ಕಾಬೂಲ್ ಸರಣಿ ಬಾಂಬ್​ ಸ್ಫೋಟ: ರಾಜ್ಯ ರಾಜಧಾನಿಯಲ್ಲಿ ಹೈ ಅಲರ್ಟ್​ ಆಗಲು ಸೂಚನೆ

ಕಾಬೂಲ್ ಸರಣಿ ಬಾಂಬ್​ ಸ್ಫೋಟ: ರಾಜ್ಯ ರಾಜಧಾನಿಯಲ್ಲಿ ಹೈ ಅಲರ್ಟ್​ ಆಗಲು ಸೂಚನೆ

ಬೆಂಗಳೂರಲ್ಲಿ ಐಸಿಸ್ ತನ್ನ ಉಗ್ರಜಾಲವನ್ನ ವಿಸ್ತರಿಸಿಕೊಂಡಿದ್ಯಾ..? ಐಸಿಸ್ ಜೊತೆ ನಂಟು ಹೊಂದಿರುವವರು ಬೆಂಗಳೂರಲ್ಲಿ ಆಕ್ಟೀವ್ ಆಗ್ತಾ ಇದ್ದಾರಾ? ಇದೀಗ ಇಂತಹದೊಂದು ಪ್ರಶ್ನೆ ನಗರಾದ್ಯಂತ ಓಡಾಡ್ತಾ ಇದೆ. ಅದಕ್ಕೆಲ್ಲಾ ಕಾರಣವಾಗಿದ್ದು ಕೇಂದ್ರದ ಕೆಲ ಏಜೆನ್ಸಿಗಳು ಕೊಟ್ಟ ಎಚ್ಚರಿಕೆ. ಅಷ್ಟಕ್ಕೂ ಬೆಂಗಳೂರಲ್ಲಿ ಅಲರ್ಟ್ ಆಗಿರುವಂತೆ ಕೇಂದ್ರ ಎಚ್ಚರಿಕೆ ಕೊಡಲು ಕಾರಣವಾಗಿರುವ ಅಂಶಗಳು ಯಾವುದು ಅನ್ನೋದನ್ನ ಹೇಳ್ತೀವಿ..

ಅಫ್ಘಾನ್ ಅತಂತ್ರವಾಗಿದೆ. ಕಾಬೂಲ್ ಏರ್ಪೋರ್ಟ್​ಬ ಪಕ್ಕದಲ್ಲಿರುವ ಕೊಳಚೆ ಪ್ರದೇಶದಲ್ಲಿ ರಕ್ತದ ಹೊಳೆ ಹರಿದಿದೆ. ಅಫ್ಘಾನ್ನಲ್ಲಿ ತಾಲಿಬಾನ್ ಅಟ್ಟಹಾಸದ ಬೆನ್ನಲ್ಲೇ ಐಸಿಸ್ ಕೂಡ ಎಂಟ್ರಿಯಾಗಿರುವುದು ಜಾಗತಿಕ ಆತಂಕಕ್ಕೆ ಕಾರಣವಾಗಿದೆ. ಜಗತ್ತಿನಾದ್ಯಂತ ತನ್ನ ಕರಾಳ ಕಬಂಧ ಬಾಹುಗಳನ್ನ ಚಾಚಿರುವ ಐಸಿಸ್ ಕರಿನೆರಳು ಕರ್ನಾಟಕದಲ್ಲಿ ಕಾಣಿಸಿಕೊಂಡಿರುವ ಕುರಿತು ಇದೀಗ ಕೇಂದ್ರದ ಏಜೆನ್ಸಿಗಳು ಎಚ್ಚರಿಕೆ ಕೊಟ್ಟಿದ್ದಾರೆ.

