ಉಗ್ರರಿಗೆ ‘ದೊಡ್ಡಣ್ಣ’ನ ದೊಡ್ಡ ಎಚ್ಚರಿಕೆ; ಟಾಪ್ 10 ಸುದ್ದಿಗಳ ಕ್ವಿಕ್ ರೌಂಡ್​ಅಪ್

ಉಗ್ರರಿಗೆ ‘ದೊಡ್ಡಣ್ಣ’ನ ದೊಡ್ಡ ಎಚ್ಚರಿಕೆ; ಟಾಪ್ 10 ಸುದ್ದಿಗಳ ಕ್ವಿಕ್ ರೌಂಡ್​ಅಪ್

01. ದಸರಾ ಆಚರಣೆ ಬಗ್ಗೆ ಸೆ.3ಕ್ಕೆ ಸಿಎಂ ಸಭೆ
ಮೈಸೂರಿನಲ್ಲಿ ನಾಡಹಬ್ಬ ದಸರಾ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ, ಸೆಪ್ಟೆಂಬರ್ 3 ರಂದು ಸಿಎಂ ಬೊಮ್ಮಾಯಿ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಕೊಠಡಿಯಲ್ಲಿ ಸಂಜೆ 4 ಘಂಟೆಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಈ ವರ್ಷದ ನಾಡಹಬ್ಬ ದಸರಾ ಆಚರಣೆ ಬಗ್ಗೆ ರೂಪುರೇಷೆ. ಕೊರೊನಾ ನಿಯಮ ಪರಿಪಾಲಿಸಿ, ಹಬ್ಬವನ್ನು ಹೇಗೆ ಆಚರಿಸಬೇಕು? ಎಂಬುದರ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತೆ

02. ಮೂರು ಸಾವಿರ ಮಠದ ಶ್ರೀಗಳ ಭೇಟಿಯಾದ ಡಿಕೆಶಿ
ಹುಬ್ಬಳ್ಳಿಗೆ ಭೇಟಿ ಕೊಟ್ಟಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮೂರು ಸಾವಿರ ಮಠಕ್ಕೆ ಭೇಟಿ ನೀಡಿದ್ದಾರೆ. ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಭೇಟಿ ನೀಡಿದ ಡಿಕೆಶಿ ಜಗದ್ಗುರು ಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದಾರೆ. ನಿನ್ನೆ ರಾತ್ರಿ ಭೇಟಿ ಮಾಡಿ, ಆಶೀರ್ವಾದ ಪಡೆದ ಡಿ.ಕೆ.ಶಿವಕುಮಾರ್‌ ಶ್ರೀಗಳ ಜೊತೆ ಚುನಾವಣೆ ಬಗ್ಗೆ ಹಾಗೂ ಪ್ರಸಕ್ತ ರಾಜಕೀಯ ಬೆಳವಣಿಗೆಯ ಬಗ್ಗೆಯೂ ಚರ್ಚೆ ನಡೆಸಿದ್ದಾಗಿ ಮಾಹಿತಿ ಲಭ್ಯವಾಗಿದೆ. .

03. ನೂತನ ಮೆಟ್ರೋ ಮಾರ್ಗ ಇಂದು ಉದ್ಘಾಟನೆ
ನೂತನ ನಾಯಂಡಳ್ಳಿ ಮತ್ತು ಕೆಂಗೇರಿ ಮೆಟ್ರೋ ಮಾರ್ಗ ಇಂದು ಉದ್ಘಾಟನೆಗೆ ಸಜ್ಜಾಗಿದೆ. ಬೆಳಗ್ಗೆ 10.30ಕ್ಕೆ ಮೆಟ್ರೋ ಮಾರ್ಗ ಉದ್ಘಾಟನೆಯಾಗಲಿದ್ದು, ಮೆಟ್ರೋ ನಿಲ್ದಾಣಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಇನ್ನು ಬೆಳಗ್ಗೆ 10.30ಕ್ಕೆ ಸಿಎಂ ಬಸವರಾಜ್‌ ಬೊಮ್ಮಾಯಿ ನೂತನ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಲಿರುವ ಹಿನ್ನೆಲೆಯಲ್ಲಿ, ನೂತನ ಎಲ್ಲಾ ಮೆಟ್ರೋ ನಿಲ್ದಾಣ ವಿದ್ಯುತ್‌ ದೀಪಗಳಿಂದ ಅಲಂಕಾರಗೊಂಡು ಜಘಮಘಿಸುತ್ತಿದೆ. ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ..

