ಸಾಮೂಹಿಕ ಅತ್ಯಾಚಾರ ಆರೋಪಿಗಳು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ

ಸಾಮೂಹಿಕ ಅತ್ಯಾಚಾರ ಆರೋಪಿಗಳು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ

ಮೈಸೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಐದು ಮಂದಿ ಆರೋಪಿಗಳನ್ನ 10 ದಿನಗಳ ಕಾಲ ಮೈಸೂರು ಪೊಲೀಸರ ಕಸ್ಟಡಿಗೆ ನೀಡಲಾಗಿದೆ.

ಇದನ್ನೂ ಓದಿ: ಗ್ಯಾಂಗ್ ರೇಪ್​ ಕೇಸ್​ನ ಓರ್ವ ಆರೋಪಿ ಮೇಲೆ ಪ್ರಿಯತಮೆಯ ತಂದೆಯನ್ನೇ ಕೊಂದ ಆರೋಪ..!

ಕಳೆದ ರಾತ್ರಿ ಆರೋಪಿಗಳನ್ನ ಮೂರನೇ ಜೆಎಂಎಫ್​ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಸದ್ಯ ಅಜ್ಞಾತ ಸ್ಥಳದಲ್ಲಿ ಆರೋಪಿಗಳನ್ನ ಪೊಲೀಸರು ವಿಚಾರಣೆ ಮಾಡ್ತಿದ್ದಾರೆ. ಘಟನೆ ಬಗ್ಗೆ ಇವತ್ತು ಆರೋಪಿಗಳಿಂದ ಪೊಲೀಸರು ಸಂಪೂರ್ಣವಾಗಿ ಹೇಳಿಕೆ ದಾಖಲು ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಖುದ್ದು ಕಮಿಷನರ್ ಚಂದ್ರಗುಪ್ತರಿಂದ ವಿಚಾರಣೆ ನಡೆಯಲಿದೆ ಎನ್ನಲಾಗಿದೆ.

Source: newsfirstlive.com Source link