ಬೆಚ್ಚಿಬಿದ್ದ ಬಾಗಲಕೋಟೆ..! ಜಮೀನು ವಿಚಾರಕ್ಕೆ ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ

ಬೆಚ್ಚಿಬಿದ್ದ ಬಾಗಲಕೋಟೆ..! ಜಮೀನು ವಿಚಾರಕ್ಕೆ ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ

ಬಾಗಲಕೋಟೆ: ಜಮೀನು ವಿಚಾರಕ್ಕಾಗಿ ಹತ್ತಿದ ದ್ವೇಷ ಒಂದೇ ಕುಟುಂಬದ ನಾಲ್ವರ ಕೊಲೆಯಲ್ಲಿ ಅಂತ್ಯವಾದ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಮಧುರಖಂಡಿಯಲ್ಲಿ ನಡೆದಿದೆ. ನಾಲ್ಕು ಜನ ಸಹೋದರರನ್ನ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಇಡೀ ಜಿಲ್ಲೆ ಬೆಚ್ಚಿಬಿದ್ದಿದೆ.

ಹನುಮಂತ ಉದಗಟ್ಟಿ (45), ಮಲ್ಲಪ್ಪ ಉದಗಟ್ಟಿ (35), ಬಸಪ್ಪ ಉದಗಟ್ಟಿ (37), ಈಶ್ವರ ಉದಗಟ್ಟಿ(35)ಕೊಲೆಯಾದ ಸಹೋದರರು. ಪುಟಾಣಿ ಎಂಬ ಮನೆತನದ ವಿರುದ್ಧ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಮಾರಕ ಅಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

Source: newsfirstlive.com Source link