ಕಾಬೂಲ್​ನಲ್ಲಿ US ಸೈನಿಕರ ಹತ್ಯೆ.. ಅಮೆರಿಕ ಗುಪ್ತಚರ ಇಲಾಖೆಗೇ ಚಳ್ಳೆ ಹಣ್ಣು ತಿನ್ನಿಸಿತಾ ಐಸಿಸ್-ಕೆ..?

ಕಾಬೂಲ್​ನಲ್ಲಿ US ಸೈನಿಕರ ಹತ್ಯೆ.. ಅಮೆರಿಕ ಗುಪ್ತಚರ ಇಲಾಖೆಗೇ ಚಳ್ಳೆ ಹಣ್ಣು ತಿನ್ನಿಸಿತಾ ಐಸಿಸ್-ಕೆ..?

ಐಸಿಸ್-ಕೆ ಎನ್ನುವ ಉಗ್ರ ಸಂಘಟನೆಯ ದಾಳಿ ಅಫ್ಘಾನ್ ನೆಲದಲ್ಲಿ ಇಂದು ಚರ್ಚೆಯಲ್ಲಿದ್ದರೆ, ಇದಕ್ಕೆ ಮೂಲ ಕಾರಣರಾದವರನ್ನು ನೆನೆಪಿಸಿಕೊಳ್ಳಲೇ ಬೇಕು. ವಿಶ್ವದ ದೊಡ್ಡಣ್ಣ, ಬಲಿಷ್ಠ ರಾಷ್ಟ್ರ ಎಂದು ಹಿಗ್ಗುವ ದೇಶಕ್ಕೆ ಇಷ್ಟು ಮಾತ್ರ ಅರಿವಿಗೆ ಬರಲಿಲ್ವಾ? ಅನ್ನೋ ಪ್ರಶ್ನೆ ಎದ್ದಿದೆ.

ತನ್ನ ಎಲ್ಲ ಹಳೆಯ ಇತಿಹಾಸವನ್ನು ಮರೆತು ಎಲ್ಲರಂತೆ ಒಂದು ಬಲಿಷ್ಟ ದೇಶ ಕಟ್ಟಲು ಶ್ರಮವಹಿಸಿತ್ತು ಅಫ್ಘಾನ್. ಇವರ ಈ ಶ್ರಮಕ್ಕೆ ಭಾರತ ಸೇರಿದಂತೆ ಅದೆಷ್ಟೋ ದೊಡ್ಡ ದೊಡ್ಡ ದೇಶಗಳು ತಮ್ಮ ಸಹಾಯ ಹಸ್ತ ಚಾಚಿತ್ತು. ಆದರೆ ಇವರ ಬೆಳವಣಿಗೆಗೆ ಮೂಲ ಬೆನ್ನೆಲುಬು ಅಂದ್ರೆ ಅದು ಅಮೆರಿಕ. 9/11ರ ಭೀಕರ ಉಗ್ರ ಕೃತ್ಯದ ಬಳಿಕ ಅಮೆರಿಕ ಅಫ್ಘಾನ್ ನೆಲದಲ್ಲಿ ತನ್ನ ಹಿಡಿತ ಸಾಧಿಸಿತ್ತು.

ಅಮೆರಿಕನ್ ಆರ್ಮಿ ಅಲ್ಲಿ ನೆಲೆಯೂರಿ ಸಾಕಷ್ಟು ಕ್ರೂರತ್ವಕ್ಕೆ ಅಂತ್ಯವೇ ಹಾಡಿತ್ತು. ಒಂದು ಸಮನಾದ ಪ್ರಜಾ ಪ್ರಭುತ್ವ, ಹೆಣ್ಣು ಮಕ್ಕಳಿಗೆ ಹಾಗೂ ಎಲ್ಲರಿಗೂ ವಿದ್ಯಾಭ್ಯಾಸ. ಶಕ್ತಿಯುತ ಕಾನೂನು, ಬಲಿಷ್ಟವಾದ ಆರ್ಮಿ. ಹೀಗೆ ಎಲ್ಲವನ್ನು ಸಿದ್ಧಪಡಿಸಿಕೊಂಡಿತ್ತು. ಆದರೆ ತಾಲಿಬಾನ್ ಎನ್ನುವ ಉಗ್ರ ಸಂಘಟನೆ ಪಕ್ಕದಲ್ಲೇ ಕೂತು ಅಫ್ಘಾನ್ ನೆಲದ ವಶಕ್ಕೆ ಕಾಲಿಡಲು ಹೊಂಚು ಹಾಕುತ್ತಿತ್ತು. ಆದರೆ ಅಮೆರಿಕ ಸೇನೆಯಿದ್ದ 2 ದಶಕಗಳ ತನಕ ಆ ಒಂದು ಹೆಜ್ಜೆ ತಾಲಿಬಾನಿಯರಿಗೆ ಮುಂದಿಡಲು ಆಗಲೇ ಇಲ್ಲ.

