ರಸ್ತೆ ಮಧ್ಯೆ ಬಿದ್ದಿದ್ದ ಕೈ ಕಂಡು ಕಂಗಾಲಾದ ಜನ.. ಪೊಲೀಸರು ಬಂದು ನೋಡಿದಾಗ ಬಯಲಾಯ್ತು ಸತ್ಯ

ರಸ್ತೆ ಮಧ್ಯೆ ಬಿದ್ದಿದ್ದ ಕೈ ಕಂಡು ಕಂಗಾಲಾದ ಜನ.. ಪೊಲೀಸರು ಬಂದು ನೋಡಿದಾಗ ಬಯಲಾಯ್ತು ಸತ್ಯ

ಬೆಂಗಳೂರು: ನಗರದ ಕೊಡಿಗೇಹಳ್ಳಿ ಮುಖ್ಯರಸ್ತೆಯ ಮೋರ್ ಶೋರೂ ಬಳಿ ಓಡಾಡ್ತಿದ್ದ ಜನರು ನಿನ್ನೆ ರಾತ್ರಿ ಬೆಚ್ಚಿಬಿದ್ದಿದ್ದಾರೆ. ಇದಕ್ಕೆ ಕಾರಣವಾಗಿದ್ದು ಒಂದು ಆರ್ಟಿಫಿಷಿಯಲ್ ಕೈ.

ಯಾರೋ ಕಿಡಿಗೇಡಿಗಳು ಕೊಡಿಗೇಹಳ್ಳಿ ಮುಖ್ಯರಸ್ತೆಯ ಮೋರ್ ಶೋ ರೂಂ ಬಳಿ ಕೃತಕ ಮುಂಗೈ ಒಂದನ್ನು ಎಸೆದು ಹೋಗಿದ್ದಾರೆ. ರಸ್ತೆಯಲ್ಲಿ ಮುಂಗೈ ಬಿದ್ದಿರೋದನ್ನ ಕಂಡ ಜನರು ಅದ ನಿಜವಾದ ಮುಂಗೈ ಅಂತ ತಿಳಿದು ಗಾಬರಿ ಬಿದ್ದಿದ್ದಾರೆ, ಕೂಡಲೇ ಸ್ಥಳೀಯರು ಕೊಡಿಗೇಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರಿಂದ ರಸ್ತೆಯಲ್ಲಿ ಬಿದ್ದಿದ್ದ ಮುಂಗೈ ಕೃತಕ ಮುಂಗೈ ಅನ್ನೋದು ಪತ್ತೆಯಾಗಿದೆ. ಅಸಲಿ ವಿಷಯ ತಿಳಿದ ಕೊಡಿಗೇಹಳ್ಳಿ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ.

blank

Source: newsfirstlive.com Source link