ಕಾರ್ಮಿಕ ಸಚಿವರ ಕ್ಷೇತ್ರದಲ್ಲಿ ಕಾರ್ಮಿಕರಿಗಿಲ್ಲ ಒಂದು ವರ್ಷದಿಂದ ಸಂಬಳ

– ವೇತನವಿಲ್ಲದೇ ದುಡಿಯುತ್ತಿರುವ ಗಾಂಧಿ ಮ್ಯೂಸಿಯಮ್ ಸಿಬ್ಬಂದಿ
– ಹಾಳು ಕೊಂಪೆಯಾದ ಗಾಂಧಿ ಸ್ವಾತಂತ್ರ್ಯ ಸ್ಮಾರಕ ಭವನ

ಕಾರವಾರ: ಟಾಯ್ಲೆಟ್ ನಲ್ಲಿ ಬಿದ್ದ ಪುಸ್ತಕಗಳು, ಪಾಳು ಬಿದ್ದ ಗಾಂಧಿ ವಸ್ತುಸಂಗ್ರಹಾಲಯದ ಕಟ್ಟಡ, ಮೂಲೆ ಸೇರಿದ ಗಾಂಧಿ ಪ್ರತಿಮೆ. ಒಂದು ವರ್ಷದಿಂದ ಸಂಬಳ ಇಲ್ಲದೇ ದುಡಿಯುವ ಕೆಲಸಗಾರರು. ಇಂತದ್ದೊಂದು ಸ್ಥಿತಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಕ್ಷೇತ್ರದಲ್ಲಿದೆ. ಅಲ್ಲಿನ ಸ್ಥಿತಿ ನೋಡಿದರೆ ಎಂತವರೂ ತಲೆತಗ್ಗಿಸುವಂತಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲ ನಗರದ ಹೃದಯ ಭಾಗದಲ್ಲಿರುವ ಗಾಂಧಿ ಸ್ವತಂತ್ರ್ಯ ಸಂಗ್ರಾಮ ಸ್ಮಾರಕ ಭವನ ಹಾಗೂ ವಸ್ತು ಸಂಗ್ರಹಾಲಯ ಇದೀಗ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ.

ಹೀಗಿದೆ ಅಲ್ಲಿನ ಸ್ಥಿತಿ
ಎಲ್ಲಿ ನೋಡಿದರಲ್ಲಿ ಕಸದ ರಾಶಿ ,ಮುರಿದು ಬಿದ್ದ ಕಿಟಕಿ, ಮೂಲೆ ಸೇರಿದ ಗಾಂಧಿ ಪ್ರತಿಮೆ, ಟಾಯ್ಲೆಟ್ ನಲ್ಲಿ ಸಂಗ್ರಹಿಸಿಟ್ಟ ಪುಸ್ತಕ. ವಿದ್ಯುತ್ ಇಲ್ಲದ ಬಲ್ಪುಗಳು, ಮುರಿದ ಫ್ಯಾನ್ ಗಳು ಹೀಗೆ ಎದುರು ನೋಡುತ್ತಿದ್ದಂತೆ ಹಳೆಯ ಸಿನಿಮಾದಲ್ಲಿ ಬರುವ ಭೂತ ಬಂಗಲೆಯಂತೆ ಭಾಸವಾಗುತ್ತದೆ.

2017ರಲ್ಲಿ ಕೋಟಿ ಮೊತ್ತದ ಅನುದಾನದಲ್ಲಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಅಂಕೋಲದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ನೆನಪಿಗಾಗಿ ಸ್ಮಾರಕ ಭವನ ಹಾಗೂ ಗಾಂಧಿಜೀ ವಸ್ತು ಸಂಗ್ರಾಲಯವನ್ನು ನಿರ್ಮಾಣ ಮಾಡಲಾಗಿತ್ತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಜಿಲ್ಲೆಯಲ್ಲೇ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸ್ಮಾರಕ ಭವನವನ್ನು ಲೋಕಾರ್ಪಣೆ ಮಾಡಿದ್ದರು.