04. ಉಗ್ರರಿಗೆ ‘ದೊಡ್ಡಣ್ಣ’ನ ದೊಡ್ಡ ಎಚ್ಚರಿಕೆ
ಕಾಬೂಲ್​ ದಾಳಿ ಬಳಿಕ ಐಸಿಸ್​-ಕೆ ಉಗ್ರ ಸಂಘಟನೆ ಮೇಲೆ ಏರ್​ಸ್ಟ್ರೈಕ್​ ಮಾಡಿದ್ದ ಅಮೆರಿಕಾ ಇಬ್ಬರು ಉಗ್ರರನ್ನ ಸೆದೆ ಬಡಿದು ಪ್ರತೀಕಾರ ಪಡೆದಿತ್ತು. ಆದ್ರೆ ಅಮೆರಿಕಾದ ಪ್ರತಿಕಾರದ ದಾಹ ಇನ್ನೂ ತೀರಿಲ್ಲ, ಕಾರಣ ಮತ್ತಷ್ಟು ಏರ್​ಸ್ಟ್ರೈಕ್​ ನಡೆಸೋದಾಗಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್​ ಎಚ್ಚರಿಕೆ ಕೊಟ್ಟಿದ್ದಾರೆ. ದಾಳಿಗೆ ಕಾರಣರಾದ ಪ್ರತಿಯೊಬ್ಬರನ್ನು ನಾವು ಹುಡುಕಿ ಹುಡುಕಿ ಬೇಟೆಯಾಡುತ್ತೇವೆ. ಪ್ರತೀ ಉಗ್ರರಿಗೂ ತಕ್ಕ ಪಾಠವನ್ನ ಕಲಿಸಿಯೇ ತೀರುತ್ತೇವೆ. ಮತ್ತೊಂದು ಏರ್​ ಸ್ಟ್ರೈಕ್ ಮಾಡುತ್ತೇವೆ ಅಂತಾ ವಾರ್ನ್​ ಮಾಡಿದ್ದಾರೆ.

05. ಪಂಜಶೀರ್​ ವಶಕ್ಕೆ ಎಂದು ತಾಲಿಬಾನ್ ಸುಳ್ಳಾಟ​
ಅಫ್ಘಾನ್​ನ ಬಹುತೇಕ ಪ್ರಾಂತ್ಯಗಳನ್ನ ವಶಪಡೆದಿರುವ ತಾಲಿಬಾನ್​ಗೆ ಪಂಜ್​ಶೀರ್​ ಇನ್ನೂ​ ಸವಾಲಾಗಿ ಪರಿಣಮಿಸಿದೆ. ಹೀಗಿರುವಾಗ ಇದ್ದಕಿದ್ದಂತೆ ತಾಲಿಬಾನ್​ ನಾಯಕರು ಪಂಜ್​ಶೀರ್​ ವಶ ಪಡೆದಿರೋದಾಗಿ ಘೋಶಿಸಿತ್ತು. ಯಾವುದೇ ಘರ್ಷಣೆಗಳಿಲ್ಲದೆ ತಾಲಿಬಾನ್​ ನಾಯಕರು ಪಂಜ್​ಶೀರ್​ ಪ್ರವೇಶಿಸಿರೋದಾಗಿ ಹೇಳಿಕೊಂಡಿತ್ತು. ಆದ್ರೆ ತಾಲಿಬಾನ್​ ನಾಯಕರ ಘೋಷಣೆಯನ್ನ ಪಂಜ್​ಶೀರ್​ ತಳ್ಳಿ ಹಾಕಿದೆ. ತಾಲಿಬಾನಿಗಳು ಪಂಜ್​ಶೀರ್​ ಪ್ರವೇಶಿಲ್ಲ ಅಂತಾ ಮಸೂದ್​ ಬೆಂಬಲಿಗರು ಸ್ಪಷ್ಟ ಪಡಿಸಿದ್ದಾರೆ. ಪಂಜ್​ಶೀರ್​ ವಶಪಡೆದಿರೋದಾಗಿ ತಾಲಿಬಾನ್​ ಹರಿಬಿಟ್ಟ​ ವಿಡಿಯೋವನ್ನೂ ಪಂಜ್​ಶೀರ್ ನಾಯಕರು​ ಅಲ್ಲಗಳೆದಿದ್ದಾರೆ..