ಐಸಿಸ್ ಅಂದ್ರೆ ನೆನಪಾಗುವುದೇ ಕ್ರೌರ್ಯ, ಪೈಶಾಚಿಕತೆ, ರಕ್ತಪಾತ. ಸಿರಿಯಾ,ಇರಾಕ್ನಲ್ಲಿ ನಡೆಸಿದ ಪೈಶಾಚಿಕ ಕೃತ್ಯಗಳನ್ನ ಇನ್ನೂ ಜಗತ್ತು ಮರೆತಿಲ್ಲ. ವಿಶ್ವದೆಲ್ಲೆಡೆ ತಮ್ಮ ಉಗ್ರಜಾಲವನ್ನ ವಿಸ್ತರಿಸಿರುವ ಐಸಿಸ್ ಸಂಘಟನೆ ಭೀತಿಯಿಂದ ಹಲವು ದೇಶಗಳಲ್ಲಿ ಇಂದು ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ನಡುವೆ ಶಾಕಿಂಗ್ ವಿಚಾರ ಏನಂದ್ರೆ ಬೆಂಗಳೂರಿಗೂ ಕೂಡ ಈಗ ಐಸಿಸ್​ನಿಂದ ಕಂಟಕ ಎದುರಾಗೋ ಸಾಧ್ಯತೆ ಇದೆ ಎಂದು ಹೇಳಲಾಗ್ತಾಯಿದೆ. ಇದೇ ಕಾರಣಕ್ಕೆ ಕೇಂದ್ರ ಏಜೆನ್ಸಿಗಳಿಂದ ಬೆಂಗಳೂರಿನಲ್ಲಿ ಅಲರ್ಟ್ ಆಗಿರುವಂತೆ ಪೊಲೀಸ್ ಇಲಾಖೆಗೆ ಸೂಚನೆಯನ್ನ ಕೂಡ ಕೊಡಲಾಗಿದೆ.

ಕಾಬೂಲ್​ನಲ್ಲಿ ಸರಣಿ ಬಾಂಬ್ ಸ್ಫೋಟ ಪ್ರಕರಣ
ರಾಜ್ಯ ರಾಜಧಾನಿಯಲ್ಲಿ ಹೈ ಅಲರ್ಟ್ ಆಗಲು ಸೂಚನೆ

ಆಗಸ್ಟ್ 26 ರಂದು ಕಾಬೂಲ್ ಏರ್ಪೋರ್ಟ್ ರಕ್ತಸಿಕ್ತವಾಗಿತ್ತು. ಯಾವಾಗ ಕಾಬೂಲ್ ಏರ್ಪೋರ್ಟ್ ನಲ್ಲಿ ಐಸಿಸ್-ಕೆ ಕರಾಳ ನೆರಳು ಕಂಡು ಬಂತೋ.. ಇದೀಗ ಬೆಂಗಳೂರಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗಾದ್ರೆ ಇಂಟೆಲಿಜೆನ್ಸ್ ರಿಪೋರ್ಟ್ನಲ್ಲಿ ಏನಿದೆ.? ರಾಜ್ಯ ರಾಜಧಾನಿಗೂ ಐಸಿಸ್ಗೂ ಏನ್ ಸಂಬಂಧ ಹೇಳ್ತಿವಿ ನೋಡಿ..

ವಿಶ್ವದ ಭಯೋತ್ಪಾದಕ ಉಗ್ರ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌ನ ಕರಿನೆರಳು ರಾಜ್ಯ ರಾಜಧಾನಿಯಲ್ಲಿ ಕಂಡು ಬಂದಿದ್ದು, ಬೆಂಗಳೂರಲ್ಲಿ ಫುಲ್ ಅಲರ್ಟ್ ಆಗಿರುವಂತೆ ಕೇಂದ್ರ ಸರ್ಕಾರ ಸೂಚನೆ ಹೊರಡಿಸಿದೆ. 2015 ರಿಂದ 2021 ರ ತನಕ ಐಸಿಸ್ ಉಗ್ರಗಾಮಿ ಸಂಘಟನೆ ಜೊತೆ ಲಿಂಕ್ ಹೊಂದಿರುವ ಹಲವರನ್ನ ರಾಷ್ಟ್ರೀಯ ತನಿಖಾ ದಳ ಖೆಡ್ಡಾಗೆ ಕೆಡವಿದೆ. ಬಂಧಿತರೆಲ್ಲರು ಉಗ್ರ ಸಂಘಟನೆ ಐಸಿಸ್ ಜೊತೆ ಒಡನಾಟ ಹೊಂದಿರುವರು. ಇದೇ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ ಅಲೆರ್ಟ್ ಆಗಿರುವಂತೆ ಗುಪ್ತಚರ ಇಲಾಖೆ & NIA ಗೆ ಕೇಂದ್ರ ಸೂಚನೆ ನೀಡಿದೆ. ಕಳೆದ ವರ್ಷ ನಡೆದ ಕೆಜಿ ಹಳ್ಳಿ ಡಿಜೆ ಹಳ್ಳಿ ಗಲಾಟೆಯಲ್ಲೂ ಐಸಿಸ್ ಕರಿನೆರಳಿನ ಕುರಿತು ಶಂಕೆ ವ್ಯಕ್ತವಾಗಿತ್ತು. ಈ ಸಂಬಂಧ 120 ಮಂದಿಯ ವಿರುದ್ದ ರಾಷ್ಟ್ರೀಯ ತನಿಖಾ ದಳ ಬಂಧಿಸಿತ್ತು. ಈ ಕೇಸ್ ತನಿಖೆಯ ಪ್ರಗತಿಯಲ್ಲಿರುವ ಹೊತ್ತಲ್ಲೇ, ರಾಜ್ಯದಲ್ಲಿ ಉಗ್ರ ಸಂಘಟನೆಯ ಚಟುವಟಿಕೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಂದೇಶ ನೀಡಲಾಗಿದೆ.