blank

ಇದೀಗ ಆ ಅಫ್ಘಾನ್ ನಾಡಿನಲ್ಲಿ ಮತ್ತೆ ತಾಲಿಬಾನಿಗಳ ಅಟ್ಟಹಾಸ ಶುರುವಾಗಿದೆ. ಅಲ್ಲಿ ನಡೆಯುತ್ತಿರುವ ಕೃತ್ಯವನ್ನು ಗಮನಿಸಿದರೆ ಆಫ್ಘಾನ್ ನಾಡಿನಲ್ಲಿ ಮತ್ತೆ ಇತಿಹಾಸ ಮರುಕಳಿಸುತ್ತೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಅದಕ್ಕೆ ಕಾಬೂಲ್​​ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳೇ ಸಾಕ್ಷಿ. ಇಬ್ಬರು ಆತ್ಮಾಹುತಿ ಬಾಂಬ್ ದಾಳಿ ಕೋರರು, ದೇಶ ಬಿಡಲು ತುದಿಗಾಲಿನಲ್ಲಿ ಕಾಯುತ್ತಿದ್ದ ಜನರ ನಡುವೆ, ಬಾಂಬ್ ಸಿಡಿಸಿ ಅದೆಷ್ಟೋ ಸಾವು ನೋವುಗಳಿಗೆ ಕಾರಣರಾದರು. ಅಲ್ಲಿ ಇಲ್ಲಿ ವೆಪಸ್ಸ್ ಹಿಡಿದು ಸಿಕ್ಕ ಸಿಕ್ಕವರನ್ನು ಗುಂಡು ಹಾರಿಸಿ ಕೊಲ್ಲುತ್ತಿದ್ದಾಗಲೇ ಅಲ್ಲಿ ಮುಂದೆ ಏನಾಗಬಹುದು ಎನ್ನವ ಎಚ್ಚರಿಕೆಗಳನ್ನು ಅಮೆರಿಕ ವಹಿಸಬೇಕಾಗಿತ್ತು. ಆದರೆ ಅಲ್ಲಿ ಒಂದು ದಾಳಿ ನಡೆದ ಬಳಿಕ ಅದರಲ್ಲೂ ಅಮೆರಿಕ ಸೇನೆಯ ವೀರರು ಮೃತರಾದ ಬಳಿಕ.. ಅಧ್ಯಕ್ಷರು ಈಗ ತಮ್ಮ ವೀರಾವೇಷದ ನುಡಿಗಳನ್ನು ಆಡುತ್ತಿದ್ದಾರೆ.

ಹೌದು, ಇಷ್ಟೆಲ್ಲ ಬೆಳವಣಿಗೆಗಳು ಆದ ಮೇಲೆ ಹೀಗೆ ಹೌಹಾರಲೇ ಬೇಕು. ನಾವು ಸುಮ್ಮನೇ ಬಿಡುವುದಿಲ್ಲ, ಎಲ್ಲರನ್ನು ಭೇಟೆಯಾಡಿ ಹೊಡೆದುರುಳಿಸುತ್ತೆವೆ ಎನ್ನುತ್ತಿರುವ ಬೈಡನ್​ಗೆ ಈ ಕೃತ್ಯದ ಸುಳಿವಿನ ಬಗ್ಗೆ ಮುಂಚೆಯೇ ತಿಳಿದಿರಲಿಲ್ಲವೇ? ಅಷ್ಟಕ್ಕೂ ಆ ಜಾಗದಲ್ಲಿ ಹೀಗೆ ಆಗುತ್ತೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿತ್ತು. ಇಷ್ಟು ಸಣ್ಣ ಮಟ್ಟಗಿನ ಯೋಚನೆಯನ್ನು ಅಮೆರಿಕಾದ ಇಂಟಲಿಜೆಂಟ್ಸ್ ಏಜೆನ್ಸಿ, ಗುಪ್ತಚರ ಇಲಾಖೆಗೆ ಗೊತ್ತೇ ಆಗಲಿಲ್ವಾ? ಇದೆಲ್ಲ ಪ್ರಶ್ನೆ ನಮ್ಮಲ್ಲಿ ಮೂಡುತ್ತೆ.