06 . ಉನ್ನತ ಶಿಕ್ಷಣ ಸಚಿವನ ನೇಮಿಸಿದ ತಾಲಿಬಾನ್
ತಾಲಿಬಾನಿ ಉಗ್ರರು ಸರ್ಕಾರ ರಚನೆಗೆ ಮುಂದಾಗಿದ್ದು ಉನ್ನತ ಶಿಕ್ಷಣ ಮಂತ್ರಿ ಹಾಗೂ ಕ್ರೀಡಾ ನಿರ್ದೇಶಕರನ್ನು ಆಯ್ಕೆ ಮಾಡಿದೆ. ತಾಲಿಬಾನಿ ಸರ್ಕಾರದಲ್ಲಿ ಅಬ್ದುಲ್ ಬಾಕಿ ಹಕ್ಕಾನಿಯನ್ನು ಹಂಗಾಮಿ ಉನ್ನತ ಶಿಕ್ಷಣ ಮಂತ್ರಿಯಾಗಿ ಮತ್ತು ಬಶೀರ್ ಅಹ್ಮದ್ ರೋಸ್ತಮ್‌ಜಾಯ್ ಅವರನ್ನು ಅಫ್ಘಾನಿಸ್ತಾನದ ಕ್ರೀಡಾ ಒಕ್ಕೂಟದ ಹಂಗಾಮಿ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

07. ವರನಿಗೆ ವಧುವಿನಿಂದ ಬಿಸಿ ಬಿಸಿ ಕಜ್ಜಾಯ!
ಮನುಷ್ಯ ದುಶ್ಚಟಗಳ ದಾಸನಾದ್ರೆ ಎಂತಹ ಪರಿಸ್ಥಿತಿ ಎದುರಾಗುತ್ತೆ ಅನ್ನೋದಕ್ಕೆ ಈ ದೃಶ್ಯವೇ ಸಾಕ್ಷಿ. ಮದುವೆಯಲ್ಲಿಯೂ ಮದುಮಗ ಬಿಟ್ಟು ಬಿಡದೇ ಗುಟುಕ ಜಯ್ಯುತ್ತಿರುತ್ತಾನೆ. ಇದನ್ನು ನೋಡಿ ಕೋಪಗೊಂಡ ವಧು ವಾಗ್ವಾದಕ್ಕಿಳಿಯುತ್ತಾಳೆ. ಪಿತ್ತ ನೆತ್ತಿಗೇರಿ ಒಂದೇಟು ಕೆನ್ನೆಗೆ ಬಾರಿಸಿಯೇ ಬಿಡ್ತಾಳೆ. ಮದುಮಗಳು ಒಂದೇಟು ಕೊಟ್ಟಿದ್ದೇ ತಡ ತಕ್ಷಣ ಎದ್ದು ಬಾಯಲ್ಲಿದ್ದ ಗುಟುಕವನ್ನು ಹೊರಗೆ ಬೀಸಾಡುತ್ತಾನೆ. ಹೆಂಡತಿಯ ಕೈನಿಂದಲೇ ಕಪಾಳಮೋಕ್ಷ ಮಾಡಿಸಿಕೊಂಡ ಪತಿಯನ್ನ ಕಂಡು ಜನ ಸೋಶಿಯಲ್ ಮಿಡಿಯಾದಲ್ಲಿ ಕಾಮೆಂಟ್ಸ್​​​ಗಳ ಮಹಾಪೂರವನ್ನೇ ಹರಿಸಿದ್ದಾರೆ.

08. ಅಯ್ಯೋ ದ್ಯಾವ್ರೆ..! ಇದ್ಯಾವ ಫ್ಯಾಷನಪ್ಪೋ..
ಮನುಷ್ಯನಿಗೆ ಎಂತೆಂತಹ ಕ್ರೇಜ್ ಇರುತ್ತಪ್ಪ ಎನ್ನೋದಕ್ಕೆ ಈ ಘಟನೆ ಸಾಕ್ಷಿ. ಈ ದೃಶ್ಯದಲ್ಲಿರುವ ಮಹಿಳೆ ತನ್ನ ತಲೆ ಕೂದಲಿಗೆ ಸುತ್ತಿಕೊಂಡಿರುವ ಈ ಬ್ಯಾಂಡ್​​ನ್ನ ಸೂಕ್ಷ್ಮವಾಗಿ ನೋಡಿ. ಹಾವನ್ನು ತನ್ನ ಕೂದಲಿಗೆ ಸುತ್ತಿಕೊಂಡು ಈ ಮಹಿಳೆ ಶಾಪಿಂಗ್ ಬಂದಿದ್ದಾಳೆ, ಒಂದು ಕ್ಷಣ ಈ ವಿಡಿಯೋ ನೋಡಿ ಅಲ್ಲಿದ್ದ ಜನ ಶಾಕ್​ ಆದ್ರೂ, ಮಹಿಳೆಯ ಧೈರ್ಯಕ್ಕೆ ಪ್ರಾಣಿ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಇನ್ನು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದ್ದ ಹಾಗೇ ನೆಟ್ಟಿಗರೆಲ್ಲ ಹಾವನ್ನು ಮಹಿಳೆ ಶೋಷಿಸುತ್ತಿದ್ದಾಳೆ ಅಂತ ಗರಂ ಆಗಿದ್ದಾರೆ.