ಇದನ್ನು ನೋಡಿಕೊಳ್ಳಲು ಕಂದಾಯ ಇಲಾಖೆಯಿಂದ ಇಬ್ಬರು ಹಾಗೂ ಪುರಸಭೆ ಯಿಂದ ಓರ್ವ ನೌಕರನನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಯಿತು. ಕಳೆದ ಒಂದು ವರ್ಷದ ವರೆಗೆ ಚೆನ್ನಾಗಿಯೇ ಇದ್ದ ಈ ಭವನ ಇದೀಗ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷದಿಂದ ಹಾಳು ಕೊಂಪೆಯಾಗಿದೆ.

blank

ವಸ್ತು ಸಂಹ್ರಹಾಲಯ ಹಾಗೂ ಗ್ರಂಥಾಲಯದಲ್ಲಿ ಇರುವ ವಸ್ತುಗಳನ್ನು ಇರಿಸಲು ವ್ಯವಸ್ತೆ ಇಲ್ಲದೇ ಬೇಕಾಬಿಟ್ಟಿ ಇಡಲಾಗಿದೆ. ಓದುಗರ ಕೈಯಲ್ಲಿ ಇರಬೇಕಾದ ಪುಸ್ತಕಗಳು ಟಾಯ್ಲೆಟ್ ಸೇರಿದೆ. ಇನ್ನು ವಿದ್ಯಾರ್ಥಿಗಳ ಅಧ್ಯಯನಕ್ಕೆ ನಿರ್ಮಿಸಿದ ಕಟ್ಟಡ ಹೊಸದಾಗಿದ್ದರೂ ಯಾರೂ ಒಳಗೆ ಹೋಗದಷ್ಟು ಕೆಟ್ಟದಾಗಿದ್ದು ವಿದ್ಯುತ್ ಸಂಪರ್ಕ ಸಹ ಕಡಿತವಾಗಿದ್ದು ಇಲಿ ಹೆಗ್ಗಣದ ಗೂಡಾಗಿದೆ. ಇದನ್ನೂ ಓದಿ: ಮೈಸೂರು ಕೇಸಲ್ಲಿ ಪೊಲೀಸರ ಪಾಲಿಗೆ ಬೆಳಕಾಗಿದ್ದೇ ಬಸ್ ಟಿಕೆಟ್ ಕೊಟ್ಟ ಸುಳಿವು, ಆ ಮೊಬೈಲ್ ನಂಬರ್!

blank

ಇನ್ನು ಇಲ್ಲಿನ ಗುತ್ತಿಗೆ ಆಧಾರದಲ್ಲಿ ನಿಯೋಜನೆ ಗೊಂಡ ಲೈಬ್ರರಿಯನ್ ಗೆ ಐದು ಸಾವಿರ ಕನಿಷ್ಟ ಕೂಲಿ ಹಾಗೂ ಇಲ್ಲಿನ ಕೆಲಸಗಾರನಿಗೆ 2500 ರೂ.ಗಳ ಕನಿಷ್ಟ ವೇತನ ನಿಗದಿ ಮಾಡಿದ್ದು ಕಾರ್ಮಿಕ ನಿಯಮಗಳ ಪ್ರಕಾರ ಇವರಿಗೆ ಸಿಗಬೇಕಾದ ಯಾವ ಸೌಲಭ್ಯವೂ ಈವರೆಗೂ ದೊರೆತಿಲ್ಲ. ಕಳೆದ ಒಂದು ವರ್ಷದಿಂದ ಇಲ್ಲಿನ ಇಬ್ಬರು ನೌಕರರಿಗೆ ಸಂಬಳ ಸಹ ಸಿಗದೇ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣದ ಎಂಟ್ರಿ ಗೇಟ್ ಬಳಿ ಮತ್ತೆ ಫೈರಿಂಗ್

blank

ಕೋಟಿಗಟ್ಟಲೇ ಗಾಂಧೀಜಿ ಹೆಸರಲ್ಲಿ ಸ್ವಾತಂತ್ರ್ಯ ಚಳುವಳಿಗಾರರ ನೆನಪಿಗೆ ನಿರ್ಮಿಸಿದ ಈ ಭವನ ಈಗ ಹಾಳು ಕೊಂಪೆಯಾಗಿದೆ. ಅಧ್ಯಯನಕ್ಕೆ ಬರುವ ವಿದ್ಯಾರ್ಥಿಗಳಿಗೆ ಯಾವ ಪುಸ್ತಕಗಳು ಸಿಗದಂತ ಸ್ಥಿತಿ ಇದೆ. ಪ್ರತಿ ದಿನ ಗ್ರಂಥಾಲಯಕ್ಕೆ ಬರುವವರಿಗೆ ಮೂಲ ಸೌಕರ್ಯ ಸಹ ಇಲ್ಲ. ಇದನ್ನೂ ಓದಿ: ಮೈಸೂರು ರೇಪ್ ಪ್ರಕರಣ ಬೆನ್ನತ್ತಿದ ಆ ಸೂಪರ್ ಕಾಪ್ಸ್ ಇವರೇ ನೋಡಿ!

