ಅಕ್ರಮ ಹಣ ವರ್ಗಾವಣೆ ಕೇಸ್​​; ಮಮತಾ ಸೋದರಳಿಯ​ ಅಭಿಷೇಕ್ ಬ್ಯಾನರ್ಜಿಗೆ ED ಸಮನ್ಸ್

ಅಕ್ರಮ ಹಣ ವರ್ಗಾವಣೆ ಕೇಸ್​​; ಮಮತಾ ಸೋದರಳಿಯ​ ಅಭಿಷೇಕ್ ಬ್ಯಾನರ್ಜಿಗೆ ED ಸಮನ್ಸ್

ಕೋಲ್ಕತ್ತಾ: ಕಲ್ಲಿದ್ದಲು ಹಗರಣ ಸಂಬಂಧ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಹೊತ್ತ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ ತೃಣಮೂಲ ಕಾಂಗ್ರೆಸ್​ ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತವರ ಪತ್ನಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್​ ನೀಡಿದೆ. ಇಬ್ಬರಿಗೂ ED ಅಧಿಕಾರಿಗಳು ವಿಚಾರಣೆ ಹಾಜರಾಗುವಂತೆ ಸಮನ್ಸ್​ ಜಾರಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದ ಸಂಸದ ಮತ್ತು ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಗೆ ಮುಂದಿನ ವಾರ ಸೆಪ್ಟೆಂಬರ್​​​​ 6ನೇ ತಾರೀಕು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಲಾಗಿದೆ. ಇವರ ಪತ್ನಿಗೂ ಪ್ರಕರಣ ಸಂಬಂಧ ತನಿಖಾ ಅಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗಿ ಎಂದು ಸಮನ್ಸ್​ ಕೊಡಲಾಗಿದೆ.

ಕಳೆದ ವರ್ಷ 2020 ನವೆಂಬರ್​​ ತಿಂಗಳಿನಲ್ಲಿ ಈಸ್ಟರ್ನ್​​​​ ಕೋಲ್​​ ಫೀಲ್ಡ್​ ಲಿಮಿಟೆಡ್ ಗಣಿಗಳಿಗೆ ಸಂಬಂಧ ಬಹುಕೋಟಿ ಕಲ್ಲಿದ್ದಲು ಹಗರಣದಲ್ಲಿ ಅಭಿಷೇಕ್​​​ ಬ್ಯಾನರ್ಜಿ ಕೇಳಿ ಬಂದಿತ್ತು. ಅಭಿಷೇಕ್​​​ ಬ್ಯಾನರ್ಜಿ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಎಫ್‌ಐಆರ್ ದಾಖಲಿಸಿತ್ತು. ಜತೆಗೆ ಮನಿಲಾಂಡರಿಂಗ್​​​ ಕೇಸ್​​ ಕೂಡ ದಾಖಲಾಗಿತ್ತು.

ಇದನ್ನೂ ಓದಿ: ‘ಭಾರತದ ಆಸ್ತಿ ಮೋದಿಗೆ ಸೇರಿದ್ದಲ್ಲ, ಸಾರ್ವಜನಿಕರದ್ದು’; ಸಿಎಂ ಮಮತಾ ಬ್ಯಾನರ್ಜಿ ಕಿಡಿ

Source: newsfirstlive.com Source link