09. ಬಿಗ್​​ಬಾಸ್ ಒಟಿಟಿಯಲ್ಲಿ ಸನ್ನಿ ಕಪಲ್ಸ್​!
ಪಡ್ಡೆ ಹುಡುಗರ ಹಾಟ್ ಫೇವರೇಟ್ ಸನ್ನಿ ಲಿಯೋನ್ ಓಟಿಟಿ ಬಿಗ್​ಬಾಸ್​ ಪ್ರವೇಶ ಮಾಡಲಿದ್ದಾರೆ. ಮೂಲಗಳ ಪ್ರಕಾರ ಇಂದು ನಡೆಯುವ ಸಂಡೇ ವಾರ್​​​ನ ಸಂಚಿಕೆ ಮುಕ್ತಾಯವಾದ ಬಳಿಕ ಸನ್ನಿ ತನ್ನ ಜೀವನ ಸಂಗಾತಿ ಡೇನಿಯಲ್ ಜೊತೆ ಬಿಗ್​​ಬಾಸ್​​ಗೆ ಅತಿಥಿಯಾಗಿ ಹೋಗಲಿದ್ದಾರೆ. ಇನ್ನು ಈ ಭಾರಿ ಓಟಿಟಿಯಲ್ಲಿ ಬರುತ್ತಿರುವ ಬಿಗ್​​ಬಾಸ್​​ನಲ್ಲಿ ಸ್ಪರ್ಧಿಗಳು ಕನೆಕ್ಷನ್ ಆಗಿ ಆಡಬೇಕು. ಈ ಹಿನ್ನಲೆ ಸನ್ನಿ ಕೂಡ ತನ್ನ ಕನೆಕ್ಷನ್ ಜೊತೆ ಗೆಸ್ಟ್ ಆಗಿ ಹೋಗಿ ಜೋಡಿಗಳಿಗೆ ಸಲಹೆ ನೀಡಲಿದ್ದಾರೆ.

10. ಟೀಮ್ ಇಂಡಿಯಾ ಅಭಿಮಾನಿಗೆ ಇಂಗ್ಲೆಂಡ್​ನಲ್ಲಿ ನಿಷೇಧ!
ಕ್ರೀಡಾಭಿಮಾನಿಗಳಿಗೆ ಎಷ್ಟರ ಮಟ್ಟಿಗೆ ಹುಚ್ಚು ಇರುತ್ತೆ ಎನ್ನುವುದನ್ನ ಕೆಲವೊಮ್ಮೆ ಊಹಿಸಿಕೊಳ್ಳಲು ಸಾಧ್ಯವಾಗಲ್ಲ.. ಕಾರಣ ಹೆಡ್ಡಿಂಗ್ಲಿಯಲ್ಲಿ ಭಾರತ ಮತ್ತು ಇಂಗ್ಲೆಂಡ್‌ ತಂಡದ ನಡುವೆ ನಿನ್ನೆ ನಡೆದ ಟೆಸ್ಟ್‌ ಮ್ಯಾಚ್‌ನಲ್ಲಿ ಹಿಟ್‌ ಮ್ಯಾನ್‌ ರೋಹಿತ್‌ ಶರ್ಮಾ ಔಟ್‌ ಆಗಿದ್ರು. ಈ ವೇಳೆ ಅಭಿಮಾನಿ ಜಾರ್ವೋ.., ಮೂರನೇ ಬ್ಯಾಟ್ಸ್‌ಮ್ಯಾನ್‌ ಆಗಿ ಕ್ರೀಡಾಂಗಣಕ್ಕೆ ಎಂಟ್ರಿಕೊಟ್ಟಿದ್ದ. ಆತನೇ ನೆಕ್ಟ್‌ ಪ್ಲೇಯರ್‌ ಅನ್ನೋ ರೀತಿ ಬಿಂದಾಸ್‌ ಆಗಿ ಪಿಚ್​ಗೆ ಎಂಟ್ರಿ ಕೊಟ್ಟಿದ್ದ, ತಕ್ಷಣ ಅಲ್ಲದೇ ಇದ್ದ ಸೆಕ್ಯೂರಿಟಿ ಸಿಬ್ಬಂದಿ ಆತನನ್ನ ಹೊರಗೆ ಕಳುಹಿಸಿದ್ದಾರೆ. ಇದೀಗ ಜಾರ್ವೋ ಜೀವಿತಾವಧಿಯವರೆಗೆ ಹೆಡ್ಲಿಂಗ್‌ ಕ್ರೀಡಾಂಗಣಕ್ಕೆ ಅಜೀವ ನಿಷೇಧ ಹೇರಲಾಗಿದೆ, ದಂಡವನ್ನೂ ಸಹ ವಿಧಿಸಲಾಗಿದೆ..

Source: newsfirstlive.com Source link