ಅಫ್ಘಾನ್ ಅನ್ನು ಸಂಪೂರ್ಣವಾಗಿ ತೊರೆಯುವ ಕಾರ್ಯದಲ್ಲಿದ್ದೆವೆ.. ಆದ್ರೆ
ನಾವು ಮರೆಯುವುದಿಲ್ಲ, ಕ್ಷಮಿಸುವುದಿಲ್ಲ, ನಿಮ್ಮನ್ನು ಬೇಟೆಯಾಡುತ್ತೇವೆ 

ದಿನಾಂಕ 26 ಆಗಸ್ಟ್ ಸಂಜೆ 6 ಗಂಟೆಯ ಸುಮಾರಿಗೆ ಅಬ್ದುಲ್ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಬ್ಬೇ ಗೇಟ್ ಬಳಿ ಮತ್ತು ಬ್ಯಾರೋನ್ ಹೋಟೆಲ್ ಬಳಿ ದಾಳಿ ಆದಾಗ ನೂರಕ್ಕೂ ಹೆಚ್ಚು ಅಫ್ಘಾನಿಗಳು ಪ್ರಾಣ ಕಳೆದುಕೊಂಡರು, ಇದರಲ್ಲಿ ಅಮೆರಿಕ ಸೇನೆಯ 16 ವೀರ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಕೃತ್ಯವನ್ನು ಮನಸಲ್ಲಿ ಇಟ್ಟುಕೊಂಡು, ಅಮೆರಿಕದ ವೈಟ್ ಹೌಸ್​ನಲ್ಲಿ ನಿಂತ ಅಧ್ಯಕ್ಷ ಬೈಡನ್ ಎಚ್ಚರಿಕೆಗಳನ್ನು ನೀಡುತ್ತಿದ್ದಾರೆ.

ಈಗ ಸದ್ಯ ಅಫ್ಘಾನ್​​ನಲ್ಲಿ ಕೌರ್ಯಕ್ಕೆ ಬಲಿಯಾಗಲು ಸಿಲುಕಿರುವವರನ್ನು ವಿಲೇವಾರಿ ಮಾಡುವ ಕಾರ್ಯದಲ್ಲಿದ್ದೀವಿ. ದಿನ ಒಂದಕ್ಕೆ 1 ಲಕ್ಷ ಜನರನ್ನು ಅಮೆರಿಕ ಸೇನೆ ಹೊತ್ತು ತಂದಿದೆ. ಹಾಗೆ ನಾವು ಅಫ್ಘಾನ್ ನೆಲವನ್ನು ನಿಗಧಿಸಿದ ದಿನಾಂಕದ ಒಳಗಡೆ ತೆರವು ಮಾಡುವುದಾಗಿ ಪಣ ತೊಟ್ಟಿದ್ದೇವೆ. ಇದಾದ ಬಳಿಕ ಅಮೆರಿಕ ಸೇನೆ ಹೀರೋಗಳ ಪ್ರಾಣಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಈ ಕೃತ್ಯದಲ್ಲಿ ಭಾಗಿ ಆಗಿರುವವರನ್ನು ನಾವು ಮರೆಯುವುದಿಲ್ಲ, ಕ್ಷಮಿಸುವುದಿಲ್ಲ ಮತ್ತು ಯಾರೇ ಆದರೂ ಅವರನ್ನು ಬೇಟೆಯಾಡಿ ಹೊಡೆದುರುಳಿಸುತ್ತೆವೆ.
       – ಜೋ ಬೈಡನ್, ಅಮೆರಿಕ ಅಧ್ಯಕ್ಷ

