ಚಿತ್ರ ನಟಿಯರ ಟ್ಯಾಟೂ ಕ್ರೇಜ್.. ಒಬ್ಬೊಬ್ಬರದ್ದೂ ಒಂದೊಂದು ಟೇಸ್ಟ್​! ಸಖತ್ತಾಗಿದೆ

ಚಿತ್ರ ನಟಿಯರ ಟ್ಯಾಟೂ ಕ್ರೇಜ್.. ಒಬ್ಬೊಬ್ಬರದ್ದೂ ಒಂದೊಂದು ಟೇಸ್ಟ್​! ಸಖತ್ತಾಗಿದೆ

ಚಿತ್ರಕಲೆ ಎಲ್ಲಿ ಬೇಕಾದ್ರು ಮೂಡುತ್ತೆ.. ಆದ್ರೆ ಆ ಕಲೆಗೆ ಒಂದು ಸ್ಫೂರ್ತಿಯ ಸೆಲೆ ಬೇಕು.. ಆ ಕಲೆ ಮೂಡೋ ಜಾಗಕ್ಕೊಂದು ಬೆಲೆ ಇರಬೇಕು.. ಹಂಗೆ ನಟಿಮಣಿಯರ ಮೇಲೆ ಶಾಶ್ವತವಾಗಿ ಇರೋ ಟ್ಯಾಟೂ ಚಿತ್ರಗಳಿಗೆ ಎಷ್ಟು ಪುಣ್ಯವಿರಬೇಕು.. ಸಿನಿಮಾರಂಗ ಸೂಪರ್ ಸುಂದರ ನಟಿಯರ ಟ್ಯಾಟೂ ಕ್ರೇಜ್ ಹೆಂಗಿದೆ ಗೊತ್ತಾ?

blank

ಹೆಣ್ಣೇ ಒಂದು ಚಿತ್ತಾರದ ಸ್ಫೂರ್ತಿ… ಆ ನಾರಿಯ ಮೇಲೆ ಆ ಚಿತ್ರವಿರುತ್ತೆ ಜೀವನ ಪೂರ್ತಿ.. ಆ ಪೋರಿ ಮೇಲೆ ಇರೋ ಶಾಶ್ವತ ಚಿತ್ರಕ್ಕೆ ಎಷ್ಟೋಂದು ಕೀರ್ತಿ.. ಕಾರಣ ಆ ಚೋರಿ ಮೇಲೆ ಅಭಿಮಾನಿಗಳಿಗೂ ಪ್ರೀತಿ.. ಕೆಲ ಅಭಿನೇತ್ರಿಗಳು ಇರೋದೇ ಇದೇ ರೀತಿ. ನಮ್ಮ ಕನ್ನಡದ ಅಭಿನಯ ಕನಕಾಂಬರಿಯರು ಹಾಗೂ ಕನ್ನಡಿಗರಿಗೂ ಗೊತ್ತಿರೋ ಪರ ಭಾಷ ನಟನಾಂಬರಿಗಳ ಟ್ಯಾಟೂ ಕ್ರೇಜ್ ಅಬ್ಬಬ್ಬಾ!

blank

ಮೊನ್ನೆ ನೀರ್ ದೊಸೆ ಬೆಡಗಿ ಹರಿಪ್ರಿಯಾ ಟ್ಯಾಟೂ ವಿಡಿಯೋವೊಂದು ಕಲರ್ವೈರಲ್ ಚಿಟ್ಟೆಯಾಗಿತ್ತು..ಚಿಕ್ಕಬಳ್ಳಾಪುರದ ಕ್ರೀಮ್ ಬನ್ ಹರಿಪ್ರಿಯಾ ತನ್ನ ಎಡ ಬುಜದ ಕೆಳಗೆ ಮತ್ಸ್ಯ ಕನ್ಯೆ ಟ್ಯಾಟೂವನ್ನ ಹಾಕಿಸಿಕೊಂಡಿದ್ದಾರೆ.. ಅಯ್ಯೋ ಆ ಚಿತ್ರವಾದರೂ ನಾವಾಗ ಬಾರದಿತ್ತಾ ಎಂದು ಹರಿಪ್ರಿಯಾ ಪಡ್ಡೆ ಫ್ಯಾನ್ಸ್ ಮನಸಿನಲ್ಲೇ ಮಲ್ಲಿಗೆ ಸೇವಂತಿಗೆಯ ಹೂ ರಾಶಿ ಚೆಲ್ಲಿದ್ರು. ಬಹುಭಾಷಾ ನಟಿ, ಯೂಟರ್ನ್ನ ಮೂಗುತ್ತಿ ಸುಂದ್ರಿ, ಜೇರ್ಸಿ ಜೀರ್ಜಿಂಬೆ ಶ್ರದ್ಧಾ ಶ್ರೀನಾಥ್ ಕೂಡ ಒಂದು ಪರ್ಮನೆಂಟ್ ಟ್ಯಾಟೂವನ್ನ ಹಾಕಿಸಿಕೊಂಡಿದ್ದಾರೆ.. ಶ್ರದ್ಧಾ ಶ್ರೀನಾಥ್ ರ ಹೃದಯ ಮೇಲ್ ಭಾಗದಲ್ಲಿ ಚಿತ್ತಾರದ ಟ್ಯಾಟೂ ಒಂದಿದೆ.. ಶ್ರದ್ಧಾ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲೂ ಆ ಟ್ಯಾಟೂ ಕೂಡ ಪರೋಕ್ಷವಾಗಿ ಕಂಗೊಳಿಸುತ್ತದೆ.. ಟ್ಯಾಟೂ ನೋಡಿದ ಎಷ್ಟೋ ಬಣ್ಣಿಸೋ ಬಾಣಸಿಗರು ನಿಮ್ಮಂತೆ ಟ್ಯಾಟೂ ಕೂಡ ಸೋ ಬ್ಯೂಟಿಫುಲ್ ಅಂತಾರೆ.