blank

ರಾಜ್ಯದಲ್ಲಿ ಐಸಿಸ್ ಉಗ್ರ ಸಂಘಟನೆಯ ಬಳ್ಳಿಗಳು ನಿಧನವಾಗಿ ಚಾಚುತ್ತಿದೆ ಅನ್ನೋದಕ್ಕೆ 2015 ರಿಂದ ಇಲ್ಲಿಯ ತನಕ ನಡೆದಿರುವ ಕೆಲ ಘಟನೆಗಳೇ ಸಾಕ್ಷಿ. ರಾಜ್ಯದಲ್ಲಿ ಐಸಿಸ್ ತನ್ನ ಕರಾಳ ಕಬಂಧ ಬಾಹುಗಳನ್ನ ಚಾಚಿದೆ ಅನ್ನೋದಕ್ಕೆ 2015 ರಿಂದ ನಡೆದ ಘಟನೆಗಳೇ ಸಾಕ್ಷಿ. 2015 ರಲ್ಲಿ ರಾಜ್ಯಾದ್ಯಂತ ಐಸಿಸ್ ಜೊತೆ ಲಿಂಕ್ ಹೊಂದಿರುವ 6 ಮಂದಿಯನ್ನ ಅರೆಸ್ಟ್ ಮಾಡಲಾಯಿತು. ಬೆಂಗಳೂರು, ತುಮಕೂರು, ಮಂಗಳೂರಲ್ಲಿ ಕಾರ್ಯಾಚರಣೆ ನಡೆಸಿದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು, ಐಸಿಸ್ ಜೊತೆ ನೇರ ಲಿಂಕ್ ಹೊಂದಿರುವ ಆರೋಪದಲ್ಲಿ ಆರು ಮಂದಿಯನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ರು. 2015ರಲ್ಲಿ ಬಂಧನ ಮಾಡಿದ್ದ ಎಲ್ಲರೂ ಇಂದಿಗೂ ತಿಹಾರ್ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ.

ಇದಾದ ಬೆನ್ನಲ್ಲೆ ರಾಜ್ಯದಲ್ಲಿ ನಡೆದ ಮತ್ತೊಂದು ಘಟನೆಯು ಉಗ್ರ ಸಂಘಟನೆಗಳ ಜೊತೆಗಿನ ಒಡನಾಟವನ್ನ ಮತ್ತೊಮ್ಮೆ ಸಾಬೀತು ಪಡಿಸಿತ್ತು. ಇನ್ನೂ 2016ರಲ್ಲಿ ರಾಜ್ಯದ ಎರಡು ಕುಟುಂಬ ಇದಕ್ಕಿದ್ದಂತೆ ನಾಪತ್ತೆಯಾಗಿತ್ತು. ನಿಗೂಢ ನಾಪತ್ತೆಯ ಕುರಿತು ತನಿಖೆ ನಡೆಸಿದಾಗ ಕುಟುಂಬಗಳು ಐಸಿಸ್ ಸೇರಲು ಹೋಗಿರುವುದು ಕನ್ಫರ್ಮ್ ಆಗಿತ್ತು. ರಾಜ್ಯ ತೊರೆದು ಉಗ್ರರ ಜಾಲವನ್ನ ಹಿಡಿದ ಈ ಕುಟುಂಬದ ಕೆಲವರು ಸಿರಿಯಾ ಹಾಗೂ ಅಮೆರಿಕ ನಡುವಿನ ಯುದ್ಧದ ವೇಳೆ, ಐಸಿಸ್ ಜೊತೆ ಕೈಜೋಡಿಸಿ ಸಮಾಧಿಯಾಗಿದ್ರು. ಬದುಕುಳಿದ ಕೆಲವರು ಅಮೆರಿಕ ಸೇನೆಯ ಎದುರು ಮಂಡಿಯೂರಿ ಜೈಲು ಸೇರಿದ್ದಾರೆ.

