‘ದಸರಾ’ ಸೆಟ್​​ನಲ್ಲಿ ಬ್ಯುಸಿ ಆದ ನೀನಾಸಂ ಸತೀಶ್..! 

‘ದಸರಾ’ ಸೆಟ್​​ನಲ್ಲಿ ಬ್ಯುಸಿ ಆದ ನೀನಾಸಂ ಸತೀಶ್..! 

ಸ್ಯಾಂಡಲ್​ವುಡ್​​​ನ ಅಭಿನಯ ಚತುರ ನೀನಾಸಂ ಸತೀಶ್ ಸದ್ದಿಲ್ಲದೆ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಯಾಗಿರುತ್ತಾರೆ.. ಸದ್ಯ ಈಗ ನೀನಾಸಂ ಸತೀಶ್ ಏನ್ ಮಾಡ್ತಿದ್ದಾರೆ ಗೊತ್ತಾ..? ದಸರಾ ಸೆಟ್​​ನಲ್ಲಿ ನಿಂತಿದ್ದಾರೆ.

ನೀನಾಸಂ ಸತೀಶ್ ನಟನೆಯ ಚಲನಚಿತ್ರ ಗೋಧ್ರಾ ಇದ್ದಿದ್ದು ಈಗ ಗೋಧ್ರಾನ್ ಆಗುತ್ತಿದೆ. ಗೋಧ್ರಾನ್ ಸಿನಿಮಾದ ಮೂಲಕ ಪ್ರೇಕ್ಷಕರನ್ನ ರಂಜಿಸಲಿದ್ದಾರೆ ನೀನಾಸಂ ಸತೀಶ್.. ಗೋಧ್ರಾನ್ ಆದ ನಂತರ ಮುಂದೇನು ಬ್ರಹ್ಮಾಚಾರಿ ಎಂದು ಕೇಳಿದಾಗ ಉತ್ತರ ಅವರಿಂದ ಬಂದಿದ್ದು ಪೆಟ್ರೋಮ್ಯಾಕ್ಸ್​​.

ಇದನ್ನೂ ಓದಿ: ಒಳ್ಳೆ ಹುಡುಗ ಮೀಟ್ಸ್​ ಡ್ರೋಣ್ ಬಾಯ್..! ‘ಇನ್ಮೇಲೆ ಪ್ರತಾಪ್ ನನ್ನ ತಮ್ಮ’ ಎಂದ ಪ್ರಥಮ್

ವಿಜಯ್ ಪ್ರಸಾದ್ ಅವರ ಪೆಟ್ರೋಮ್ಯಾಕ್ಸ್ ಸಿನಿಮಾದ ನಂತರ ನೀನಾಸಂ ಸತೀಶ್ ತಮಿಳು ಸಿನಿಮಾವೊಂದರಲ್ಲಿ ನಟಿಸಿ ಬಂದರು.. ಈಗ ತಮಿಳು ಸಿನಿಮಾದ ನಂತರ ಲೂಸಿಯಾ ಹೀರೋ ದಸರಾ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಯಾಗಿದ್ದಾರೆ. ಯಾವುದು ಈ ದಸರಾ ಸಿನಿಮಾ ಅನ್ನೋದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ದಸರಾ ಸಿನಿಮಾ ನಟಿ ಶರ್ಮಿಳಾ ಮಾಂಡ್ರೆ ನಿರ್ಮಾಣದ ಜೊತೆಗೆ ನಟನೆಯನ್ನೂ ಮಾಡ್ತಿರೋ ಸಿನಿಮಾ.. ಅರವಿಂದ್ ಶಾಸ್ತ್ರಿ ಕಲ್ಪನೆಯಲ್ಲಿ ದಸರಾ ಸಿನಿಮಾದ ಮೂಡಿಬರುತ್ತಿದೆ.

ಇದನ್ನೂ ಓದಿ: ‘ಸೀತಾರಾಮ ಕಲ್ಯಾಣ’ ಮುಗಿಸಿ ಸೀದಾ ಬಾಸ್ಕೆಟ್ ಬಾಲ್ ಗ್ರೌಂಡಲ್ಲಿ ನಿಂತಿದ್ಯಾಕೆ ‘ರೈಡರ್’ ನಿಖಿಲ್

blank

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ದಸರಾ ಸಿನಿಮಾದ ಶೂಟಿಂಗ್ ಪ್ರಾರಂಭವಾಗಿತ್ತು. ಲಾಕ್ ಡೌನ್ ಕಾರಣಗಳಿಂದ ಕೊಂಚ ಶೂಟಿಂಗ್ ಡಿಲೆ ಆಗುತ್ತು.. ಆದ್ರೆ ಈ ಬೆಂಗಳೂರಿನ ಸುತ್ತಾ ಮುತ್ತಾ ದಸರಾ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.. ಫೈಟಿಂಗ್ ಸೀನ್ ಒಂದನ್ನ ಜೆ.ಪಿ.ನಗರ ಗ್ರೌಂಡ್ ಒಂದರಲ್ಲಿ ಶೂಟ್ ಮಾಡುತ್ತಿದೆ ದಸರಾ ಫಿಲ್ಮ್ ಟೀಮ್​.

ಥಿಯೇಟರ್​​ಗಳೆಲ್ಲ ಪೂರ್ಣ ಪ್ರಾಮಾಣದಲ್ಲಿ ಪ್ರಾರಂಭವಾಗಿ ಮೊದಲಿನಂತೆ ಪ್ರೇಕ್ಷಕರ ಥಿಯೇಟರ್ ಅಂಗಳಕ್ಕೆ ಬರಲು ಶುರುವಾಗುತ್ತಿದಂಗೆ ನೀನಾಸಂ ಸತೀಶ್ ಅವರ ಸಿನಿಮಾಗಳು ಒಂದೊಂದಾಗಿಯೇ ರಂಜಿಸಲು ಮುಂದೆ ಬರಲಿವೆ.

ಇದನ್ನೂ ಓದಿ: ಶಾರುಖ್ ಖಾನ್ ಪುತ್ರಿ ಸುಹಾನಾಗೆ ಕಿಸ್ ಕೊಟ್ಟ ‘ಸೂರ್ಯ’; ಫೋಟೋ ವೈರಲ್..!

Source: newsfirstlive.com Source link