ಮುಂದಿನ ಚುನಾವಣೆಗೆ ಈಗಲೇ ಅಭ್ಯರ್ಥಿಗಳ ಘೋಷಣೆ ಮಾಡಿದ ಡಿ.ಕೆ ಸುರೇಶ್​​​; ಕಾಂಗ್ರೆಸ್​ ನಾಯಕರು ಆಕ್ರೋಶ

ಮುಂದಿನ ಚುನಾವಣೆಗೆ ಈಗಲೇ ಅಭ್ಯರ್ಥಿಗಳ ಘೋಷಣೆ ಮಾಡಿದ ಡಿ.ಕೆ ಸುರೇಶ್​​​; ಕಾಂಗ್ರೆಸ್​ ನಾಯಕರು ಆಕ್ರೋಶ

ಬೆಂಗಳೂರು: ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಅಭ್ಯರ್ಥಿಗಳ ಘೋಷಣೆ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಸಹೋದರ ಸಂಸದ ಡಿ.ಕೆ ಸುರೇಶ್​​ ನಡೆಗೆ ಕೈ ಪಾಳೆಯದಲ್ಲಿ ಅಸಮಾಧಾನ ಶುರುವಾಗಿದೆ. ಮೊನ್ನೆಯಷ್ಟೇ ರಾಮನಗರ ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಮಾಡಿ ಡಿ.ಕೆ ಸುರೇಶ್ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಇಕ್ಬಾಲ್ ಹುಸೇನ್, ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಹೆಚ್.ಸಿ ಬಾಲಕೃಷ್ಣ ಎಂದು ಘೋಷಣೆ ಮಾಡಿದ್ದ ಡಿ.ಕೆ ಸುರೇಶ್ ವಿರುದ್ಧ ಈಗ ಕಾಂಗ್ರೆಸ್​ ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ಚುನಾವಣೆಗೆ ಇನ್ನೂ ಎರಡು ವರ್ಷಗಳ ಕಾಲ ಬಾಕಿ ಇರುವಾಗಲೇ ಹೇಗೆ ಡಿ.ಕೆ ಸುರೇಶ್​​​ ಅಭ್ಯರ್ಥಿಗಳ ಘೋಷಣೆ ಮಾಡಿದ್ರು ಎಂದು ಕಾಂಗ್ರೆಸ್ ಪಡಸಾಲೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ಹಿರಿಯ ನಾಯಕರ ನಿರ್ದೇಶನ ಉಲ್ಲಂಘಿಸಿದ ಡಿ.ಕೆ.ಸುರೇಶ್ ನಡೆಗೆ ಕೈಪಾಳೆಯ ಕೆಂಡ ಕಾರುತ್ತಿದೆ. ಹೋದಲ್ಲಿ ಬಂದಲ್ಲಿ ಅಭ್ಯರ್ಥಿಗಳ ಘೋಷಣೆ ಮಾಡಬೇಡಿ ಎಂದು ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ್​​​ ಖರ್ಗೆ ಎಲ್ಲರಿಗೂ ಸೂಚಿಸಿದ್ದರು. ಡಿ.ಕೆ.ಶಿವಕುಮಾರ್​ ಬದಲಿಗೆ ಡಿ.ಕೆ ಸುರೇಶ್​​​ ಈಗ ಅಭ್ಯರ್ಥಿಗಳ ಘೋಷಣೆ ಕಾಯಕ ಮುಂದುವರಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಹೆಸರು ಉಲ್ಲೇಖಿಸಿ ಎಲ್ಲೂ ಅಭ್ಯರ್ಥಿ ಘೋಷಣೆ ಮಾಡಬೇಡಿ ಎಂದು ಖರ್ಗೆ ವಾರ್ನಿಂಗ್​​ ನೀಡಿದ್ದರು. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲ ಹಿರಿಯ ಮುಖಂಡರು ಉಪಸ್ಥಿತರಿದ್ದ ಸಭೆಯಲ್ಲೇ ಖರ್ಗೆ ನಿರ್ದೇಶನ ನೀಡಿದ್ದರು.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್​​; ಮಮತಾ ಸೋದರಳಿಯ​ ಅಭಿಷೇಕ್ ಬ್ಯಾನರ್ಜಿಗೆ ED ಸಮನ್ಸ್

ಇದರೊಂದಿಗೆ ಅಭ್ಯರ್ಥಿಗಳ ಬಹಿರಂಗ ಘೋಷಣೆಗೆ ಬ್ರೇಕ್ ಹಾಕಿಸಿದ್ದರು ಖರ್ಗೆ. ಆದರೆ, ಅಣ್ಣನ ಬದಲು ಈಗ ತಮ್ಮ ಡಿ.ಕೆ ಸುರೇಶ್​​ ಅಭ್ಯರ್ಥಿ ಘೋಷಣೆಯ “ಕಾಯಕ” ಆರಂಭಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ತಮ್ಮನ ನಡೆಗೆ ಕೈ ಪಾಳೆಯದಲ್ಲೇ ಅಸಮಾಧಾನ ಶುರುವಾಗಿದೆ ಅನ್ನೋ ಮಾತುಗಳು ಶುರುವಾಗಿದೆ.

ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ

Source: newsfirstlive.com Source link