ಈ ಹೇಳಿಕೆ ಏನೋ ವೀರಾವೇಷವಾಗಿದೆ., ತಾಲಿಬಾನಿಗಳಿಗೆ ಭಯ ಹುಟ್ಟಿಸುವಂತಿದೆ, ಹಾಗೆ ಬೈಡನ್ ಸರ್ಕಾರ ಏನೋ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತದೆ ಅನ್ನುವ ನಂಬಿಕೆ ಹುಟ್ಟಿಸುತ್ತದೆ. ಆದರೆ ಇದು ನಿಜಕ್ಕೂ ಸಾಧ್ಯನಾ ? ಬೈಡನ್ ತಾಲಿಬಾನಿಗಳ ವಿರೋಧವಾಗಿಲಿ. ಅಥವಾ ಇನ್ಯಾವುದೇ ಉಗ್ರ ಸಂಘಟನೆಗ ವಿರುದ್ಧವಾಗಲೀ ಹೋರಾಡಲು ಸಾಧ್ಯನಾ? ವಿಶ್ವದ ಬಲಿಷ್ಟ ರಾಷ್ಟ್ರ ನಿಜ. ಆದರೆ ಅಮೆರಿಕ ಸ್ವತಃ ತಾವೇ ಮಾಡಿಕೊಂಡ ಎಡವಟ್ಟಿನಿಂದ ಇಂದು ಈ ಪರಿಸ್ಥಿತಿಯನ್ನು ಬರಮಾಡಿಕೊಂಡಿದೆ. ಸದ್ಯ ಅಫ್ಘಾನ್ ಏರ್ಪೋರ್ಟ್ ಬಳಿ ಕಾದು ಕುಳಿತಿರುವವರನ್ನು ಹೊತ್ತು ತರಬೇಕು. ಇದಾದ ಬಳಿಕ ಅಮೆರಿಕ ಅಲ್ಲಿಂದ ತನ್ನ ಸಂಪೂರ್ಣ ಸೇನೆ ಜೊತೆ ಹೊರ ನಡೆಯಬೇಕು. ಇಲ್ಲದಿದ್ದರೆ ಇನ್ನೋಂದು ದಾಳಿಗೆ ಸಿದ್ಧವಾಗಬೇಕು ಎನ್ನುವಂತೆ ಎಚ್ಚರಿಕೆಗಳನ್ನು ನೀಡಿದೆ ತಾಲಿಬಾನ್.

blank

ಉಗ್ರರು ಈಗ ಅಮೆರಿಕ ಶಸ್ತ್ರಾಸ್ತ್ರಗಳನ್ನ ಹಿಡಿದು ಬಲಿಷ್ಟರಾಗಿದ್ದಾರೆ
ದಾಳಿಗೆ ಪ್ರತಿದಾಳಿ ಮಾಡಲು ಸಾಕಷ್ಟು ಬಲಶಾಲಿಗಳಾಗಿದ್ದಾರೆ

ಹೌದು.. ಇದು ಅಮೆರಿಕ ಸ್ವತಃ ತಾನೆ ಮಾಡಿದಕೊಂಡ ಎಡವಟ್ಟು. ಯಾವುದೆ ಪ್ಲಾನ್ ಇಲ್ಲದೆ ಏಕಾಏಕಿ ಅಫ್ಘಾನ್ ನಲ್ಲಿ ನೆಲೆಸಿದ್ದ ಸೇನೆಯನ್ನು ಹಿಂದಕ್ಕೆ ಹೊತ್ತು ತಂದು ಬಿಟ್ಟಿತ್ತು. ಅಲ್ಲಿದ್ದ ಸೇನಾ ಪರಿಕರಗಳನೆಲ್ಲ ಅಫ್ಘಾನ್ ಘನಿ ಸರ್ಕಾರಕ್ಕೆ ಬಿಟ್ಟುಕೊಟ್ಟು ಖಾಲಿ ಕೈಯಲ್ಲಿ ವಾಪಾಸ್ ಆಗಿತ್ತು. ಇದೀಗ ಅಷ್ಟು ಶಸ್ತ್ರಾಸ್ತ್ರಗಳು ತಾಲಿಬಾನಿಗಳ ವಶದಲ್ಲಿದೆ. ಉಗ್ರರು ಈ ಹಿಂದೆ ಕುತಂತ್ರ ಯೋಚನೆಯಿಂದ ಅಲ್ಲಿ ಇಲ್ಲಿ ಸಹಾಯ ಬೇಡಿ ತನ್ನ ಕೌರ್ಯವನ್ನು ಮೆರೆದಿರುವುದು ಎಲ್ಲರಿಗೂ ಗೊತ್ತೆ ಇದೆ. ಆದರೆ ಇಂದು ಅವರ ಬಳಿ ಎಲ್ಲ ರೀತಿ, ಶಕ್ತಿಶಾಲಿ ವೆಪನ್ಸ್ ಗಳಿದೆ.. ಅಮೆರಿಕ ದಾಳಿ ಮಾಡಿದರೆ ಪ್ರತಿದಾಳಿ ಮಾಡಲು ಅವರು ಸಿದ್ಧರಿದ್ದಾರೆ. ಇದೆಲ್ಲದಿಕ್ಕಿಂತ ಹೆಚ್ಚಾಗಿ ಬಿಲಿಯನ್ ಡಾಲರ್ ಗಟ್ಟಲೆ ಹಣ ಅಫ್ಘಾನ್ ಪಾಲಾಗಿದೆ. ಹೀಗಿರುವಾಗ ಅವರನ್ನು ಎದುರು ಹಾಕಿಕೊಳ್ಳೋದು ಅಷ್ಟು ಸುಲಭನಾ ?