blank

ಹೀಗೆ 2016ರಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ಕುಟುಂಬ ಐಸಿಸ್ ಜೊತೆ ಸಂಪರ್ಕ ಸಾಧಿಸಿತ್ತು. ಈ ಘಟನೆ ರಾಜ್ಯ ರಾಜಧಾನಿಯಲ್ಲಿ ಐಸಿಸ್ ತನ್ನ ಉಗ್ರ ಜಾಲವನ್ನ ವಿಸ್ತರಿಸುತ್ತಿದೆ ಅನ್ನೋ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿತ್ತು. ಇದ್ರ ನಡುವೆ ಇಡೀ ಬೆಂಗಳೂರಿಗೆ ಬೆಂಗಳೂರೇ ಬೆಚ್ಚಿ ಬೀಳುವಂತಹ ಮತ್ತೊಂದು ಘಟನೆ ನಡೆಯಿತು. ಐಸಿಸ್ ಉಗ್ರರೊಂದಿಗೆ ನಂಟು ಹೊಂದಿರುವ ಆರೋಪದಡಿ 2018ರಲ್ಲಿ ಕಾಶ್ಮೀರ ಮೂಲದ ಉಗ್ರ ದಂಪತಿಯನ್ನ ರಾಷ್ಟ್ರೀಯ ತನಿಖಾ ದಳ ಬಂಧಿಸಿತ್ತು. ದೇಶದಲ್ಲೆಡೆ ವಿಧ್ವಂಸಕ ಕೃತ್ಯ ನಡೆಸಲು ಸ್ಕೆಚ್ ಹಾಕಿದ್ದ ಇವರನ್ನ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತೀವ್ರವಾಗಿ ವಿಚಾರಣೆ ನಡೆಸಿದ್ರು. ವಿಚಾರಣೆಯ ವೇಳೆ ಈ ಉಗ್ರ ದಂಪತಿಯು, ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ. ಅಬ್ದುಲ್ ರೆಹಮಾನ್ ಅಲಿಯಾಸ್ ಬ್ರೇವ್‌ರ ಕುರಿತು ಮಾಹಿತಿ ನೀಡಿತ್ತು. ಅಬ್ದುಲ್ ರೆಹಮಾನ್ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿದ್ದ್ದುಕೊಂಡೇ ಉಗ್ರರಿಗೆ ಬೇಕಾದ ಎಲ್ಲಾ ರೀತಿಯ ಮೆಡಿಸಿನ್ ಸಪ್ಲೈ ಮಾಡ್ತಿದ್ದ.

ಈ ಉಗ್ರ ರೆಹಮಾನ್ ಅಲಿಯಾಸ್ ಬ್ರೇವ್ನನ್ನ ಬೇಟೆಯಾಡಿದ್ದೇ ಒಂದು ರೋಚಕ ಸಂಗತಿ. ಅಮೆರಿಕ ಹಾಗು ಐಸಿಸ್ ಉಗ್ರರ ನಡುವೆ ಯುದ್ಧ ನಡೆದ ಸ್ಥಳದಲ್ಲಿ ಅಬ್ದುಲ್ ರೆಹಮಾನ್ ಕಳುಹಿಸಿದ್ದ ಮೆಡಿಸಿನ್ಗಳು ಪತ್ತೆಯಾಗಿದ್ದವು. ಇದನ್ನು ಕಂಡ ಅಮೆರಿಕ, ಸಿಕ್ಕ ದಾಖಲೆಗಳನ್ನು ಭಾರತಕ್ಕೆ ಹಸ್ತಾಂತರಿಸಿತ್ತು. ಆ ರಹಸ್ಯದ ಬೆನ್ನು ಹತ್ತಿದ್ದ ಎನ್ಐಎ ವಿಶೇಷ ತಂಡ ಮತ್ತು ಗುಪ್ತಚರ ಇಲಾಖೆ, ಅಬ್ದುಲ್ ರೆಹಮಾನ್ ಹೆಡೆಮುರಿ ಕಟ್ಟಿತ್ತು. ತನಿಖೆಯ ವೇಳೆ ಬ್ರೇವ್, 2013 ರ ಡಿಸೆಂಬರ್‌ನಲ್ಲಿ ಸಿರಿಯಾಗೆ ತೆರಳಿ ಐಸಿಸ್‌ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರ ಕುರಿತು ಮಾಹಿತಿ ಸಿಕ್ಕಿತ್ತು. ಬ್ರೇವ್, ಭಾರತಕ್ಕೆ ಮರಳಿದ ಬಳಿಕ ಐಸಿಸ್‌ನೊಂದಿಗೆ ತನ್ನ ಸಂಪರ್ಕ ಮುಂದುವರೆಸಿದ್ದ. ನಂತರ ಬೆಂಗಳೂರಿನ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದುಕೊಂಡೇ, ಐಸಿಸ್‌ ಉಗ್ರರಿಗೆ ಬೇಕಾದ ಮೆಡಿಕಲ್‌ ಅಪ್ಲಿಕೇಷನ್‌ ಅಭಿವೃದ್ಧಿ ಪಡಿಸುವಲ್ಲಿ ಪ್ರಗತಿ ಸಾಧಿಸಿದ್ದ. ಆ್ಯಂಟಿ-ಟ್ಯಾಂಕ್‌ ಮಿಸೈಲ್‌ ಅಪ್ಲಿಕೇಷನ್‌ ಅಭಿವೃದ್ಧಿಗೊಳಿಸುವ ಕೆಲಸದಲ್ಲೂ ನಿರತನಾಗಿದ್ದ.

