ಅರುಣಾಚಲದ ಅನ್ನದಾತ ಮಾತೃಭಾಷೆ ಉಳಿಸಲು ಟೀಚರ್​ ಆದ ಕಥೆ

ಅರುಣಾಚಲದ ಅನ್ನದಾತ ಮಾತೃಭಾಷೆ ಉಳಿಸಲು ಟೀಚರ್​ ಆದ ಕಥೆ

ಓದು ಅನ್ನೋದು, ಎಲ್ಲರಿಗೂ ತಕ್ಕ ಮಟ್ಟಿಗೆ ಇರಲೇಬೇಕು. ಕಾರಣ, ಸಮಾಜದಲ್ಲಿ ಬಾಳೋದು, ಎಲ್ಲರ ಮುಂದೆ ಬದುಕೋದು ಎಲ್ಲವನ್ನೂ ಹೇಗೆ ನಿಭಾಯಿಸೋದು ಅನ್ನೋದನ್ನ ಕಲಿಯೋದಕ್ಕೆ ಮಕ್ಕಳಿಗೆ ಶಾಲೆ ಬೇಕೇ ಬೇಕು. ಆದ್ರೆ, ಈ ಕೊರೊನಾದಿಂದ ಶಾಲೆಯೂ ಇಲ್ಲ, ಏನೂ ಇಲ್ಲ. ಆದ್ರೆ, ಅರುಣಾಚಲ ಪ್ರದೇಶದಲ್ಲಿ ಒಂದು ಬುಡಕಟ್ಟು ಜನಾಂಗ ತಮ್ಮ ಭಾಷೆಯನ್ನ ಉಳಿಸೋದಕ್ಕೆ ಶಿಕ್ಷಕರಾಗಿದ್ದಾರೆ.

ಅರುಣಾಚಲ ಪ್ರದೇಶದ ಟ್ಯಾಂಗ್ಸಾ ಬುಡಕಟ್ಟು ರಾಜ್ಯದ ಚಾಂಗ್ಲಾಂಗ್ ಜಿಲ್ಲೆಯಲ್ಲಿ ಸುಮಾರು 40 ಕ್ಕೂ ಹೆಚ್ಚು ಉಪ-ಬುಡಕಟ್ಟುಗಳನ್ನು ಹೊಂದಿದೆ. ಆದ್ರೆ, ಪ್ರತಿಯೊಂದೂ ತನ್ನದೇ ಉಪಭಾಷೆಯನ್ನು ಹೊಂದಿದೆ. ಆದರೆ ಟಾಂಗ್ಸಾ ಭಾಷೆಯನ್ನು ಈಗಲೂ ‘ಅಳಿವಿನಂಚಿನಲ್ಲಿರುವ’ ಭಾಷೆಯೆಂದು ಗುರುತಿಸಲಾಗಿದೆ. ಪ್ರತಿಯೊಂದೂ ಭಾಷೆಗೂ ತನ್ನದೇ ಆದ ಉಪಭಾಷೆಯನ್ನ ಹೊಂದಿದೆ ಮತ್ತು ಲಿಖಿತ ರೂಪವಿಲ್ಲ. ಇವರೆಲ್ಲರೂ ರೋಮನ್ ಲಿಪಿಯನ್ನು ಬಳಸುತ್ತಾರೆ ಅಂತ 55ವರ್ಷದ ರೈತ ಈಸ್ಟ್‌ಮೊಜೊಗೆ ತಿಳಿಸಿದರು.

ತಾಂಗ್ಸಾ ಬುಡಕಟ್ಟಿನ ಸಾಮಾನ್ಯ ಲಿಪಿಯನ್ನು 1990ರಲ್ಲಿ ಸ್ಥಳೀಯರಾದ ಲಖುಮ್ ಮೊಸಾಂಗ್ ಅಭಿವೃದ್ಧಿಪಡಿಸಿದರು. ಆದ್ರೆ, 2020ರಲ್ಲಿ ಲಖುಮ್ ಸಾವಿನ ನಂತರ, ವಾಂಗ್ಲಂಗ್ ತನ್ನ ಕೆಲಸವನ್ನು ಮುಂದುವರಿಸಲು ನಿರ್ಧರಿಸಿದರು. ಹೊಸ ತಾಂಗ್ಸಾ ಲಿಪಿಯು 48 ಸ್ವರಗಳು ಮತ್ತು 31 ವ್ಯಂಜನಗಳನ್ನು ಹೊಂದಿದೆ, ಮತ್ತು ಇದನ್ನು ಯೂನಿಕೋಡ್, ಜಾಗತಿಕ ಎನ್ಕೋಡಿಂಗ್ ಮಾನದಂಡದಲ್ಲಿ ಸೇರಿಸಲು ಅನುಮೋದಿಸಲಾಗಿದೆ. ಈ ಹೊಸ ಲಿಪಿಯನ್ನು ಕಲಿಯಲು ಯುವಕರಿಗೆ ಸಹಾಯ ಮಾಡಲು ರಾಜ್ಯದಲ್ಲಿ ಮೊಬೈಲ್ ಆಪ್​ನ್ನು ಸಹ ಅಭಿವೃದ್ಧಿಪಡಿಸಲಾಗಿದೆ.

 

Source: newsfirstlive.com Source link