blank

ರಕ್ಷಿತಾ ಪ್ರೇಮ್.. ಅಪ್ಪು ಸಿನಿಮಾದ ಮೂಲಕ ಸಿರಿಗನ್ನಡ ಪ್ರೇಕ್ಷಕರ ಮನೆ ಮನದಲ್ಲಿ ಜಾಗ ಪಡೆದ ನಟಿಮಣಿ.. ರಕ್ಷಿತಾನೇ ಒಂದು ಸ್ಟಾರ್.. ಇನ್ನೂ ರಕ್ಷಿತಾ ಅವರ ಮೈ ಮೇಲೆ ಮತ್ತೊಂದು ಶಾಶ್ವತ ಸ್ಟಾರು.. ರಕ್ಷಿತಾ ಪ್ರೇಮ್ ಸೆಲ್ಫಿ ಕ್ಲಿಕಿಸಿಕೊಳ್ಳೋ ಪ್ರತಿ ಫೋಟೋದಲ್ಲೂ ಆ ಟ್ಯಾಟೂ ಸ್ಟಾರ್ ಈ ಸ್ಟಾರ್ ಜೊತೆ ಕಾಣಸಿಗುತ್ತೆ..
blank

ಹೆಬ್ಬುಲಿ ಬೆಡಗಿ ಟಸ್ಕಿ ಬ್ಯೂಟಿ ಅಮಲಾ ಪೌಲ್ ಕೂಡ ಟ್ಯಾಟೂ ಕ್ರೇಜ್ ಇರೋ ನಟಿ.. ತನ್ನ ಬೆನ್ನಿನ ಹಿಂದೆ ಕ್ಲಾಸಿಕ್ ಕಲರ್ಫುಲ್ ಟ್ಯಾಟೂವೊಂದನ್ನ ಹಾಕಿಕೊಂಡಿದ್ದಾರೆ.. ಆಗಾಗ ಅಮಲಾ ಪೌಲ್ರ ಬೆನ್ನಿನ ಟ್ಯಾಟೂ ಫೋಟೋದಲ್ಲಿ ಫೋಸ್ ಕೊಡ್ತಿರುತ್ತೆ.. ಸೂಪರ್ ಸುಂದ್ರಿ ನಯನತಾರ.. ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರು ಕೂಡ ಹೌದು.. ನಯನಮನೋಹರಿ ನಯನತಾರ ಎಡಗೈಲೊಂದು ಇಂಗ್ಲೀಷ್ ವಾಕ್ಯದ ಟ್ಯಾಟೂ ಇದೆ.. ಪಾಸಿಟಿವಿಟಿ ಅನ್ನೋ ಅಕ್ಷರದ ಟ್ಯಾಟೋವನ್ನ ಹಾಕಿಸಿಕೊಂಡಿದ್ದಾರೆ ನಯನತಾರ.. ಈ ಹಿಂದೆ ಈಗ ಇರೋ ನಯನತಾರ ಎಡ ಮುಂಗೈಯಿನ ಟ್ಯಾಟೂ ಪ್ರಭುದೇವ ಅಂತಿತ್ತು.. ಆದ್ರೆ ಡ್ಯಾನ್ಸ್ ಕಿಂಗ್ ಜೊತೆ ನಯನತಾರ ಚಾಳಿ ಟೂ ಬಿಟ್ಟ ಮೇಲೆ ಪಾಸಿಟಿವಿಟಿ ಅನ್ನೋ ಟ್ಯಾಟೂ ಬಂದಿದೆ.