ಅಮೆರಿಕದ ಮಾಹಿತಿಗಳು ತಾಲಿಬಾನಿಗಳ ಕೈಯಲ್ಲಿ
20 ವರ್ಷಗಳ ಕಾಲ ಅಫ್ಘಾನ್ ನಲ್ಲಿ ನೆಲೆಸಿದ್ದ ಅಮೆರಿಕ, ತಮ್ಮ ದೇಶದ ಶಸ್ತ್ರಾಸ್ತ್ರಗಳನ್ನು ಬಿಟ್ಟು ಹೋಗುವುದಲ್ಲದೆ ಹಲವು ಗುಪ್ತಚರ ಮಾಹಿತಿಯನ್ನು ಬಿಟ್ಟು ಹೋಗಿದೆ. ಅಮೆರಿಕನ್ ಅಧಿಕಾರಿಗಳ, ಸೈನಿಕರ ಬಯೋ ಮೆಟ್ರಿಕ್ ಫಿಂಗರ್ ಪ್ರಿಂಟ್ ತಾಲಿಬಾನಿಗಳ ವಶವಾಗಿದೆ. ಇದರಿಂದ ತಾಲಿಬಾನಿಗಳು ತಲೆ ಉಪಯೋಗಿಸಿದರೇ ಅಮೆರಿಕದ ಹಲವು ಮಾಹಿತಿಗಳು ತಾಲಿಬಾನ್ ಪಾಲಾಗಿ ದೇಶಕ್ಕೆ ಮತ್ತೊಂದು ಹೊಡೆತ ಬೀಳುವುದರಲ್ಲಿ ಸಂಶಯವೇ ಇಲ್ಲ.

ಅಫ್ಘಾನ್ ತೊರೆಯುವುದಾಗಿ ಮಾಜಿ ಅಧ್ಯಕ್ಷ ಟ್ರಂಪ್ ತಾಲಿಬಾನಿಗಳಿಗೆ ಮಾತು ನೀಡಿದ್ದರಂತೆ. ಟ್ರಂಪ್ ಅಧ್ಯಕ್ಷನಾಗಿದ್ದಾಗ, ತಾಲಿಬಾನಿಗಳನ್ನು ಭೇಟಿಯಾಗಿದ್ದ. ಅಲ್ಲಿ ಹಲವು ವಿಚಾರಗಳನ್ನು ಚರ್ಚಿಸಿದ ಮೇಲೆ ಮೇ 1 2021 ರಂದು ಅಫ್ಘಾನ್ ನಿಂದ ಸೇನೆ ಹಿಂಪಡೆಯುವುದಾಗಿ ಮಾತು ಕೊಟ್ಟಿದ್ದನಂತೆ. ಈ ಕಾರಣ ತಾಲಿಬಾನಿಗಳು ಬೈಡನ್ ಸರ್ಕಾರಕ್ಕೆ ಸೇನೆ ಹಿಂಪಡೆಯದಿದ್ದರೆ ಬೇರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆಗಳನ್ನು ಹಾಕುತ್ತಿದ್ದರಂತೆ. ಟ್ರಂಪ್ ಕೊಟ್ಟ ಮಾತಿಗೆ ಬದ್ಧರಾಗಿ ನಾವು ಅಲ್ಲಿಂದ ಸೇನೆ ಹಿಂಪಡೆದೆವು ಎಂದು ಅಷ್ಟೋ ವಿವಾದವನ್ನು ನೇರವಾಗಿ ಟ್ರಂಪ್ ಹೆಗಲ ಮೇಲೆ ಹೊರೆಸುತ್ತಾರೆ ಬೈಡನ್.

