ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ; ಇತಿಹಾಸ ನಿರ್ಮಿಸಿದ ಭವಿನಾ ಪಟೇಲ್

ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ; ಇತಿಹಾಸ ನಿರ್ಮಿಸಿದ ಭವಿನಾ ಪಟೇಲ್

ಪ್ಯಾರಾಲಿಂಪಿಕ್ಸ್​ನಲ್ಲಿ ಫೈನಲ್ ಪ್ರವೇಶಿಸಿದ್ದ ಭವಿನಾ ಬೆನ್​ ಪಟೇಲ್ ಟೇಬಲ್ ಟೆನ್ನಿಸ್​ನಲ್ಲಿ ಬೆಳ್ಳಿಪದಕ ಗೆದ್ದಿದ್ದಾರೆ. ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಭವಿನಾ ಪಟೇಲ್ ಫೈನಲ್ ಪ್ರವೇಶಿಸಿದರು. ಚೀನಾದ ಜೋ ಯಿಂಗ್ ಎದುರು ಭವಿನಾ ಪಟೇಲ್ ಸೋಲನುಭವಿಸಿದ್ದಾರೆ. ಫೈನಲ್​ನ್ಲಿ 3-0 ನೇರ ಸೆಟ್​ಗಳಿಂದ ಭವಿನಾ ಪರಾಭವಗೊಂಡಿದ್ದು ಬೆಳ್ಳಿಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

ಇನ್ನು ಪ್ಯಾರಾಲಿಂಪಿಕ್ಸ್​ನಲ್ಲಿ ಮೊದಲ ಪದಕ ಗೆದ್ದ ಭವಿನಾ ಬೆನ್ ಪಟೇಲ್​ಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

Source: newsfirstlive.com Source link