blank

ಹೀಗೆ ರೆಹಮಾನ್ ಬೇಟೆಯಾಡಿದ ನಂತರ NIA ಈ ಬ್ರೇವ್ನನ್ನ ಫುಲ್ ಡ್ರಿಲ್ ಮಾಡಿತ್ತು. ಇದ್ರಿಂದ ಮತ್ತಷ್ಟು ಸ್ಫೋಟಕ ಮಾಹಿತಿಗಳನ್ನ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ಎದುರು ಬಾಯ್ಬಿಟ್ಟಿದ್ದ. ಇದೇ ಆಧಾರದ ಮೇಲೆ ತನಿಖೆ ನಡೆಸಿದ ಅಧಿಕಾರಿಗಳು , ಐಸಿಸ್ ಜೊತೆ ಲಿಂಕ್ ಹೊಂದಿದ್ದ ಮತ್ತಿಬ್ಬರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ರು.ಐಸಿಸ್‌ ಶಂಕಿತ ಉಗ್ರ ಡಾ.ಅಬ್ದುರ್‌ ರೆಹಮಾನ್‌ ಅಲಿಯಾಸ್‌ ‘ಡಾ ಬ್ರೇವ್‌’ ವಿಚಾರಣೆ ವೇಳೆ ಮತ್ತಷ್ಟು ಸ್ಫೋಟಕ ಸಂಗತಿಗಳು ಬಯಲಾಗಿದ್ದವು. ರೆಹಮಾನ್ ನೀಡಿದ ಮಾಹಿತಿಯ ಆಧಾರದ ಮೇಲೆ ಫೀಲ್ಡ್ಗೆ ಇಳಿದ NIA ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರನ್ನು ಜೈಲಿಗಟ್ಟಿದ್ರು. ತಮಿಳುನಾಡು ಮೂಲದ ಅಹಮದ್ ಅಬ್ದುಲ್ ಖಾದರ್ ಹಾಗೂ ಬೆಂಗಳೂರಿನ ಫ್ರೆಜರ್ ಟೌನ್ ವಾಸಿ ಇರ್ಫಾನ್ ನಾಸಿರ್ನನ್ನ ಬಂಧಿಸಿದ NIA ವಿಚಾರಣೆಗೆ ಒಳಪಡಿಸಿತ್ತು. ಇಸ್ಲಾಂ ಮೂಲಭೂತವಾದದ ಬಗ್ಗೆ ವಿಪರೀತ ಒಲವು ಬೆಳೆಸಿಕೊಂಡಿದ್ದ ಈ ಇಬ್ಬರು,ಕುರಾನ್ ಸರ್ಕಲ್’ ಎಂಬ ವಾಟ್ಸಾಪ್ ಗ್ರೂಪ್ ಮಾಡಿ ನಗರದ ಮುಸ್ಲಿಂ ಯುವಕರನ್ನ ಐಸಿಸ್ ಕಡೆ ವಾಲುವಂತೆ ಪ್ರಚೋದನೆ ಮಾಡ್ತಿದ್ರು. ಸಿರಿಯಾದಲ್ಲಿರುವ ಐಸಿಸ್‌ ಭಯೋತ್ಪಾದಕ ಸಂಘಟನೆ ನಾಯಕರ ಸಂಪರ್ಕ ಸಾಧಿಸಿದ ಖಾದರ್ ಹಾಗೂ ಇರ್ಫಾನ್‌, ಐಸಿಸ್‌ ಸಂಘಟನೆ ಸೇರಲು ಬೆಂಗಳೂರಿನ ಮುಸ್ಲಿಂ ಯುವಕರ ಬ್ರೈನ್ ವಾಶ್ ಮಾಡ್ತಿದ್ರು. ವಿಧ್ವದಂಸಕ ಕೃತ್ಯ ನಡೆಸುವ ಐಸಿಸ್ಗೆ ಸಹಾಯ ಮಾಡಲು ಇದೇ ಖಾದರ್ ಹಾಗು ಇರ್ಫಾನ್ ಕೂಡ ಸಿರಿಯಾಗೆ ಹೋಗುವ ಪ್ಲಾನ್ ಕೂಡ ಹಾಕಿಕೊಂಡಿದ್ರು.