blank

 

ಅಫ್ಘಾನ್ ತೊರೆದರೆ ಏನಾಗಬಹುದು ಎನ್ನುವ ಅರಿವು ಇರ್ಲಿಲ್ವಾ ?
ಬೈಡನ್​ಅವರಿಗೆ ಗುಪ್ತಚರ ಇಲಾಖೆ ಹೇಳಿದ್ದಾದರು ಏನು ?

ಬೈಡನ್ ಸರ್ಕಾರಕ್ಕೆ ಅಫ್ಘಾನ್ ತೊರೆದರೆ ಹೀಗೇ ಆಗುತ್ತೆ ಅನ್ನೋ ಮಾಹಿತಿ ಇರಲಿಲ್ವಾ ? ಈ ಪ್ರಶ್ನೆ ಸಹಜವಾಗಿ ಕಾಡುತ್ತೆ.. ಕಾರಣ ಅಫ್ಘಾನ್ ನಲ್ಲಿ ನಡೆಯುತ್ತಿರುವ ವಿದ್ಯಾಮಾನಗಳು ಜಗತ್ತಿಗೆ ವದಗಿರುವ ಕುತ್ತು. ಈ ಬಗ್ಗೆ ಅಮೆರಿಕನ್ ಇಂಟಲಿಜೆನ್ಸ್ ಗೆ ಮಾಹಿತಿ ಇತ್ತಾ? ಅಥವಾ ಗೊತ್ತಿದ್ದರು ಈ ನಡೆ ತೋರಿಸಿ ಸರ್ಕಾರ ವೈಫಲ್ಯ ಮೆರೆದಿದ್ಯಾ ಅನ್ನೋದು ಗೊತ್ತಿಲ್ಲ. ಅಮೆರಿಕ ಅಫ್ಘಾನ್ ನಿಂದ ಹೊರ ಬಂದ ತಕ್ಷಣ ಅಲ್ಲಿ ತಾಲಿಬಾನಿಗಳು ನುಗ್ಗಿ ಬರುವುದರ ಬಗ್ಗೆ ಸುಳಿವೆ ಇಲ್ಲದವರ ರೀತಿ ವರ್ತಿಸಿದೆ ಅಮೆರಿಕ. ಸೇನೆ ಹೊರ ಹೋಗುವುದನ್ನೆ ಕಾದು ಕುಳಿತ್ತಿದ್ದ ತಾಲಿಬಾನಿಗಳು ಸರಿಯಾದ ಸಮಯ ನೋಡಿ ಕಾಬುಲ್ ಗೆ ಲಗ್ಗೆ ಇಟ್ಟು ಇಷ್ಟೆಲ್ಲ ಎಡವಟ್ಟು ನಡೆದು ಹೋಗಿದಿ. ಈ ಬಗ್ಗೆ ಮಾಜಿ ಗುಪ್ತಚರ ರಕ್ಷಣಾ ಕಾರ್ಯದರ್ಶಿ ಕ್ರಿಸ್ ಮಿಲ್ಲರ್ ಏನು ಹೇಳಿದ್ದಾರೆ ಗೊತ್ತಾ ?

ನಾವು ನಮ್ಮ ದೇಶದಲ್ಲಿ ನಮ್ಮ ಗುಪ್ತಚರ ಮೌಲ್ಯಮಾಪನ ಮಾಡುವ ವಿಧಾನದಲ್ಲಿ ಏನೋ ತಪ್ಪಿದೆ. ಇದು ಹೀಗೆ ಆಗುತ್ತದೆ ಎಂದು ಮೊದಲೇ ಊಹಿಸಬಹುದಾಗಿತ್ತು. ಈಗ ಆಗುತ್ತಿರುವ ದುರಂತದ ಪ್ರಮಾಣಗಳು ನೇರವಾಗಿ ದೇಶದ ಗುಪ್ತಚರದ ವೈಫಲ್ಯ.
 – ಕ್ರಿಸ್ ಮಿಲ್ಲರ್ , ಮಾಜಿ ಗುಪ್ತಚರ ರಕ್ಷಣಾ ಕಾರ್ಯದರ್ಶಿ

