ಹರಿಯಾಣದಲ್ಲಿ ರೈತರ ಮೇಲೆ ಲಾಠಿ ಚಾರ್ಜ್; 10 ಅನ್ನದಾತರಿಗೆ ಗಾಯ

ಹರಿಯಾಣದಲ್ಲಿ ರೈತರ ಮೇಲೆ ಲಾಠಿ ಚಾರ್ಜ್; 10 ಅನ್ನದಾತರಿಗೆ ಗಾಯ

ಕರ್ನಾಲ್​: ಬಿಜೆಪಿ ಸಭೆಯ ವಿರುದ್ಧ ಪ್ರತಿಭಟಿಸಲು ಕರ್ನಾಲ್ ಕಡೆಗೆ ತೆರಳುತ್ತಿದ್ದ ರೈತರ ಗುಂಪಿಗೆ ಪೊಲೀಸ್ರು ಲಾಠಿ ಚಾರ್ಜ್​ ನಡೆಸಿದ ಪರಿಣಾಮ 10 ಜನ ರೈತರು ಗಾಯಗೊಂಡಿದ್ದಾರೆ.

ಹರಿಯಾಣದ ಮುಖ್ಯಮಂತ್ರಿ, ಮನೋಹರ್ ಲಾಲ್ ಖಟ್ಟರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಒಪಿ ಧಂಕರ್ ರಾಜ್ಯ ಮಟ್ಟದ ಸಭೆಯೊಂದರಲ್ಲಿ ಭಾಗವಹಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಕೆಯು (ಭಾರತೀಯ ಕಿಸಾನ್​ ಯೂನಿಯನ್​)  ಪ್ರತಿಭಟನೆಗೆ ಮುಂದಾಗಿತ್ತು. ಈ ವೇಳೆ ರೈತರನ್ನ ತಡೆಯಲು ಪೊಲೀಸ್ರು ಲಾಠಿ ಚಾರ್ಜ್ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ನಂತರ ಬಸ್ತಾರಾ ಟೋಲ್ ಪ್ಲಾಜಾದಲ್ಲಿ ಪೋಲಿಸ್ ಲಾಠಿಚಾರ್ಜ್ ಮಾಡಿದ ವಿರುದ್ಧ ಪ್ರತಿಭಟಿಸಲು ರೈತರು ಜಲಮಾನ, ಅಸ್ಸಂಧ್ ಮತ್ತು ನಿಸ್ಸಿಂಗ್​ ರಸ್ತೆಗಳನ್ನು ತಡೆದು ಪ್ರತಿಭಟಿಸಿದ್ದಾರೆ. ಆದ್ರೆ, ಬಸ್ತಾರಾ ಟೋಲ್ ಪ್ಲಾಜಾದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಸಿಎಂ ಕಾರ್ಯಕ್ರಮದ ವಿರುದ್ಧ ಪ್ರತಿಭಟಿಸಲು ರೈತರು, ಕರ್ನಾಲ್​ಗೆ ಹೋಗಲು ಹಠ ಹಿಡಿದಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಟೋಲ್ ಪ್ಲಾಜಾಗೆ ಐಜಿ ಮಮತಾ ಸಿಂಗ್ ಗಮಿಸಿ ಪರಿಸ್ಥಿತಿಯನ್ನ ತಿಳಿಗೊಳಿಸಿದ್ದಾರೆ ಅಂತಾ ವರದಿಯಾಗಿದೆ.

Source: newsfirstlive.com Source link