blank

ಹೀಗೆ ಬೆಂಗಳೂರಿನಲ್ಲಿದ್ದುಕೊಂಡೇ ಹೊಸ ಐಸಿಸ್ ಪರ ಯುವಕರ ಬ್ರೈನ್ ವಾಶ್ ಮಾಡ್ತಿದ್ದ ಇಬ್ಬರ ಕೈಗೆ ಕೋಳ ತೊಡಿಸಿದ ನಂತರವು ನಗರದಲ್ಲಿ ಐಸಿಸ್ ನೆರಳು ಕಾಣಿಸಿಕೊಂಡಿತ್ತು. ಐಸಿಸ್ ಜೊತೆ ಕೈಜೋಡಿಸಿದ್ದ ಏಳು ಜನರ ಕುರಿತು ರಾಷ್ಟ್ರೀಯ ತನಿಖಾ ದಳ ಸಂಸ್ಥೆ ಮಾಹಿತಿ ನೀಡಿತ್ತು. ಐಸಿಸ್ ಭಯೋತ್ಪಾದಕರಿಗೂ ಬೆಂಗಳೂರಿಗೂ ಭಾರಿ ಲಿಂಕ್ ಇರುವ ಕುರಿತು 2017ರಲ್ಲಿ ರಾಷ್ಟ್ರೀಯ ತನಿಖಾ ದಳ ಸ್ಫೋಟಕ ಮಾಹಿತಿ ಹೊರ ಹಾಕಿತ್ತು. ಅಮೆರಿಕ-ಸಿರಿಯಾ ಮಧ್ಯೆ ನಡೆದ ಯುದ್ಧದ ವೇಳೆ ಬೆಂಗಳೂರಿನ 7 ಮಂದಿ ಐಸಿಸ್ ಜೊತೆ ಕೈ ಜೋಡಿಸಿ, ವಿಧ್ವಂಸಕ ಕೃತ್ಯಗಳನ್ನ ಎಸಗಿದ್ರು. ಗುರಪ್ಪನಪಾಳ್ಯ, ಬಿಸ್ಮಿಲ್ಲಾನಗರದ 7 ಜನರು ಅಮೆರಿಕ ವಿರುದ್ಧದ ಯುದ್ಧದಲ್ಲಿ ಸಿರಿಯಾದ ಐಸಿಸ್ ಉಗ್ರರ ಜೊತೆ ಕೈಜೋಡಿಸಿದ್ರು. ಅಮೆರಿಕ ಹಾಗೂ ಸಿರಿಯಾ ನಡುವೆ ನಡೆದ ಯುದ್ಧದಲ್ಲಿ ಭಾಗಿಯಾಗಿದ್ದ ಬೆಂಗಳೂರಿನ ಏಳು ಜನರ ಪೈಕಿ, ಇಬ್ಬರು ಸತ್ತು ಹೋಗಿದ್ರೆ, ಇನ್ನುಳಿದ ಐವರು ಗಾಯಗೊಂಡು, ಭಾರತಕ್ಕೆ ವಾಪಸ್ ಆಗಿದ್ರು.

