ ಪ್ರಿಯತಮೆಯ ತಂದೆಯನ್ನೇ ಕೊಂದ ಆರೋಪ..!

ಗ್ಯಾಂಗ್ ರೇಪ್​ ಕೇಸ್​ನ ಓರ್ವ ಆರೋಪಿ ಮೇಲೆ ಪ್ರಿಯತಮೆಯ ತಂದೆಯನ್ನೇ ಕೊಂದ ಆರೋಪ..!

ಮೈಸೂರು: ಗ್ಯಾಂಗ್​ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನ ತನಿಖಾಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತ ಐವರಲ್ಲಿ ಕೆಲವರು ಕ್ರಿಮಿನಲ್​ ಹಿನ್ನೆಲೆಯುಳ್ಳವರು ಅನ್ನೋ ಮಾಹಿತಿ ತಿಳಿದುಬಂದಿದೆ. ಅದರಲ್ಲೂ ಓರ್ವ ಕೊಲೆ ಆರೋಪಿಯಾಗಿದ್ದಾನೆ ಅಂತಾ ಹೇಳಲಾಗಿದೆ. ಪ್ರೀತಿಸಿದ ಹುಡುಗಿಯನ್ನ ಮದುವೆ ಮಾಡಿಕೊಡದಿದ್ದಾಗ ಹುಡುಗಿಯ ತಂದೆಯನ್ನೇ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ರೇಪ್ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ನಡೆಸುತ್ತಿರುವಾಗ ಈ ಮಾಹಿತಿ ಲಭ್ಯವಾಗಿದೆ. ತನಿಖೆಯನ್ನ ಮತ್ತಷ್ಟು ತೀವ್ರಗೊಳಿಸಿರುವ ಪೊಲೀಸರು ಆರೋಪಿಗಳ ಹಿನ್ನೆಲೆಯನ್ನ ಮತ್ತಷ್ಟು ಕೆದಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮೈಸೂರು: ಅತ್ಯಾಚಾರ ಪ್ರಕರಣ ಭೇದಿಸಲು ಫೀಲ್ಡಿಗೆ ಇಳಿದಿದ್ದ 26 ಕ್ರೈಂ ಎಕ್ಸ್​​ಪರ್ಟ್​ಗಳು

Source: newsfirstlive.com Source link