ಎಚ್ಚರಿಕೆಗಳು ಸ್ಪಷ್ಟವಾಗಿದ್ದವು, ಯುಎಸ್ ಪಡೆಗಳು ಹೊರಬಂದ ನಂತರ ಅಫ್ಘಾನ್ ಸರ್ಕಾರ ಬೀಳುವ ಸಾಧ್ಯತೆಯಿದೆ ಎಂದು ಎಲ್ಲರಿಗೂ ಅರಿವಿತ್ತು. ಆದರೆ ಗುಪ್ತಚರ ಏಜೆನ್ಸಿಗಳು ಮತ್ತು ಅಂತಿಮವಾಗಿ ಅಧ್ಯಕ್ಷ ಜೋ ಬಿಡೆನ್ ಇದು ಎಷ್ಟು ಬೇಗನೆ ಆಗುತ್ತದೆ ಎಂದು ತಿಳಿದ್ದಿದರೋ ಇಲ್ಲವೋ ಗೊತ್ತಿಲ್ಲ.

ಬೈಡನ್​​ಗೆ ಅಶ್ರಫ್ ಘನಿಯಿಂದಲೂ ದೇಶ ತೊರೆಯದಂತೆ ಸಲಹೆ
ಸೇನೆ ಹಿಂದಕ್ಕೆ ಸರಿಯುವುದು ತಾಲಿಬಾನಿಗಳಿಗೆ ಆಮಂತ್ರಣ ನೀಡಿದಂತೆ

ಬೈಡನ್ ಅಫ್ಘಾನ್ ಮಾಜಿ ಅಧ್ಯಕ್ಷ ಅಶ್ರಫ್ ಘನಿಯವರನ್ನು ಬೇಟಿ ಮಾಡಿದಾಗ, ದೇಶವನ್ನು ಕೂಡಲೇ ತೊರೆದು ಹೋಗ ಬೇಡಿ ಎಂದು ಸಲಹೆ ನೀಡಿದ್ದರಂತೆ. ಅಫ್ಘಾನ್ ನಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳನ್ನು ಹತ್ತಿರದಿಂದ ನೋಡಿದ್ದ ಅಶ್ರಫ್ ಘನಿ, ಅಮೆರಿಕ ಸೇನೆ ಹಿಂದಕ್ಕೆ ಸರಿದರೆ ತಾಲಿಬಾನಿಗಳನ್ನು ಅಟ್ಟಹಾಸ ಮೆರೆಯಲು ಸ್ವಾಗತ ನೀಡಿದಂತೆ ಎಂದು ಬೈಡನ್ ರನ್ನು ಬೇಟಿ ಮಾಡಿದಾಗ ತಿಳಿಸಿದ್ದರು. ಇಷ್ಟೆಲ್ಲಾ ಮಾಹಿತಿ ಇದ್ದರೂ ಬೈಡನ್ ಈ ನಿರ್ಧಾರವನ್ನು ಯಾಕಾಗಿ ತೆಗೆದುಕೊಂಡರು ಎನ್ನುವುದು ಈಗ ಎಲ್ಲರಲ್ಲೂ ಇರುವ ಪ್ರಶ್ನೆ.