ಐಸಿಸ್ ಪರ ಕೃತ್ಯ ಎಸಗಿ ಭಾರತಕ್ಕೆ ವಾಪಸ್ಸಾ ಐವರ ಬೇಟೆಗೆ ಎನ್.ಐ.ಎ ಫೀಲ್ಡ್​ಗಿಳಿದಿತ್ತು. ಈ ಉಗ್ರರು ನಗರದಲ್ಲಿ ಹಲವು ಯುವಕರ ಬ್ರೈನ್ ವಾಶ್ ಮಾಡಿರುವ ಸಾಧ್ಯತೆ ಕೂಡ ಇದೆ. ಒಂದು ವೇಳೆ ಬೆಂಗಳೂರಿನಲ್ಲಿದ್ರೆ, ಮತ್ತೆ ವಿದ್ಧಂಸಕ ಕೃತ್ಯ ಎಸಗುವ ಸಾಧ್ಯತೆ ಕೂಢ ಹೆಚ್ಚಾಗಿದೆ. ಹೀಗೆ ಈ ಪಾಪಿಗಳ ಬೇಟೆಗೆ ಇಳಿದ ಸಂದರ್ಭದಲ್ಲಿ ಬೆಂಗಳೂರಿಗೆ ಬೆಂಗಳೂರೇ ಬೆಚ್ಚಿ ಬೀಳುವಂತಹ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿತ್ತು. ವರ್ಷಗಳ ಹಿಂದೆ ರಾಜ್ಯ ರಾಜಧಾನಿ ಬೆಂಗಳೂರಿನ ಹೊರವಲಯದಲ್ಲೇ ಉಗ್ರರ ಕ್ಯಾಂಪ್ಗಳು ನಡೆಯುತ್ತಿತ್ತು. ಇಕ್ಬಾಲ್ ಜಮೀರ್ ಎಂಬಾತ ದುಬೈನಲ್ಲೇ ಕುಳಿತುಕೊಂಡೇ ಇಲ್ಲಿ ಉಗ್ರರ ಕ್ಯಾಂಪ್ ಆಯೋಜನೆ ಮಾಡ್ತಿದ್ದ. ಕುರಾನ್ ಸರ್ಕಲ್ ಗ್ರೂಪ್ ಮಾಡಿ ಯುವಕನರನ್ನ ಪ್ರಚೋದಿಸುತ್ತಿದ್ದ. ನಂತರ ಓಲ್ಡ್ ಮದ್ರಾಸ್ ರಸ್ತೆಯ ಸುತ್ತಮುತ್ತ ಉಗ್ರರಿಗೆ ಟ್ರೈನಿಂಗ್ ನೀಡಲಾಗ್ತಿತ್ತು. ಮೇಕಿಂಗ್ ಆಫ್ ಫ್ಯೂಚರ್ ಇಸ್ಲಾಮಿಕ್ ಸ್ಟೇಟ್’ ಎಂಬ ಸ್ಲೋಗನ್ ಅಡಿಯಲ್ಲಿ ದುಷ್ಕೃತ್ಯಗಳನ್ನ ಎಸಗಲು ಉಗ್ರರು ಕ್ಯಾಂಪ್ಗಳಲ್ಲಿ ಸಮಲೋಚನೆ ನಡೆಸುತ್ತಿದ್ರು. ಅಲ್ಲದೆ ಸಿರಿಯಾದಲ್ಲಿ ಮಸ್ಲಿಮರಿಗೆ ದೌರ್ಜನ್ಯ ಮಾಡಲಾಗಿದೆ ಎಂದು ಬಿಂಬಿಸಲು ನಕಲಿ ವಿಡಿಯೋಗಳನ್ನ ತೋರಿಸಿ ಯುವಕರನ್ನ ಪ್ರಚೋದನೆ ಮಾಡಲಾಗ್ತಿತ್ತು. ಇವು ರಾಜ್ಯ ರಾಜಧಾನಿಯ ಯುವಕರಿಗೆ ಐಸಿಸ್ ಜೊತೆ ಲಿಂಕ್ ಇರುವುದನ್ನ ಸಾಬೀತು ಪಡಿಸಿತ್ತು. ಇದೇ ಕಾರಣಕ್ಕೆ ಇದೀಗ ಕೇಂದ್ರ ಸರ್ಕಾರವು ನಗರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ.

