ಸಚಿವೆಯಾದರೂ ಹೆಣ್ಣು ಹೆಣ್ಣೇ ಅಲ್ವಾ? ಅವರ ಮನೆಯಲ್ಲೇ ಹಾಗಾದ್ರೆ?: ಹೆಚ್.ಎಂ.ರೇವಣ್ಣ

ಬೆಂಗಳೂರು: ಆ ಹೆಣ್ಣು ಮಗಳು ಶೋಭಾ ಕರಂದ್ಲಾಜೆ ನಾನು ಕೇಂದ್ರ ಸಚಿವೆ ಮೈಸೂರು ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಲ್ಲ ಅಂತಾರೆ. ಸಚಿವೆ ಆದರೂ ಹೆಣ್ಣು ಹೆಣ್ಣೇ ಅಲ್ವಾ? ಅವರ ಮನೆಯಲ್ಲೇ ಆದರೆ ನಮ್ಮ ಮನೆಯಲ್ಲಿ ಆದರೆ ಹೀಗೆ ಮಾತಾಡೋದ? ಎಂದು ಮಾಜಿ ಸಚಿವ ಹೆಚ್.ಎಂ. ರೇವಣ್ಣ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಹರಿಹಾಯ್ದಿದ್ದಾರೆ.  ಇದನ್ನೂ ಓದಿ: ಬಿಯರ್ ಬಾಟ್ಲಿ, ಬಸ್ ಟಿಕೆಟ್ ಆಧರಿಸಿ ಅತ್ಯಾಚಾರಿಗಳ ಬಂಧನ

ಮೈಸೂರು ಅತ್ಯಾಚಾರ ಪ್ರಕರಣದ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ಸದಸ್ಯರು ಆಗಿರುವ ರೇವಣ್ಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದ ಬಳಿ ಮಾತನಾಡಿದರು. ವೈದ್ಯರು ಅತ್ಯಾಚಾರ ನಡೆದಿದೆ ಅಂತಾರೆ. ಪೊಲೀಸರು ದರೋಡೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಘಟನೆ 7-30 ರಿಂದ 9 ಗಂಟೆ ನಡುವೆ ನಡೆದಿದೆ. 10 ಗಂಟೆಗೆ ಆಸ್ಪತ್ರೆಗೆ ಹೋಗಿದ್ದಾರೆ. 10-45 ಕ್ಕೆ ಪೊಲೀಸರ ಗಮನಕ್ಕೆ ಬಂದರೂ ಕೇಸ್ ದಾಖಲಿಸಲು ತಡ ಮಾಡಿದ್ದಾರೆ. ಪೊಲೀಸರ ಮೇಲೆ ಸರ್ಕಾರ ಒತ್ತಡ ತಂದಿದೆ. ಮೈಸೂರಿನಂತ ನಗರದಲ್ಲಿ ಅತ್ಯಾಚಾರ ಆಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಆಯ್ತು ಅಂತ ಕೆಟ್ಟ ಹೆಸರು ಬರಬಾರದು ಅಂತ ಸರ್ಕಾರ ಪೊಲೀಸರ ಮೇಲೆ ಒತ್ತಡ ತಂದು ಕೇಸು ದಾಖಲಿಸಲು ತಡ ಮಾಡಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣ- ಆರೋಪಿಗಳನ್ನು ಬಂಧಿಸಿದ ಪೊಲೀಸರ ತಂಡಕ್ಕೆ 5 ಲಕ್ಷ ರೂ. ಬಹುಮಾನ

ಅತ್ಯಾಚಾರ ನಡೆದಿದ್ದು, ರಕ್ತಸ್ರಾವ ಆಗಿದೆ. ಮೈಮೇಲೆ ಸಾಕಷ್ಟು ಗಾಯ ಆಗಿದೆ. ಮಹಿಳಾ ವೈದ್ಯತೇ ಬಂದು ಅತ್ಯಾಚಾರ ಆಗಿದೆ ಅಂತ ಹೇಳಿದ್ರೂ ಪೊಲೀಸರ ಮೇಲೆ ಒತ್ತಡ ತಂದು ದರೋಡೆ ಪ್ರಕರಣ ದಾಖಲಿಸಲು ಮುಂದಾಗಿದ್ದರು. ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಮೈಸೂರು ಭೇಟಿ ಸಂದರ್ಭದಲ್ಲಿ ಇದು ನಮಗೆ ಗೊತ್ತಾಗಿದೆ. ಇಡೀ ಪ್ರಕರಣದಲ್ಲಿ ಪೊಲೀಸರ ವೈಫಲ್ಯ ಇದೆ. ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ಹೆಚ್.ಎಂ.ರೇವಣ್ಣ ಆಗ್ರಹಿಸಿದರು. ಇದನ್ನೂ ಓದಿ: ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾ

Source: publictv.in Source link