ಬೈಡನ್ ಮುಂದಿರುವ ಸವಾಲುಗಳೇನು?
ತಾಲಿಬಾನಿಗಳು ಸಂಪೂರ್ಣವಾಗಿ ಅಫ್ಘಾನ್ ತೊರೆಯಲು ಈ ತಿಂಗಳ ಕೊನೆಯಂದು ಡೆಡ್ ಲೈನ್ ನೀಡಿದ್ದಾರೆ. ಅಂದ್ರೆ ಇನ್ನು ಮೂರು ದಿನಗಳಲ್ಲಿ ಅಲ್ಲಿರುವ ಅಮೆರಿಕನ್ನರು ಹಾಗೂ ಹೊರ ಹೋಗಲು ಬಯಸುವ ಅಫ್ಘಾನಿಗಳನ್ನು ಹೊತ್ತು ಬರಬೇಕು. ಏರ್ ಪೋರ್ಟ್ ಬಾಗಿಲಿನಲ್ಲಿ ಲಕ್ಷಾಂತರ ಜನ ಅಮೆರಿಕ ಸೇನೆಯನ್ನು ನಂಬಿ ಕುಳಿತ್ತಿದ್ದಾರೆ. ಇನ್ನು 3 ದಿನಗಳಲ್ಲಿ ಅಷ್ಟು ಜನರನ್ನು ಹೊತ್ತು ಬರುವುದು ಅಸಾಧ್ಯ. ಇದನ್ನು ಬೈಡನ್ ಹೇಗೆ ನಿಭಾಯಿಸುತ್ತಾರೆ ಅನ್ನೋದು ಅವರ ಮುಂದಿರುವ ಸವಾಲು. ಇನ್ನು ಅಫ್ಘಾನ್ ನಿಂದ ಹೊರ ಹೋಗುವವರೆಗೂ ಯಾವುದೆ ತೊಂದರೆ ಆಗುವುದಿಲ್ಲ ಎಂದು ಮಾತು ಕೊಟ್ಟಿದ್ದ ತಾಲಿಬಾನಿಗಳ ನಾಡಲ್ಲಿ ಬಾಂಬ್ ಬ್ಲಾಸ್ಟ್ ಮತ್ತೊಂದು ಆತಂಕ ಹುಟ್ಟಿಸಿದೆ. ಇದರಿಂದ ಮುಂದೇನಾಗುವದು ಎನ್ನುವುದು ಬೈಡನ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಿಂತಿದೆ.

ಇಷ್ಟೆಲ್ಲದರ ನಡುವೆ ಅಮೆರಿಕದಲ್ಲಿ ಬೈಡನ್ ಸರ್ಕಾರದ ಮೇಲೆ ನಂಬಿಕೆ ಕ್ಷೀಣಿಸುತ್ತಿದೆ. ಅಲ್ಲಿಯ ಜನರು ಬೈಡನ್ ಆಳ್ವಿಕೆಯನ್ನು ಕಡೆಗಣಿಸುತ್ತಿದ್ದಾರೆ. ಟ್ರಂಪ್ ಇದ್ದಿದ್ದರೆ ಈ ಪರಿಸ್ಥಿತಿಯನ್ನು ಬೇರೆ ರೀತಿಯಲ್ಲಿ ನೆರೆವೇರೆಸುತ್ತಿದ್ದ ಎನ್ನುವ ಮಾತುಗಳು ಕೇಳಿ ಬರ್ತಾ ಇದೆ. ಈಗ ಬೈಡನ್ ರವರ ಮೇಲೆ ಸಾಕಷ್ಟು ಜವಾಬ್ದಾರಿಗಳು ನಿಂತಿದ್ದು, ಎಲ್ಲವನ್ನು ಹೇಗೆ ಬಗೆಹರಿಸಿ, ಉಗ್ರರನ್ನು ಮಟ್ಟ ಹಾಕುತ್ತಾರೆ.. ಕಾದು ನೋಡ್ಬೇಕಿದೆ.

ಒಬ್ಬ ರಾಜ ಎಂದ ಮೇಲೆ ಆತನಿಗೆ ಹಲವು ಕಣ್ಣುಗಳಿರ ಬೇಕು. ಒಂದೇ ವಿಷಯವನ್ನು ನೂರು ದಿಕ್ಕಿನಲ್ಲಿ ಯೋಚಿಸಬೇಕು. ಇಲ್ಲದಿದ್ದರೆ ಹೀಗೆ ಸೋಲನ್ನು ಒಪ್ಪಿಕೊಳ್ಳುವ ಪರಿಸ್ಥಿತಿಗೆ ತಲುಪಿ ಬಿಡ್ತಾರೆ. ಅಫ್ಘಾನ್ ಬಿಟ್ಟು ಹೊರ ಬರಲು ಬಯಸುವವರು ಪರಿಸ್ಥಿತಿ ಕರುಣಾಜನಕವಾಗಿದೆ. ಬೈಡನ್ ಕೊಟ್ಟ ಮಾತು ಹೇಗೆ ಉಳಿಸಿಕೊಳ್ತಾರೋ ಗೊತ್ತಿಲ್ಲ.

Source: newsfirstlive.com Source link