ರಸ್ತೆ ಬದಿ ಕೂತು ತರಕಾರಿ ಮಾರಾಟ ಮಾಡಿದ IAS ಅಧಿಕಾರಿ..!

ರಸ್ತೆ ಬದಿ ಕೂತು ತರಕಾರಿ ಮಾರಾಟ ಮಾಡಿದ IAS ಅಧಿಕಾರಿ..!

ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯೊಬ್ಬರು ಮಾರುಕಟ್ಟೆಯಲ್ಲಿ ತರಕಾರಿ ಮಾರುತ್ತಿರುವ ದೃಶ್ಯಗಳು ಸಖತ್​ ವೈರಲ್​ ಆಗಿದೆ. ಉತ್ತರ ಪ್ರದೇಶ ಸಾರಿಗೆ ವಿಭಾಗದ ವಿಶೇಷ ಅಧಿಕಾರಿಯಾಗಿರುವ ಅಖಿಲೇಶ್ ಮಿಶ್ರಾ ಅವರು ಪ್ರಯಾಗ್​ರಾಜ್​​ನಲ್ಲಿ ತರಕಾರಿ ಮಾರುತ್ತಾ ಕೂತಿದ್ದಾರೆ!

ರಸ್ತೆ ಬದಿಯ ಅಂಗಡಿಯಲ್ಲಿ ಐಎಎಸ್ ಅಧಿಕಾರಿಯೊಬ್ಬರು ತರಕಾರಿ ಮಾರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವೈರಲ್ ಚಿತ್ರವು ನೆಟ್ಟಿಗರನ್ನು ಸಾಕಷ್ಟು ಕೂತುಹಲಕ್ಕೆ ತಳ್ಳಿದೆ. ಐಎಎಸ್ ಅಧಿಕಾರಿ ರಸ್ತೆಯಲ್ಲಿ ತರಕಾರಿ ಮಾರಾಟ ಮಾಡಲು ಕಾರಣವೇನು ಎಂಬ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಷ್ಟೇ ಅಲ್ಲದೆ ಸ್ವತಃ ಅಧಿಕಾರಿ ತರಕಾರಿ ಮಾರಾಟ ಮಾಡುವ ದೃಶ್ಯಗಳನ್ನು ಫೇಸ್​ಬುಕ್​ನ ಸ್ಟೋರಿಯಲ್ಲಿ ಕೂಡ ಅಪ್​ಲೋಡ್​ ಮಾಡಿದ್ದಾರೆ.

blank

ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಜೋರಾದ ಚರ್ಚೆ ಶುರುವಾದ ಬೆನ್ನಲ್ಲೆ ಜನ ತಮ್ಮದೇ ಆದ ಕತೆಗಳನ್ನು ಕಟ್ಟಲಾರಂಭಿಸಿದರು. ಏನು ಕತೆ, ಯಾಕೆ ಹೀಗೆ, ನಮ್ಮಿಂದ ಏನಾದರೂ ಸಹಾಯ ಬೇಕಿತ್ತಾ ಅಂತ ಕೇಳಿದರು. ಕೆಲವರು ಪೋಟೋಗಳನ್ನು ಮಾರ್ಫ್ ಮಾಡಲಾಗಿದೆ, ಎಂದು ನಾನಾ ಥರದ ಕಥೆಗಳು ಹುಟ್ಟಿಕೊಳ್ಳಲು ಆರಂಭವಾದ್ವಂತೆ.

ಇದನ್ನೂ ಓದಿ:  ಪಬ್​ಜಿಗಾಗಿ ತಂದೆಯ ಅಕೌಂಟ್​​ನಿಂದ 10 ಲಕ್ಷ ಡ್ರಾ ಮಾಡಿ, ಮನೆ ಬಿಟ್ಟ 16 ವರ್ಷದ ಬಾಲಕ

ವಿಷಯಕೈ ಮೀರಿ ಹೋಗುತ್ತಿದೆ ಎಂದುಕೊಂಡ ಮಿಶ್ರಾ ಜನರ ಪ್ರಶ್ನೆಗೆ ಉತ್ತರಿಸಲು ಮುಂದಾಗಿದ್ದಾರೆ. ವೈರಲ್​ ಚಿತ್ರದಲ್ಲಿರೋದು ನಾನೆ ಎಂದು ಸ್ಪಷ್ಟ ಪಡಿಸಿದ್ದಾರೆ. ನಂತರ ಸನ್ನಿವೇಶಕ್ಕೆ ಕಾರಣವಾದ ಸಂದರ್ಭವನ್ನು ತಿಳಿಸಿದ್ದಾರೆ. ಈ ಕುರಿತು ಬರೆದುಕೊಂಡಿರುವ ಅವರು, ಕೆಲವು ಅಧಿಕೃತ ಕೆಲಸಗಳಿಗಾಗಿ ನಾನು ಪ್ರಯಾಗರಾಜ್‌ಗೆ ಭೇಟಿ ನೀಡಿದ್ದೆ. ವಾಪಸ್ಸಾಗುವಾಗ ರಸ್ತೆ ಬದಿಯ ಅಂಗಡಿಯಲ್ಲಿ ತಾಜಾ ತರಕಾರಿಗಳು ಕಾಣಿಸಿದವು. ತರಕಾರಿ ಕೊಳ್ಳುವ ಉದ್ದೇಶದಿಂದ ಅಂಗಡಿಗೆ ಹೋದಾಗ, ಅಗಂಡಿಯಲ್ಲಿದ್ದ ಹೆಣ್ಣು ಮಗಳು ತನ್ನ ಮಗು ಆಟವಾಡುತ್ತ ಬಹಳ ದೂರ ಹೋಗಿಬಿಟ್ಟಿದೆ. ಮಗುವನ್ನು ಕರೆತರುವವರೆಗೆ ಅಂಗಡಿ ನೋಡಿಕೊಳ್ಳಿ ಅಂತ ನನಗೆ ಹೇಳಿ ಹೊರಟು ಹೋದಳು.

ಇದನ್ನೂ ಓದಿ: ಪಬ್​ಜಿ ರೀತಿ ಆಟದಲ್ಲಿ ನಿರಂತರ ಸೋಲಿಸುತ್ತಿದ್ದ ಸ್ನೇಹಿತನನ್ನೇ ಹತ್ಯೆ ಗೈದ ಬಾಲಕ

ಕೆಲವು ಸಮಯದ ಬಳಿಕ ಆಕೆ ಕೂತಿದ್ದ ಜಾಗದಲ್ಲಿ ನಾನು ಕುಳಿತ ತಕ್ಷಣವೇ ಗ್ರಾಹಕರು ವ್ಯಾಪಾರಕ್ಕೆಂದು ಅಲ್ಲಿಗೆ ಬಂದರು. ಈ ನಡುವೆ ನನ್ನ ಸ್ನೇಹಿತರೊಬ್ಬರು ನನ್ನ ಫೋನ್ ತೆಗೆದುಕೊಂಡು ಫೋಟೋಗಳನ್ನು ಕ್ಲಿಕ್ಕಿಸಿ ನನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಇದನ್ನೂ ಓದಿ: ‘ಪಬ್ ಜಿ’ ಮಾದರಿಯ ಹಿಂಸಾತ್ಮಕ ಆನ್​ಲೈನ್ ಗೇಮ್​ಗಳನ್ನು ನಿಷೇಧಿಸಿ- ಸರ್ಕಾರಕ್ಕೆ ಖಾದರ್ ಒತ್ತಾಯ

 

Source: newsfirstlive.com Source link