ರಾಜ್ಯದಲ್ಲಿ ಕೊಂಚ ಇಳಿಕೆಯಾದ ಕೊರೊನಾ – ಇಂದು 1,229 ಹೊಸ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾ ಪ್ರಕರಣಗಳ ಸಂಖ್ಯೆ ಕೊಂಚ ಇಳಿಕೆಯಾಗಿದ್ದು, 1,229 ಜನಕ್ಕೆ ಇವತ್ತು ಮಹಾಮಾರಿಯ ಸೋಂಕು ತಗುಲಿದೆ. ಕೋವಿಡ್-19 ಸೋಂಕು ಹರಡುವಿಕೆ ಶೇಕಡಾವಾರು ಪ್ರಮಾಣ ಶೇ.0.66ಕ್ಕೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿಂದು 329 ಜನಕ್ಕೆ ಕೊರೊನಾ ದೃಢಪಟ್ಟಿದೆ.

ಇಂದು ಕೊರೊನಾದಿಂದ 13 ಜನರು ಸಾವನ್ನಪ್ಪಿದ್ದು, ಬೆಂಗಳೂರಿನಲ್ಲಿ ಯಾವುದೇ ಮರಣ ಪ್ರಕರಣ ದಾಖಲಾಗಿಲ್ಲ. ಬೆಂಗಳೂರಿನ 329 ಜನ ಸೇರಿದಂತೆ 1,289 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ರಾಜ್ಯದಲ್ಲಿ 18,897 (ಬೆಂಗಳೂರು-7,322) ಸಕ್ರಿಯ ಪ್ರಕರಣಗಳಿವೆ.

ಇಂದು ಒಟ್ಟು 1,83,642 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ರಾಜ್ಯದಲ್ಲಿ ಕೋವಿಡ್-19 ಶೇಕಡಾವಾರು ಮರಣ ಪ್ರಮಾಣ ಶೇ.1.05ರಷ್ಟಿದೆ. ಇದುವರೆಗೂ ರಾಜ್ಯದಲ್ಲಿ 29,45,993 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 37,261 ಮಂದಿ ಸಾವನ್ನಪ್ಪಿದ್ದಾರೆ.

blank

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 5, ಬೆಳಗಾವಿ 29, ಬೆಂಗಳೂರು ಗ್ರಾಮಾಂತರ 15, ಬೆಂಗಳೂರು ನಗರ 310, ಬೀದರ್ 0, ಚಾಮರಾಜನಗರ 7, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 35, ಚಿತ್ರದುರ್ಗ 15, ದಕ್ಷಿಣ ಕನ್ನಡ 207, ದಾವಣಗೆರೆ 12, ಧಾರವಾಡ 7, ಗದಗ 2, ಹಾಸನ 103, ಹಾವೇರಿ 3, ಕಲಬುರಗಿ 2, ಕೊಡಗು 75, ಕೋಲಾರ 15, ಕೊಪ್ಪಳ 2, ಮಂಡ್ಯ ,21 ಮೈಸೂರು 82, ರಾಯಚೂರು 0, ರಾಮನಗರ 3, ಶಿವಮೊಗ್ಗ 42, ತುಮಕೂರು 44, ಉಡುಪಿ 146, ಉತ್ತರ ಕನ್ನಡ 72, ವಿಜಯಪುರ 1 ಮತ್ತು ಯಾದಗಿರಿಯಲ್ಲಿ 0 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದನ್ನೂ ಓದಿ: ಕೇರಳದಲ್ಲಿ ಕೊರೊನಾ ಆರ್ಭಟ- ಸತತ ಮೂರನೇ ದಿನ 30 ಸಾವಿರ ಪ್ಲಸ್ ಕೇಸ್

Source: publictv.in Source link