ಗ್ಯಾಂಗ್ ರೇಪ್ ಕೇಸ್​: ಕೊಟ್ಟ ಮಾತಿನಂತೆ ₹1 ಲಕ್ಷ ಪೊಲೀಸರಿಗೆ ನೀಡಿದ ಜಗ್ಗೇಶ್ ದಂಪತಿ

ಗ್ಯಾಂಗ್ ರೇಪ್ ಕೇಸ್​: ಕೊಟ್ಟ ಮಾತಿನಂತೆ ₹1 ಲಕ್ಷ ಪೊಲೀಸರಿಗೆ ನೀಡಿದ ಜಗ್ಗೇಶ್ ದಂಪತಿ

ಬೆಂಗಳೂರು: ಮೈಸೂರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಐವರು ಆರೋಪಿಗಳನ್ನ ಬಂಧಿಸಿರುವ ಪೊಲೀಸ್ ಅಧಿಕಾರಿಗಳಿಗೆ ನಟ ಜಗ್ಗೇಶ್‌ ₹1ಲಕ್ಷ ಬಹುಮಾನ ಘೋಷಿಸಿದ್ದರು. ಅದರಂತೆ ಇದೀಗ ಒಂದು ಲಕ್ಷ ರೂಪಾಯಿ ಹಣವನ್ನ ಪೊಲೀಸರಿಗೆ ನೀಡಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮೂಲಕ ಒಂದು ಲಕ್ಷ ರೂಪಾಯಿ ಹಣವನ್ನ ಪರಿಮಳ ಜಗ್ಗೇಶ್ ದಂಪತಿ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್​.. ಮೈಸೂರಿನ ಅತ್ಯಾಚಾರ ಆರೋಪಿಗಳ ಬಂಧಿಸಿದ ಪೋಲಿಸರಿಗೆ ಕಾರ್ಯದಕ್ಷತೆಗೆ ನನ್ನ ವೈಯಕ್ತಿಕ 1ಲಕ್ಷ ರೂ ಗಳ ಹಣದ ಚಕ್ ಗೃಹ ಮಂತ್ರಿಗಳು ಅರಗ ಜ್ಞಾನೇಂದ್ರರಿಗೆ ಒಪ್ಪಿಸಿದೆ. ಮೈಸೂರು ಪೋಲಿಸರಿಗೆ ಇರಲಿ ನಿಮ್ಮ ಬೆಂಬಲ ಪ್ರೋತ್ಸಾಹ. ನಮ್ಮ ಮನೆಯ ಹೆಣ್ಣಂತೆ ಅಲ್ಲವೆ ಅನ್ಯಮಕ್ಕಳು ಕೂಡ…ಹರಿಃಓಂ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಗ್ಯಾಂಗ್​ ರೇಪ್​ ಕೇಸ್​: ಆರೋಪಿಗಳ ಬಂಧಿಸಿದ ಪೊಲೀಸರಿಗೆ ₹1 ಲಕ್ಷ ಬಹುಮಾನ ಘೋಷಿಸಿದ ಜಗ್ಗೇಶ್

Source: newsfirstlive.com Source link