ಕಾಬೂಲ್​​ನಲ್ಲಿ ಮತ್ತೊಂದು ದಾಳಿ ಭೀತಿ.. ಅಮೆರಿಕನ್ ಪ್ರಜೆಗಳಿಗೆ ತಕ್ಷಣವೇ ಜಾಗ ಖಾಲಿ ಮಾಡಲು ಸೂಚನೆ

ಕಾಬೂಲ್​​ನಲ್ಲಿ ಮತ್ತೊಂದು ದಾಳಿ ಭೀತಿ.. ಅಮೆರಿಕನ್ ಪ್ರಜೆಗಳಿಗೆ ತಕ್ಷಣವೇ ಜಾಗ ಖಾಲಿ ಮಾಡಲು ಸೂಚನೆ

ಕಾಬೂಲ್​ ಏರ್​ಪೋರ್ಟ್​​ನಲ್ಲಿರುವ ಅಮೆರಿಕನ್ ಪ್ರಜೆಗಳಿಗೆ ತಕ್ಷಣವೇ ಜಾಗ ಖಾಲಿಮಾಡುವಂತೆ ಅಮೆರಿಕ ಸರ್ಕಾರ ಹೇಳಿದೆ. ಮುಂದಿನ 24 ರಿಂದ 36 ಗಂಟೆಗಳಲ್ಲಿ ಕಾಬೂಲ್ ಏರ್​ಪೋರ್ಟ್​​ನಲ್ಲಿ ಮತ್ತೊಂದು ದಾಳಿ ನಡೆಯಬಹುದು ಎಂಬ ಮಾಹಿತಿ ಹಿನ್ನೆಲೆ ಅಮೆರಿಕ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಈ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಕಾಬೂಲ್ ಸರಣಿ ಬಾಂಬ್​ ಸ್ಫೋಟ: ರಾಜ್ಯ ರಾಜಧಾನಿಯಲ್ಲಿ ಹೈ ಅಲರ್ಟ್​ ಆಗಲು ಸೂಚನೆ

ಅಮೆರಿಕ ಅಧ್ಯಕ್ಷ ಜೋ ಬೈಡನ್​ಗೆ ಕಮಾಂಡರ್​ಗಳು ಮತ್ತೊಂದು ಉಗ್ರರ ದಾಳಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಾಬೂಲ್ ಏರ್​ಪೋರ್ಟ್​​, ಸೌತ್ ಗೇಟ್, ಆಂತರಿಕ ಸಚಿವಾಲಯ, ಪಂಜ್​ಶಿರ್ ಪೆಟ್ರೋಲ್ ಸ್ಟೇಷನ್​ ಗಳಲ್ಲಿರುವ ಅಮೆರಿಕನ್ನರು ತಕ್ಷಣವೇ ಜಾಗ ಖಾಲಿ ಮಾಡಿ ಎಂದು ಅಮೆರಿಕನ್ ಎಂಬಸ್ಸಿ ವಾರ್ನಿಂಗ್ ಮಾಡಿದೆ.

ಇದನ್ನೂ ಓದಿ: ಕಾಬೂಲ್​ನಲ್ಲಿ US ಸೈನಿಕರ ಹತ್ಯೆ.. ಅಮೆರಿಕ ಗುಪ್ತಚರ ಇಲಾಖೆಗೇ ಚಳ್ಳೆ ಹಣ್ಣು ತಿನ್ನಿಸಿತಾ ಐಸಿಸ್-ಕೆ..?

ಅಮೆರಿಕ ಪ್ರತೀಕಾರವಾಗಿ ಐಎಸ್​ಐಎಸ್​-ಕೆ ಉಗ್ರ ಸಂಘಟನೆಯ ಇಬ್ಬರು ಹೈ ಪ್ರೊಫೈಲ್ ಸದಸ್ಯರನ್ನು ಏರ್​ಸ್ಟ್ರೈಕ್ ಮೂಲಕ ಹೊಡೆದುಹಾಕಿದ ಬೆನ್ನಲ್ಲೇ ಇದೀಗ ಉಗ್ರ ಸಂಘಟನೆ ಮತ್ತೊಂದು ದಾಳಿಯ ಪ್ಲಾನ್ ಮಾಡಿದೆ ಎಂದು ಹೇಳಲಾಗಿದೆ.

Source: newsfirstlive.com Source link