ಒಳ್ಳೆ ಹುಡುಗ ಮೀಟ್ಸ್​ ಡ್ರೋಣ್ ಬಾಯ್..! ‘ಇನ್ಮೇಲೆ ಪ್ರತಾಪ್ ನನ್ನ ತಮ್ಮ’ ಎಂದ ಪ್ರಥಮ್

ಒಳ್ಳೆ ಹುಡುಗ ಮೀಟ್ಸ್​ ಡ್ರೋಣ್ ಬಾಯ್..! ‘ಇನ್ಮೇಲೆ ಪ್ರತಾಪ್ ನನ್ನ ತಮ್ಮ’ ಎಂದ ಪ್ರಥಮ್

ಒಳ್ಳೆ ಹುಡುಗ ಪ್ರಥಮ್.. ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಸಖತ್ ಆ್ಯಕ್ಟೀವ್ ಆಗಿರ್ತಾರೆ. ಕೆಲವೊಂದು ಪೋಸ್ಟ್​ಗಳನ್ನ ಮಾಡುತ್ತ ತಮ್ಮ ಅಭಿಮಾನಿಗಳಿಗೆ ಹತ್ತಿರ ಇರುವ ಪ್ರಯತ್ನವನ್ನ ಮಾಡ್ತಾನೇ ಇರ್ರೆತಾರೆ. ಅಚ್ಚರಿಯ ಬೆಳವಣಿಗೆ ಒಂದರಲ್ಲಿ ಪ್ರಥಮ್ ಅವರು ಇಂದು ಮಾಡಿರುವ ಪೋಸ್ಟ್​ ಒಂದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಅದೇನಪ್ಪ ಅಂದ್ರೆ ಪ್ರಥಮ್ ಅವರು ಡ್ರೋಣ್ ಪ್ರತಾಪ್​ರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಭೇಟಿ ಮಾಡಿರುವ ಖುಷಿಯಲ್ಲಿರುವ ಪ್ರಥಮ್ ಒಂದಿಷ್ಟು ಫೋಟೋಗಳನ್ನ ಫೇಸ್​ಬುಕ್​​ನಲ್ಲಿ ಶೇರ್ ಮಾಡಿದ್ದಾರೆ.

ಅಪೂರ್ವ ಸಂಗಮ..!
ಫೋಟೋ ಶೇರ್​ ಮಾಡಿ ಬರೆದುಕೊಂಡಿರುವ ಪ್ರಥಮ್, ‘ಪಿಕ್ ಆಫ್​ ದ ಈಯರ್.. ಡ್ರೋಣ್ ಪ್ರಥಮ್ ಮೀಟ್ಸ್​ ಡ್ರೋಣ್ ಪ್ರತಾಪ್.. ಇನ್ಮೇಲೆ ಇವ್ನು ನನ್ನ ತಮ್ಮ, ಇದೊಂದು ಅಪೂರ್ವ ಸಂಗಮ.. ನನ್ನ ತಮ್ಮ ಸಿಕ್ಕಿಬಿಟ್ಟ! ಡ್ರೋಣ್ ಪ್ರಥಮ್ ಶೂಟ್ ಸ್ಟಾರ್ಟ್ಸ್​ ಫ್ರಮ್ ನೆಕ್ಸ್ಟ್​​ ವೀಕ್ ಅಂತಾ ಬರೆದುಕೊಂಡಿದ್ದಾರೆ.

ಈ ಪೋಸ್ಟ್​ ಮಾಡ್ತಿದ್ದಂತೆ ಪ್ರಥಮ್ ಅಭಿಮಾನಿಗಳು ಅವರದ್ದೇ ಶೈಲಿಯಲ್ಲಿ ಪೋಸ್ಟ್​ಗೆ ಕಮೆಂಟ್ ಮಾಡುತ್ತಿದ್ದಾರೆ.

Source: newsfirstlive.com Source link