‘ಈಗಲೇ ಬಂದು ನನ್ಗೊಂದು ಕಿಸ್ ಕೊಡು’; ಬಿಗ್​ಬಾಸ್ ಮನೆಯಲ್ಲಿ ಶಿಲ್ಪಾಶೆಟ್ಟಿ ಸಹೋದರಿ ಆಟ ಜೋರು

‘ಈಗಲೇ ಬಂದು ನನ್ಗೊಂದು ಕಿಸ್ ಕೊಡು’; ಬಿಗ್​ಬಾಸ್ ಮನೆಯಲ್ಲಿ ಶಿಲ್ಪಾಶೆಟ್ಟಿ ಸಹೋದರಿ ಆಟ ಜೋರು

ಬಿಗ್​ಬಾಸ್ ಓಟಿಟಿಯಲ್ಲಿ ಶಿಲ್ಪಾಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಕಂಟೆಸ್ಟೆಂಟ್ ಆಗಿ ಮಿಂಚ್ತಿದ್ದಾರೆ. ಈ ಮಧ್ಯೆ ಶಮಿತಾ ಶೆಟ್ಟಿ ಹಾಗೂ ಮತ್ತೋರ್ವ ಕಂಟೆಸ್ಟೆಂಟ್ ರಾಕೇಶ್ ಬಾಪತ್ ನಡುವೆ ವಿಚಿತ್ರ ಕೆಮಿಸ್ಟ್ರಿ ಸುದ್ದಿಯಾಗುತ್ತಿದೆ.

ಇದನ್ನೂ ಓದಿ: ‘ತಪ್ಪು ಮಾಡ್ಬಿಟ್ಟೆ, ದಟ್ಸ್​ ಓಕೆ’ ಎಂದ ಶಿಲ್ಪಾ ಶೆಟ್ಟಿ; ಇನ್​ಸ್ಟಾಗ್ರಾಂ ಪೋಸ್ಟ್​ ಫುಲ್​​ ವೈರಲ್

ಇತ್ತೀಚೆಗೆ ಬಿಗ್​ಬಾಸ್ ಓಟಿಟಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಶಮಿತಾ ಶೆಟ್ಟಿ ತಿಂಡಿ ತಿಂತಾ ಕೂತಿರ್ತಾರೆ. ಅಲ್ಲಿಗೆ ರಾಕೇಶ್ ಬಾಪತ್ ಬರ್ತಾರೆ. ರಾಕೇಶ್ ನಿಂಗೆ ಬೇರೆ ಏನಾದ್ರೂ ಬೇಕಾ ಅಂತ ಕೇಳಿದಾಗ ಶಮಿತಾ ಶೆಟ್ಟಿ.. ನಿನಗೇನಾದ್ರೂ ಸಮಸ್ಯೆ ಇದ್ಯಾ.? ನಾನದನ್ನ ಮಾಡಲ್ಲ ಅಂತಾರೆ. ಇದಕ್ಕೆ ಏನೂ ಉತ್ತರ ಕೊಡದೆ ರಾಕೇಶ್ ಸುಮ್ಮನೆ ನಿಂತಿರ್ತಾರೆ. ಈ ವೇಳೆ ಅರ್ಧ ಸ್ಮೈಲ್ ಮಾಡುತ್ತಾ ಶಮಿತಾ ಶೆಟ್ಟಿ ಇಲ್ಲಿಗೆ ಬಂದು ಈಗಲೇ ನನಗೊಂದು ಕಿಸ್ ಕೊಡು ಅಂತ ಜೋರು ಮಾಡಿದ್ದಾರೆ. ರಾಕೇಶ್ ಶಮಿತಾ ಮಾತಿನಂತೆ ಕಿಸ್ ಮಾಡಿದ್ದಾರೆ.

ಇದನ್ನೂ ಓದಿ: ನಕಾರಾತ್ಮಕ ಆಲೋಚನೆಗಳನ್ನ ನಿಯಂತ್ರಿಸೋದು ಹೇಗೆ? -ವಿಡಿಯೋ ಹಂಚಿಕೊಂಡ ಶಿಲ್ಪಾ ಶೆಟ್ಟಿ

ಈ ಸನ್ನಿವೇಶ ಇದೀಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. ಇದ್ದಕ್ಕಿದ್ದಂತೆ ರಾಕೇಶ್​​ನನ್ನ ಕರೆದು ಬಂದು ನನಗೊಂದು ಕಿಸ್ ಕೊಡು ಅಂದಿದ್ದೇಕೆ..? ರಾಕೇಶ್ ಏನೂ ಮಾತನಾಡದೇ ಕಿಸ್ ಮಾಡಿದ್ದೇಕೆ ಅನ್ನೋದು ಕುತೂಹಲವಾಗಿಯೇ ಉಳಿದಿದೆ.

Source: newsfirstlive.com Source link