ರಾಜ್ಯಾದ್ಯಂತ ವರುಣನ ಆರ್ಭಟ – ಉಡುಪಿಯಲ್ಲಿ 2 ದಿನ ಆರೆಂಜ್ ಅಲರ್ಟ್

ಬೆಂಗಳೂರು: ರಾಜ್ಯಾದ್ಯಂತ ವರುಣನ ಆರ್ಭಟ ಜೋರಾಗಿದೆ. ವಿಜಯಪುರದಲ್ಲಿ ಶುಕ್ರವಾರ ಸುರಿದ ಭಾರೀ ಮಳೆಗೆ ಬಸವನಬಾಗೇವಾಡಿ ತಾಲೂಕಿನ ನೇಗಿನಾಳ-ಮುಳ್ಳಾಳ ಡೋಣಿ ಹಳ್ಳದಲ್ಲಿ 23 ವರ್ಷದ ಮಂಜುನಾಥ್ ಪಾಟೀಲ್ ನೀರು ಪಾಲಾಗಿದ್ದಾನೆ. ಯಾದಗಿರಿಯ ಶಹಾಪೂರ, ಸುರಪುರ, ಹುಣಸಗಿ, ಗುರುಮಿಠಕಲ್‍ನಲ್ಲೂ ಧಾರಾಕಾರ ಮಳೆ ಸುರಿದಿದೆ.

ತುಮಕೂರಿನ ಗುಬ್ಬಿ, ಕುಣಿಗಲ್ ಸೇರಿ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರದಲ್ಲಿ ಮಳೆಯಾಗಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದೆ. ಉಡುಪಿಯಲ್ಲಿ 2 ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಕನ್ನಡದಲ್ಲಿ ಗುಡ್ಡ ಕುಸಿತದಿಂದ ಬಂದ್ ಆಗಿದ್ದ ಜೋಯಿಡಾ-ಕಾರವಾರ ಹೆದ್ದಾರಿ ಮುಕ್ತವಾಗಿದೆ. ಧುಮ್ಮಿಕ್ಕಿ ಹರಿಯುತ್ತಿರುವ ಅಣಶಿ ಫಾಲ್ಸ್ ಗೆ ಪ್ರವಾಸಿಗರ ದಂಡೇ ಹರಿದುಬರ್ತಿದೆ. ಈ ಮಧ್ಯೆ, ಅಸ್ಸಾಂನಲ್ಲೂ ಭಾರೀ ವರ್ಷಧಾರೆ ಆಗಿದ್ದು, ನದಿಗಳು ಅಪಾಯಮಟ್ಟದಲ್ಲಿ ಹರೀತಿವೆ. 11 ಜಿಲ್ಲೆಗಳಲ್ಲಿ ಪ್ರವಾಹ ಆತಂಕ ಎದ್ದಿದೆ. ಇದನ್ನೂ ಓದಿ: ಮೈಸೂರು ರೇಪ್ ಪ್ರಕರಣ ಬೆನ್ನತ್ತಿದ ಆ ಸೂಪರ್ ಕಾಪ್ಸ್ ಇವರೇ ನೋಡಿ!

Source: publictv.in Source link