blank

ಪ್ಯಾರ್ಗೆ ಆಗಬಿಟ್ಟಿತೆ ಖ್ಯಾತಿಯ ಪಾರುಲ್ ಯಾದವ್ ತನ್ನ ಬಲಗಾಲಿನ ಮೇಲೆ ಬಣ್ಣದ ಟ್ಯಾಟೂವನ್ನ ಹಾಕಿಸಿಕೊಂಡಿದ್ದಾರೆ  ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕೂಡ ತನ್ನ ಕೈಯಲೇ ಟ್ಯಾಟೂ ಅಕ್ಷರವನ್ನ ಕೆತ್ತಿಸಿಕೊಂಡಿದ್ದಾರೆ. ನಿನ್ನ ಸನಿಹಕೆ ಸಿನಿಮಾದ ಮೂಲಕ ಬೆಳ್ಳಿಪರದೆ ಬರಲು ಸಜ್ಜಾಗಿರೋ ಅಣ್ಣಾವ್ರ ಮೂರನೇ ಜನರೇಷನ್ ಧನ್ಯಾ ರಾಮ್ ಕುಮಾರ್ ಕೂಡ ಚಿಕ್ಕದೊಂದು ಟ್ಯಾಟೂ ಚಿತ್ರವನ್ನ ತನ್ನಲ್ಲಿ ಇರಿಸಿಕೊಂಡಿದ್ದಾರೆ. ಸಲಾರ್ ಸಿನಿಮಾದಲ್ಲಿ ನಟಿಸುತ್ತಿರೋ ಬಹುಭಾಷ ನಟಿ ಶೃತಿ ಹಾಸನ್ ಮೈ ಮೇಲೆ ಎರಡ್ ಎರಡು ಟ್ಯಾಟೂಗಳಿವೆ.. ಶೃತಿ ಹಾಸನ್ ಎಡಗೈ ಮೇಲೆ ಹಾಗೂ ಎಡ ಹಿಂಭುಜದ ಮೇಲೆ ಟ್ಯಾಟೂ ಚಿತ್ತಾರವಿದೆ.

blank

ಇನ್ನು ಪವರ್ ಸುಂದ್ರಿ , ದ್ವಿತ್ವ ಸಿನಿಮಾದಲ್ಲಿ ಎರಡನೇ ಬಾರಿಗೆ ಅಪ್ಪು ಜೊತೆ ನಟಿಸಲು ಫಿಕ್ಸ್ ಆಗಿರೋ ತ್ರಿಷಾ ಕೃಷ್ಣನ್ ಕೂಡ ಟ್ಯಾಟೂ ಕ್ರೇಜ್ ಇರೋ ಕನ್ಯಾನಟಿಮಣಿ.. ಹೃದಯ ಭಾಗದ ಮೇಲ್ ಭಾಗದಲ್ಲಿ ಒಂದು ಚಿತ್ರಾವಳಿಯನ್ನ ತ್ರಿಷಾ ಬಿಡಿಸಿಕೊಂಡಿದ್ದಾರೆ.. ತ್ರಿಷಾ ಯಾವ ಸಿನಿಮಾದಲ್ಲಿ ನಟಿಸಿದ್ರೂ ಆ ಸಿನಿಮಾದಲ್ಲಿ ಆ ಫೋಟೋ ಕೂಡ ನಟಿಸಿರುತ್ತೆ. ಕೊನೆದಾಗಿ ಈ ನಟಿಯ ಟ್ಯಾಟೂ ಕ್ರೇಜ್ ಹೇಳದಿದ್ರೆ ನಮ್ಮ ಈ ಟ್ಯಾಟೂ ಸ್ಟೋರಿ ಸಂಪೂರ್ಣ ಆದಂಗೆ ಆಗೋದೆ ಇಲ್ಲ. ಸಮಂತಾ ಅಕ್ಕಿನೇನಿ.

ಚಿತ್ರ ನಟಿಯರ ಟ್ಯಾಟೂ ಕ್ರೇಜ್.. ಒಬ್ಬೊಬ್ಬರದ್ದೂ ಒಂದೊಂದು ಟೇಸ್ಟ್​! ಸಖತ್ತಾಗಿದೆ

ಸ್ಯಾಮ್ಸ್ ಬಲಗೈ ಮೇಲೆ , ಬೆನ್ನ ಮೇಲೆ ಹಾಗೂ ಸೊಂಟದಲ್ಲೊಂದು ಟ್ಯಾಟೂ ಇದೆ.. ಸಮಂತಾರ ಬಲಗೈ ಮತ್ತು ಬೆನ್ನ ಮೇಲಿನ ಟ್ಯಾಟೂಗಿಂತ ಸ್ಯಾಮ್ಸ್ ಸೊಂಟದ ಮೇಲಿರೋ ಟ್ಯಾಟೂ ಬಲು ವಿಶೇಷ.. ತನ್ನ ಗಂಡನ ಹೆಸರ ಸಹಿಯನ್ನೇ ಸೊಂಟದ ಮೇಲೆ ಟ್ಯಾಟೂ ಹಾಕಿಸಿಕೊಂಡಿದಾರಂತೆ ಸಮಂತಾ ರುತ್ ಪ್ರಭು ಅಲಿಯಾಸ್ ‘ಎಸ್’.. ಒಟ್ಟಿನಲ್ಲಿ ನಟಿಮಣಿಯರ ಟ್ಯಾಟೂ ಕ್ರೇಜ್ ಬಲು ಜೋರಾಗಿಯೇ ಇದೆ.. ಅವರಂತೆ ಅವರ ಟ್ಯಾಟೂಗಳು ಕೂಡ ಅಭಿಮಾನಿಗಳ ಮನಸು ಕನಸು ಎರಡಲ್ಲೂ ಜಾಗ ಪಡೆದುಕೊಂಡಿವೆ.

blank

blank

Source: newsfirstlive.com Source link