blank

ಇಲ್ಲಿನ ನೌಕರರು ಕೊರೊನಾ ಸಂದರ್ಭದಲ್ಲಿ ಸಹ ಕರ್ತವ್ಯ ನಿರ್ವಹಿಸಿದ್ದರೂ ಒಂದು ವರ್ಷದಿಂದ ಸಂಬಳ ಸಹ ನೀಡಿಲ್ಲ. ಇನ್ನು ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಪುಸ್ತಕಗಳನ್ನು ಓದಲು ಬರುವ ಜನರು ಪುಸ್ತಕಗಳು ಸಿಗದೇ ಮರಳಿ ಹೋಗುವಂತಾಗಿದೆ. ಹೀಗಿರುವಾಗ ಅಧಿಕಾರಿಗಳು ಮಾತ್ರ ಎಲ್ಲಾ ಸರಿಮಾಡುತ್ತೇವೆ ಎನ್ನುವ ಭರವಸೆಗೆ ಸೀಮಿತವಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕೊಂಚ ಇಳಿಕೆಯಾದ ಕೊರೊನಾ – ಇಂದು 1,229 ಹೊಸ ಪ್ರಕರಣ

blank

ಉತ್ತರ ಕನ್ನಡ ಜಿಲ್ಲೆಯಲ್ಲೇ ಅಂಕೋಲ ತಾಲೂಕಿನಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಚಳುವಳಿ ತೀವ್ರಗೊಂಡಿತ್ತು. ಹಲವರು ಬ್ರಿಟೀಷರ ಚಡಿಏಟು ತಿಂದು ಪ್ರಾಣವನ್ನು ಕಳೆದುಕೊಂಡಿದ್ದರು. ಕರ ಅಸಹಕಾರ ಚಳುವಳಿಯಿಂದ ಹಿಡಿದು ಉಪ್ಪಿನ ಸತ್ಯಾಗ್ರಹದವರೆಗೂ ಇಲ್ಲಿನ ಜನರು ಗಾಂಧೀಜಿಯವರ ಆದರ್ಶದೊಂದಿಗೆ ಜೊತೆಯಾಗಿದ್ದರು. ಅವರ ಹೋರಾಟದ ಫಲ ಇಂದು ನಾವು ಅನುಭವಿಸುತಿದ್ದೇವೆ. ಇಂತವರಿಗೆ ಗೌರವ ಸಲ್ಲಿಸುವ ನೆಪದಲ್ಲಿ ಇದೀಗ ಗಾಂಧೀಜಿಯವರ ಹೆಸರಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಡೆದುಕೊಳ್ಳುವ ರೀತಿ ಮಾತ್ರ ಎಂತವರಲ್ಲೂ ಹೇಸಿಗೆ ಹುಟ್ಟಿಸುತ್ತದೆ. ಇನ್ನಾದರೂ ಇಲ್ಲಿನ ವ್ಯವಸ್ಥೆಯನ್ನು ಸರಿಪಡಿಸಿ ಜನರಿಗೆ ಇದರ ಸೌಲಭ್ಯ ದೊರಕುವಂತಾಗಲಿ ಎಂಬುದೇ ನಮ್ಮ ಆಶಯವಾಗಿದೆ. ಇದನ್ನೂ ಓದಿ: ಸಚಿವೆಯಾದರೂ ಹೆಣ್ಣು ಹೆಣ್ಣೇ ಅಲ್ವಾ? ಅವರ ಮನೆಯಲ್ಲೇ ಹಾಗಾದ್ರೆ?: ಹೆಚ್.ಎಂ.ರೇವಣ್ಣ

Source: publictv.in Source link