ಪತ್ನಿಯನ್ನು ಕೊಂದು ಶವವನ್ನು ಹೂತಿಟ್ಟ ಪತಿ ಅರೆಸ್ಟ್

ವಿಜಯಪುರ: ಕ್ಷುಲ್ಲಕ ಕಾರಣಕ್ಕಾಗಿ ಪತಿಯೇ ಪತ್ನಿಯನ್ನು ಕೊಲೆಗೈದು ಶವವನ್ನು ತೋಟದ ಮನೆಯ ಜಮೀನಿನಲ್ಲಿ ಹೂತಿಟ್ಟ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದ ದ್ರಾಕ್ಷಾಯಣಿ ರಾಚಯ್ಯ ಬನ್ನಿಗೋಳ ಮಠ(36) ಹತ್ಯೆಯಾಗಿರುವ ಪತ್ನಿಯಾಗಿದ್ದು, ರಾಚಯ್ಯ ಬನ್ನಿಗೋಳ ಮಠ ಹತ್ಯೆಗೈದಿರುವ ಪಾಪಿ ಪತಿಯಾಗಿದ್ದಾನೆ. ಮಕ್ಕಳನ್ನು ದೂರ ಮಾಡಿದ್ದಾಳೆ ಎನ್ನುವ ಕಾರಣಕ್ಕೆ ಪತ್ನಿಯನ್ನು ರಾಚಯ್ಯ ಕೊಲೆಗೈದು ಶವವನ್ನು ಮನೆಯ ಪಕ್ಕ ಜಮೀನಿನಲ್ಲಿ ಹೂತಿಟ್ಟು ಪರಾರಿಯಾಗಿದ್ದಾನೆ. ಇದನ್ನೂ ಓದಿ: ಹಾಡಹಗಲೇ ಬೆಂಗಳೂರಿನಲ್ಲಿ ಅಪ್ರಾಪ್ತೆಗೆ ಮುತ್ತಿಟ್ಟ ಯುವಕ

ಕೊಲೆಗೈದು ಪರಾರಿಯಾಗಿದ್ದ ಪತಿ ರಾಚಯ್ಯನನ್ನು ಪೊಲೀಸರು ಸೆರೆ ಹಿಡದಿದ್ದು, ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಿಎಂ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ- ಒಂದೂವರೆ ಲಕ್ಷ ಕದ್ದ ಖದೀಮರು

Source: publictv.in Source link