ಲೀಡ್ಸ್‌ ಟೆಸ್ಟ್‌: ಇಂಗ್ಲೆಂಡ್​​​ ವಿರುದ್ಧ ಟೀಂ ಇಂಡಿಯಾಗೆ 76 ರನ್‌ಗಳ ಇನಿಂಗ್ಸ್‌ ಸೋಲು..

ಲೀಡ್ಸ್‌ ಟೆಸ್ಟ್‌: ಇಂಗ್ಲೆಂಡ್​​​ ವಿರುದ್ಧ ಟೀಂ ಇಂಡಿಯಾಗೆ 76 ರನ್‌ಗಳ ಇನಿಂಗ್ಸ್‌ ಸೋಲು..

ಇಂಗ್ಲೆಂಡ್​ ವಿರುದ್ಧದ 3ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಮುಗ್ಗರಿಸಿದೆ. ಲೀಡ್ಸ್​​ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್​​ ಹಾಗೂ 76 ರನ್​ಗಳ ಅಂತರದಿಂದ ಸೋಲುಂಡಿದೆ. ಇದರೊಂದಿಗೆ 5 ಪಂದ್ಯಗಳ ಟೆಸ್ಟ್​ ಸರಣಿ 1-1 ಅಂತರದಲ್ಲಿ ಸಮಭಲಗೊಂಡಿದೆ.

3ನೇ ದಿನದಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಟೀಮ್​ ಇಂಡಿಯಾ ಬ್ಯಾಟಿಂಗ್​ ವಿಭಾಗ 4ನೇ ದಿನದಾಟದಲ್ಲಿ ಇಂಗ್ಲೆಂಡ್​ ಬೌಲರ್​​ಗಳ ಕರಾರುವಕ್​ ದಾಳಿಗೆ ತತ್ತರಿಸಿತು. 2 ವಿಕೆಟ್​​ ನಷ್ಟಕ್ಕೆ 215 ರನ್​ಗಳೊಂದಿಗೆ 4ನೇ ದಿನದಾಟ ಆರಂಭಿಸಿದ ಭಾರತ ಮೊದಲ ಸೆಷನ್​ನಲ್ಲೇ 8 ವಿಕೆಟ್​ ಕಳೆದುಕೊಂಡಿತು. ಇದರೊಂದಿಗೆ ದ್ವಿತೀಯ ಇನ್ನಿಂಗ್ಸ್​ನಲ್ಲಿ 278 ರನ್​ಗಳಿಗೆ ಆಲೌಟ್​​ ಆಯ್ತು.

ಇದನ್ನೂ ಓದಿ: ಲೀಡ್ಸ್​ನಲ್ಲಿ ತಪ್ಪಿದ ಲೆಕ್ಕಚಾರ: ಕೋಚ್, ಕ್ಯಾಪ್ಟನ್ ಮತ್ತು ಬೌಲರ್​​ಗಳ ಲೆಕ್ಕಾಚಾರ ಉಲ್ಟಾ ಆಗಿದ್ದೆಲ್ಲಿ..?

Source: newsfirstlive.com Source link