ಬೆಂಗಳೂರು ಕಮಿಷನರ್ ಆಯ್ಕೆ ವಿಚಾರ: ಜೋಡೆತ್ತು vs RSS​..!

ಬೆಂಗಳೂರು ಕಮಿಷನರ್ ಆಯ್ಕೆ ವಿಚಾರ: ಜೋಡೆತ್ತು vs RSS​..!

ಬೆಂಗಳೂರು: ಪೊಲೀಸ್ ಕಮಿಷನರ್ ವಿಚಾರವಾಗಿ ಈಗಾಗಲೇ ಸಮರ ಶುರುವಾಗಿದೆ. ಎರಡು ಅಧಿಕಾರಿಗಳ ವಿಚಾರದಲ್ಲಿ ಸಂಘದ ಜೊತೆ ಸಂಘರ್ಷ ಶುರುವಾಗಿದೆ. ನಗರದ ಪೊಲೀಸ್ ಆಯುಕ್ತರ ಆಯ್ಕೆ ವಿಚಾರದಲ್ಲಿ ಸಂಘದ ಆಯ್ಕೆ ಯಾರು? ಸರ್ಕಾರ ಯಾರ ಪರ ನಿಲುವು ಹೊಂದಿದೆ ಅನ್ನೋ ಚರ್ಚೆ ಇದೀಗ ಶುರುವಾಗಿದೆ ಎನ್ನಲಾಗಿದೆ.

ಸದ್ಯ ಕಮಲ್ ಪಂತ್ ನಗರ ಪೋಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಇವರ ಸ್ಥಾನಕ್ಕೆ ಮುಂದೆ ಯಾರನ್ನ ಆಯ್ಕೆ ಮಾಡಬೇಕು ಅನ್ನೋದ್ರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಈಗಾಲೇ ಲಾಬಿ ಶುರುವಾಗಿದೆ ಎನ್ನಲಾಗಿದೆ. ಹೌದು.. ಬೆಂಗಳೂರು ಪೊಲೀಸ್ ಆಯುಕ್ತರ ವಿಚಾರದಲ್ಲಿ ಎರಡು ಹೆಸರಗಳು ಪ್ರಮುಖವಾಗಿ ಕೇಳಿಬರುತ್ತಿವೆ. ADGP ಱಂಕ್​ನ ಇಬ್ಬರು ಅಧಿಕಾರಿಗಳ ಮಧ್ಯೆ ಫೈಟ್ ಶುರುವಾಗಿದೆ ಅಂತಾ ಹೇಳಲಾಗಿದೆ.

ಸರ್ಕಾರದ ನಿಲುವು ಏನು..?
ADGP ಸಲೀಂ ಅವರನ್ನ ನೇಮಕ ಮಾಡುವಂತೆ ಕಂದಾಯ ಸಚಿವ ಅಶೋಕ್ ಲಾಬಿ ಮಾಡುತ್ತಿದ್ದಾರೆ. ಮಾತ್ರವಲ್ಲ ಸಿಎಂ ಬೊಮ್ಮಾಯಿ ಅವರಿಗೂ ಸಲಿಂರನ್ನ ನಗರ ಪೋಲೀಸ್ ಆಯುಕ್ತರನ್ನಾಗಿ ಮಾಡಲು ಆಸಕ್ತಿ ಇದೆ ಅಂತಾ ಹೇಳಲಾಗುತ್ತಿದೆ. ಇತ್ತ ಆರ್​​ಎಸ್​ಎಸ್ ನಾಯಕರು ಬಿ.ದಯಾನಂದ್ ಅವರನ್ನ ನಗರ ಪೋಲೀಸ್ ಆಯುಕ್ತರ ಹುದ್ದೆಗೆ ನೇಮಕ ಮಾಡಬೇಕು ಅಂತಾ ಒತ್ತಾಯಿಸಿದ್ಯಂತೆ. ಹೀಗಾಗಿ ಮಹಾ ನಗರದ ಪೋಲೀಸ್ ಆಯುಕ್ತ ಹುದ್ದೆ ನೇಮಕ ವಿಚಾರದಲ್ಲಿ ಜೋಡೆತ್ತು V/s ಸಂಘ ಪರಿವಾರ ಎಂಬಂತಾಗಿದೆ ಅನ್ನೋ ಮಾತುಗಳು ಕೇಳಿಬಂದಿವೆ.

ಹೀಗಾಗಿ ನಗರ ಪೋಲೀಸ್ ಆಯುಕ್ತರ ನೇಮಕ ವಿಚಾರದಲ್ಲಿ ಯಾರ ಕೈ ಮೇಲಾಗಲಿದೆ? ಜೋಡೆತ್ತು ನಿರ್ಧಾರಕ್ಕೆ ಬ್ರೇಕ್ ಹಾಕುತ್ತಾ ಆರ್​​ಎಸ್​ಎಸ್​? ಅಥವಾ ಆರ್​ಎಸ್​ಎಸ್​ ನಾಯಕರ ಮನವೊಲಿಸಿ, ಜೊಡೆತ್ತುಗಳ ನಿರ್ಧಾರದಂತೆ ಸಲೀಂಗೆ ಸಿಗಲಿದ್ಯಾ ಬೆಂಗಳೂರು ನಗರ ಪೊಲೀಸ್ ಆಯುಕ್ತ ಹುದ್ದೆ? ಅನ್ನೋ ಚರ್ಚೆ ಜೋರಾಗಿದೆ.

Source: newsfirstlive.com Source link