ದೀಪಿಕಾ ಫೋಟೋಗೆ ಫಿದಾ.. ನನ್ನ ಹೆಂಡ್ತಿ ‘Hottie’ ಎಂದ ರಣವೀರ್ ಸಿಂಗ್

ದೀಪಿಕಾ ಫೋಟೋಗೆ ಫಿದಾ.. ನನ್ನ ಹೆಂಡ್ತಿ ‘Hottie’ ಎಂದ ರಣವೀರ್ ಸಿಂಗ್

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಬಾಲಿವುಡ್​ ರೀಲ್ ಅಂಡ್ ರೀಯಲ್ ಜೋಡಿ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರೋ ರಣ್ ಮತ್ತು ಡಿಪ್ಪಿ ಮೊನ್ನೆಯಷ್ಟೇ ಆಸ್ಪತ್ರೆಗೆ ಹೋಗಿ ಸುದ್ದಿಯಾಗಿದ್ರು. ಇನ್ನು ದೀಪಿಕಾ ಪ್ರಗ್ನೆಂಟ್ ಆಗಿದ್ದಾರೆ ಅಂತಾ ಬಾಲಿವುಡ್ ಅಂಗಳದಲ್ಲಿ ಕೆಲ ಮಾತುಗಳು ಕೂಡ ಕೇಳಿಬಂದಿತ್ತು. ಇದೀಗ ರಣ್​ವೀರ್ ಸಿಂಗ್ ಪತ್ನಿ ದೀಪಿಕಾಗೆ Hottie ಅಂತಾ ಕರೆದು ಮತ್ತೆ ಸುದ್ದಿಯಾಗಿದ್ದಾರೆ.

ಹೌದು, ದೀಪಿಕಾ ಪಡುಕೋಣೆ ತಮ್ಮ ಇನ್​​ಸ್ಟಾಗ್ರಾಮ್​​ ಖಾತೆಯಲ್ಲಿ ಆಗಾಗ ತಮ್ಮ ಹೊಸ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇನ್ನು ದೀಪಿಕಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ ಕೂಡಲೆ ರಣವೀರ್ ಡಿಪ್ಪಿ ಫೋಟೋಗೆ ಕಮೆಂಟ್ ಮಾಡ್ತಾರೆ.

ಅದೇ ರೀತಿ ಈ ಬಾರಿಯು ದೀಪಿಕಾ ಪಡುಕೋಣೆ ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಬ್ಲಾಕ್ ಅಂಡ್ ವೈಟ್  ಆಗೀರೊ ಪೋಟೋವೊಂದನ್ನು ಶೇರ್ ಮಾಡಿದ್ದಾರೆ. ಇನ್ನು ಪತ್ನಿ ಪೋಟೋ ನೋಡಿ ಫಿದಾ ಆದ ರಣವೀರ್ ಸಿಂಗ್ ಪೋಟೋಗೆ ‘Hottie’ ಅಂತಾ ಕಮೆಂಟ್ ಮಾಡಿದ್ದಾರೆ.

Source: newsfirstlive.com Source link