‘ಸತ್ತರೆ ಉಚಿತವಾಗಿ ಶವ ಸಂಸ್ಕಾರ’: ಬಿಜೆಪಿ ಪ್ರಣಾಳಿಕೆ ಕಂಡು ಗಾಬರಿ ಬಿದ್ದ ಜನರು

‘ಸತ್ತರೆ ಉಚಿತವಾಗಿ ಶವ ಸಂಸ್ಕಾರ’: ಬಿಜೆಪಿ ಪ್ರಣಾಳಿಕೆ ಕಂಡು ಗಾಬರಿ ಬಿದ್ದ ಜನರು

ಬೆಳಗಾವಿ: ಕುಂದಾನಗರಿಯಲ್ಲಿ ಪಾಲಿಕೆ ಚುನಾವಣಾ ಕಾವು ಜೋರಾಗಿದೆ. ಸೆಪ್ಟೆಂಬರ್ 3ರಂದು ನಡೆಯಲಿರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಪ್ರಣಾಳಿಕೆಯಲ್ಲಿ ಭರ್ಜರಿ ಭರವಸೆಗಳ ಜೊತೆಗೆ ಕೆಲವೊಂದು ಅಂಶಗಳು ಮತದಾರ ಪ್ರಭುವಿನ ಹುಬ್ಬೇರುವಂತೆ ಮಾಡಿವೆ.

ಇದನ್ನೂ ಓದಿ: ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ‘ಸಾಹುಕಾರ’ನಿಗೆ ಸಿಕ್ಕಿದೆ ಹೊಸ ಅಸ್ತ್ರ; ಗೇಮ್ ಒಂದೇ ಬಾಕಿ..!

ಬೆಳಗಾವಿ ಮಹಾನಗರಕ್ಕಾಗಿಯೇ ಬಿಜೆಪಿಯಿಂದ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದ್ದು, ‘ಸತ್ತರೆ ಉಚಿತವಾಗಿ ಶವ ಸಂಸ್ಕಾರಕ್ಕೆ ವ್ಯವಸ್ಥೆ’ ಮಾಡ್ತೀವಿ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿರುವ ಅಂಶ ಕಂಡು ಕುಂದಾನಗರಿಗರು ಬೆಚ್ಚಿಬಿದ್ದಿದ್ದಾರೆ. ಬಿಜೆಪಿ ಪ್ರಣಾಳಿಕೆ ಕಂಡು ಅವಕ್ಕಾದ ಕುಂದಾನಗರಿ ಜನ ಬಿಜೆಪಿ ಪಕ್ಷ ಜನರ ಸಾವನ್ನೇ ಬಯಸುತ್ತಿದೆಯಾ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಣಾಳಿಕೆಯ ಪ್ರಮುಖ ಅಂಶಗಳು

  • ನೂರು ರೂಪಾಯಿ ಬಾಂಡ್ ಮೇಲೆ ಜಮೀನು ಖರೀದಿಸಿ ಮನೆ ನಿರ್ಮಿಸಿಕೊಂಡ ಅಕ್ರಮ ಮನೆ ಸಕ್ರಮ.
  • ಮಹಾನಗರ ಪಾಲಿಕೆಯಿಂದ ಉಚಿತ ಶವಸಂಸ್ಕಾರಕ್ಕೆ ವ್ಯವಸ್ಥೆ.
  • ಬೆಳಗಾವಿ ನಗರವನ್ನ ಕಸಮುಕ್ತ ನಗರವನ್ನಾಗಿಸುವ ಗುರಿ.
  • ನಗರ ಸ್ವಚ್ಚತೆ, ಮನೆ ಮನೆಗಳಿಂದ ಕಸ ಸಂಗ್ರಹಕ್ಕೆ ಸಮರ್ಪಕ ವ್ಯವಸ್ಥೆ ಜಾರಿ.
  • ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ನಾಲೆಗಳ ಕಾಂಕ್ರಿಟ್​.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್​​; ಮಮತಾ ಸೋದರಳಿಯ​ ಅಭಿಷೇಕ್ ಬ್ಯಾನರ್ಜಿಗೆ ED ಸಮನ್ಸ್

blank

Source: newsfirstlive.com Source link