ಅಫ್ಘಾನ್ ತೊರೆದು​ ಬೆಲ್ಜಿಯಂಗೆ ಬಂದಿಳಿದ ಪುಟ್ಟ ಮಗುವಿನ ಸಂಭ್ರಮಕ್ಕೆ ಜಗತ್ತು ಫಿದಾ..!

ಅಫ್ಘಾನ್ ತೊರೆದು​ ಬೆಲ್ಜಿಯಂಗೆ ಬಂದಿಳಿದ ಪುಟ್ಟ ಮಗುವಿನ ಸಂಭ್ರಮಕ್ಕೆ ಜಗತ್ತು ಫಿದಾ..!

ತಾಲಿಬಾನ್​​ ಉಗ್ರರು ಅಫ್ಘಾನಿಸ್ತಾನವನ್ನು ಸಂಪೂರ್ಣ ವಶಕ್ಕೆ ಪಡೆದಿದ್ದಾರೆ. ಈಗ ತಾಲಿಬಾನ್ ಹಿಡಿತಕ್ಕೆ ಸಿಲುಕಿರುವ ಅಫ್ಘಾನಿಸ್ತಾನದಲ್ಲೀಗ ಮತ್ತೊಂದು ಉಗ್ರವಾದಿ ಗುಂಪು ಸಕ್ರಿಯವಾಗಿದೆ ಎಂಬ ಆಘಾತ ವಿಚಾರ ಬಯಲಿಗೆ ಬಂದಿದೆ. ಕಾಬೂಲ್​ನಲ್ಲಿ ನಡೆದ ಸರಣಿ ಸ್ಫೋಟದ ಹಿಂದೆ ತನ್ನದೇ ಕೈವಾಡ ಇದೆ ಎಂದು ಮತ್ತೊಂದು ಉಗ್ರ ಸಂಘಟನೆ ಐಸಿಸ್​-ಕೆ ಹೊಣೆ ಹೊತ್ತುಕೊಂಡಿದೆ. ತಾಲಿಬಾನ್ ಮತ್ತು ಐಸಿಸ್- ಕೆ ಗುಂಪುಗಳ ನಡುವೆ ಸೈದ್ದಾಂತಿಕ ವೈರತ್ವ ಇದೆ. ಈ ಎರಡು ಗುಂಪುಗಳ ನಡುವಿನ ಸಂಘರ್ಷದಲ್ಲಿ ಸಾಮಾನ್ಯ ಅಫ್ಘಾನಿಸ್ತಾನ ಪ್ರಜೆಗಳು ನಲುಗಿ ಹೋಗುವುದಂತೂ ಗ್ಯಾರಂಟಿ. ಹೀಗಿರುವಾಗಲೇ ಜೀವ ಉಳಿಸಿಕೊಳ್ಳಲು ಅಫ್ಘಾನ್​​ ಪ್ರಜೆಗಳು ದೇಶ ಬಿಟ್ಟು ಹೋಗುತ್ತಿದ್ದಾರೆ.

ದೇಶದ ತೊರೆದ ಅಫ್ಘಾನ್​​ ಪ್ರಜೆಗಳನ್ನು ಬಹಳಷ್ಟು ರಾಷ್ಟ್ರಗಳು ಸ್ವಾಗತಿಸಿವೆ. ಬೆಲ್ಜಿಯಂ ಕೂಡಾ ಅಫ್ಘನ್ ನಾಗರಿಕರನ್ನು ಬರಮಾಡಿಕೊಂಡಿದೆ. ಈಗ ಅಫ್ಘಾನಿಸ್ತಾನದಿಂದ ಬೆಲ್ಜಿಯಂ ಏರ್​ಪೋರ್ಟ್​ಗೆ ಬಂದಿಳಿದ ಕುಟುಂಬವೊಂದರ ಚಿತ್ರವೀಗ ಭಾರೀ ವೈರಲ್​​ ಆಗಿದೆ.

ಹೌದು, ಬೆಲ್ಜಿಯಂ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕೂಡಲೇ ಆಫ್ಘಾನ್​​​​ ಕುಟುಂಬದ ಮಗುವೊಂದು ಖುಷಿಯಲ್ಲಿ ಕುಣಿಯುತ್ತಾ ಸಾಗುತ್ತಿದ್ದಾಳೆ. ಈ ಚಿತ್ರವೂ ಸೋಷಿಯಲ್​​ ಮೀಡಿಯಾಲ್ಲಿ ವೈರಲ್​​ ಆಗಿದ್ದು, ಎಲ್ಲರ ಮನ ಗೆದ್ದಿದೆ.

ಇದನ್ನೂ ಓದಿ: ಲೀಡ್ಸ್‌ ಟೆಸ್ಟ್‌: ಇಂಗ್ಲೆಂಡ್​​​ ವಿರುದ್ಧ ಟೀಂ ಇಂಡಿಯಾಗೆ 76 ರನ್‌ಗಳ ಇನಿಂಗ್ಸ್‌ ಸೋಲು..

ರಾಯ್​ಟರ್ಸ್ ಸಂಸ್ಥೆಯ ಛಾಯಾಗ್ರಾಹಕ ಜೋಹಾನ್ನ ಗೆರೋನ್ ಈ ಚಿತ್ರ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ಚಿತ್ರ ಟ್ವಿಟರ್​ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಭವಿಷ್ಯದ ಕುರಿತು ಆಶಾವಾದವನ್ನು ವ್ಯಕ್ತಪಡಿಸುತ್ತಿದ್ದಾರೆ.

Source: newsfirstlive.com Source link