blank

ಬೆಂಗಳೂರಿನಲ್ಲಿ ನಡೆಯುತ್ತಿದ್ದ ಉಗ್ರರ ಕ್ಯಾಂಪ್ ಬಗ್ಗೆ ಮಾಹಿತಿ ಕಲೆ ಹಾಕಿದ್ದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸ್ಫೋಟಕ ಮಾಹಿತಿಯನ್ನ ಹೊರ ಹಾಕಿದ್ರು. ಬೆಂಗಳೂರಿನಲ್ಲಿ ಐಸಿಸ್ ತನ್ನ ಉಗ್ರಜಾಲವನ್ನ ವಿಸ್ತರಿಸಿದೆ ಅನ್ನೋದಕ್ಕೆ ಇದು ಮತ್ತೊಂದು ಎಕ್ಸಾಂಪಲ್. ಹೌದು.. ಓಲ್ಡ್ ಮದ್ರಾಸ್ ರೋಡಿನ ಸುತ್ತ ಮುತ್ತ ನಡೆಯುತ್ತಿದ್ದ ಉಗ್ರರ ಕ್ಯಾಂಪ್ಗಳಿಗೆ ಐಸಿಸ್ ಉಗ್ರರು ಫಂಡಿಂಗ್ ಮಾಡ್ತಿರೋದು NIA ಅಧಿಕಾರಿಗಳು ಪತ್ತೆ ಹಚ್ಚಿದ್ರು. ಶಂಕಿತ ಉಗ್ರರ ಬ್ಯಾಂಕ್ ಅಕೌಂಟ್ಗಳು ಈ ಸ್ಫೋಟಕ ಅಂಶವನ್ನ ಬಯಲು ಮಾಡಿತ್ತು. ಹಿಜ್ಬ್ ಉತ್ ತೆಹಿರ್ ಸಂಘಟನೆಯಿಂದ ಫಂಡಿಂಗ್ ಆಗಿದೆ. ಹಿಜ್ಬ್ ಉತ್ ತೆಹಿರ್ ಸಂಘಟನೆ ಅನ್ನೋದು ಐಸಿಸ್ನ ಮತ್ತೊಂದು ಸಂಘಟನೆ. ಇದೇ ಸಂಘಟನೆಯಿಂದ ನಗರದಲ್ಲಿ ನಡೆಯಯತ್ತಿದ್ದ ಉಗ್ರರ ಕ್ಯಾಂಪ್ಗೆ ಫಂಡಿಂಗ್ ಆಗಿದೆ. ಉಗ್ರರು ಮುಸ್ಲಿಂ ರಾಷ್ಟ್ರ ನಿರ್ಮಾಣದ ಬಗ್ಗೆ ಕೆಲ ಯುವಕರಿಗೆ ಇಮೇಲ್ ಕಳಿಸಿರೋದ ಕೂಡ NIA ವಿಚಾರಣೆಯ ವೇಳೆ ತಿಳಿದುಬಂದಿತ್ತು. ಇವು ಸಿಲಿಕಾನ್ ಸಿಟಿ ಜನರನ್ನ ಬೆಚ್ಚಿ ಬೀಳಿಸಿತ್ತು.

ಅಷ್ಟೇ ಅಲ್ಲ, ಬೆಂಗಳೂರು ಕೆ.ಜೆ ಹಳ್ಳಿ ಡಿಜೆ ಹಳ್ಳಿ ಗಲಭೆಯಲ್ಲೂ ಐಸಿಸ್ ಪಾತ್ರ ಕುರಿತು ಶಂಕೆ ವ್ಯಕ್ತವಾಗಿತ್ತು. ಇಲ್ಲೂ ಕೂಡ ಫಂಡಿಗ್ ಮಾಡಿ ಪ್ರಚೋದನೆ ನೀಡಲಾಗಿದೆ ಅನ್ನೋ ಆರೋಪ ಕೇಳಿ ಬಂದಿತ್ತು. ಇದ್ರಿಂದ ಬೆಂಗಳೂರಲ್ಲಿ ಐಸಿಸ್ ಟೀಂ ಆಕ್ಟೀವ್ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಸದ್ಯ ಕೇಂದ್ರದ ಏಜೆನ್ಸಿಗಳು ನಗರದಲ್ಲಿ ಅಲರ್ಟ್ ಆಗುವಂತೆ ಸೂಚನೆ ನೀಡಿದೆ. ಅಷ್ಟೇ ಅಲ್ಲ.. ವಾರಗಳ ಹಿಂದೆಯಷ್ಟೇ ಐಸಿಸಿ್ ಉಗ್ರರ ಜೊತೆ ನಂಟು ಹೊಂದಿರುವ ಆರೋಪದ ಮೇಲೆ NIA ಅಧಿಕಾರಿಗಳು, ಮಂಗಳೂರಿನಲ್ಲಿ ಮಾಜಿ ಶಾಸಕದ ಪುತ್ರನ ಮನೆಯ ಮೇಲೆ ದಾಳಿ ಮಾಡಿದ್ರು. ಇವೆಲ್ಲವು ರಾಜ್ಯದಲ್ಲಿ ಐಸಿಸ್ ತನ್ನ ಕರಾಳ ಉಗ್ರ ಜಾಲವನ್ನ ವಿಸ್ತರಿಸಿದೆ ಅನ್ನೋದನ್ನ ಸಾಕ್ಷಿ.

Source: newsfirstlive.com Source link