ಮುಗಿಯದ ಖಾತೆ ಕ್ಯಾತೆ.. ಹೈಕಮಾಂಡ್​ಗೆ ಪರೋಕ್ಷ ಎಚ್ಚರಿಕೆ ಕೊಟ್ರಾ ಆನಂದ್ ಸಿಂಗ್..?

ಮುಗಿಯದ ಖಾತೆ ಕ್ಯಾತೆ.. ಹೈಕಮಾಂಡ್​ಗೆ ಪರೋಕ್ಷ ಎಚ್ಚರಿಕೆ ಕೊಟ್ರಾ ಆನಂದ್ ಸಿಂಗ್..?

ಬೆಂಗಳೂರು: ಸಿಎಂ ಬೊಮ್ಮಾಯಿ ಅವರು ನೀಡಿರುವ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಆನಂದ್ ಸಿಂಗ್​ ಅವರ ಮುನಿಸು ಅಧಿಕಾರ ವಹಿಸಿಕೊಂಡರೂ ಶಮನವಾಗಿಲ್ಲ ಅನ್ನೋ ಮಾತುಗಳು ಕೇಳಿಬಂದಿವೆ.

ಅತೃಪ್ತಿಯಾಗಿರುವ ಆನಂದ್ ಸಿಂಗ್, ನಿನ್ನೆ ನಡೆದ ಇಲಾಖೆವಾರು ಸಭೆಯಲ್ಲಿ ಮತ್ತೆ ಖಾತೆ ಬಗ್ಗೆ ಬೇಸರವನ್ನ ಮತ್ತೆ ಹೊರ ಹಾಕಿದ್ದಾರೆ. ಮಾಧ್ಯಮದ‌ ಮುಂದೆ ಮಾತನಾಡಿದ್ದ ಆನಂದ್ ಸಿಂಗ್, ‘ನಮ್ದು ಸಣ್ಣ ಇಲಾಖೆ‌’ ಅನ್ನೋ ಮೂಲಕ ಮತ್ತೊಮ್ಮೆ ‘ನಾನು ಪ್ರಬಲ ಖಾತೆಯ ಆಕಾಂಕ್ಷಿ’ ಎಂಬ ಸಂದೇಶವನ್ನ ಆನಂದ್ ಸಿಂಗ್ ನೀಡಿದ್ದಾರೆ ಅಂತಾ ಹೇಳಲಾಗುತ್ತಿದೆ.

ಇದನ್ನೂ ಓದಿ: ಸಮಸ್ಯೆ ಆಗುವ ಮೊದಲೇ ಎಚ್ಚೆತ್ತ ಸಿಎಂ; ಹೆಚ್​.ವಿಶ್ವನಾಥ್ ಬಹುದೊಡ್ಡ ಆಸೆ ಈಡೇರಿಕೆ..!

ಜೊತೆಗೆ ನಾನು ಖಾಲಿ ಇರ್ತೀನಿ, ಯಾವಾಗ ಬೇಕಾದರೂ ಸಿಗ್ತೀನಿ. ನಾನು ಸಂದೇಶ ಕೊಡಲು ಹೋಗ್ತೀನಿ ಕೇಳಲು ಹೋಗಲ್ಲ ಅನ್ನೋ ಮೂಲಕ ಈ ಇಲಾಖೆಯಲ್ಲಿ ಕೆಲ್ಸ ಎಂಬ ಸಂದೇಶವನ್ನ ಸಚಿವ ಆನಂದ್ ಸಿಂಗ್ ನೀಡಿದರಾ ಅನ್ನೋ ಚರ್ಚೆ ಇದೀಗ ರಾಜಕೀಯ ವಲಯದಲ್ಲಿ ಶುರುವಾಗಿದೆ.

ಈ ಮೂಲಕ ಬಿಜೆಪಿ ಹೈಕಮಾಂಡ್​ಗೆ ಆನಂದ್ ಸಿಂಗ್ ಪರೋಕ್ಷವಾಗಿ ವಾರ್ನಿಂಗ್ ಕೊಟ್ಟರಾ? ಹಾಗಾದ್ರೆ ಆನಂದ್ ಸಿಂಗ್ ರಾಜೀನಾಮೆ ತಂತ್ರ ಇನ್ನೂ ನಿಂತಿಲ್ವಾ? ಅನ್ನೂ ಪ್ರಶ್ನೆಗಳೂ ಕೂಡ ಶುರುವಾಗಿದೆ. ಇನ್ನು ಆನಂದ್ ಸಿಂಗ್ ಈಗಾಗಲೇ ವರಿಷ್ಠರನ್ನು ಭೇಟಿ ಮಾಡದೇ ವಾಪಸ್ ಆಗಿದ್ದಾರೆ.

ಇದನ್ನೂ ಓದಿ: ಮುಂದಿನ ಚುನಾವಣೆಗೆ ಈಗಲೇ ಅಭ್ಯರ್ಥಿಗಳ ಘೋಷಣೆ ಮಾಡಿದ ಡಿ.ಕೆ ಸುರೇಶ್​​​; ಕಾಂಗ್ರೆಸ್​ ನಾಯಕರು ಆಕ್ರೋಶ

Source: newsfirstlive.com Source link