ಕೊರೊನಾ ನಡುವೆಯೇ ನ್ಯುಮೋನಿಯಾ, ಡೆಂಘೀ ಆರ್ಭಟ.. ಬಳ್ಳಾರಿಯಲ್ಲಿ ಆಸ್ಪತ್ರೆ ಸೇರಿದ 300 ಮಕ್ಕಳು

ಕೊರೊನಾ ನಡುವೆಯೇ ನ್ಯುಮೋನಿಯಾ, ಡೆಂಘೀ ಆರ್ಭಟ.. ಬಳ್ಳಾರಿಯಲ್ಲಿ ಆಸ್ಪತ್ರೆ ಸೇರಿದ 300 ಮಕ್ಕಳು

ಬಳ್ಳಾರಿ: ಕೊರೊನಾ ಮೂರನೇ ಅಲೆ ಆತಂಕದಲ್ಲಿರುವ ಗಣಿನಾಡು ಬಳ್ಳಾರಿಗೆ ಮತ್ತೊಂದು ಶಾಕ್​ ಎದುರಾಗಿದೆ. ಮೂರನೇ ಅಲೆ ನಡುವೆಯೇ ಗಣಿನಾಡಲ್ಲಿ ನ್ಯುಮೋನಿಯಾ, ಡೆಂಘೀ ಕಾಯಿಲೆಗೆ ಜನ ಹೈರಾಣಾಗಿದ್ದು ಜಿಲ್ಲೆಯಲ್ಲಿ ಭೀತಿ ಸೃಷ್ಟಿಸಿದೆ.

ಬಳ್ಳಾರಿ, ವಿಜಯನಗರ ಭಾಗದಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವ ಈ ಮಾರಕ ರೋಗಗಳು ಮಕ್ಕಳನ್ನೆ ಟಾರ್ಗೆಟ್ ಮಾಡ್ತಿವೆ ಎನ್ನಲಾಗಿದೆ. 16 ವರ್ಷದೊಳಗಿನ ಮಕ್ಕಳಲ್ಲಿ ನ್ಯುಮೋನಿಯಾ, ಡೆಂಗ್ಯೂ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು, ಬಳ್ಳಾರಿ ವಿಮ್ಸ್​ನಲ್ಲಿ ಬರೋಬ್ಬರಿ 300 ಮಕ್ಕಳು ಚಿಕಿತ್ಸೆಗೆ ದಾಖಲಾಗಿದ್ದಾರೆ.

blank

ಇದನ್ನೂ ಓದಿ: ಮುಗಿಯದ ಖಾತೆ ಕ್ಯಾತೆ.. ಹೈಕಮಾಂಡ್​ಗೆ ಪರೋಕ್ಷ ಎಚ್ಚರಿಕೆ ಕೊಟ್ರಾ ಆನಂದ್ ಸಿಂಗ್..?

300 ಮಕ್ಕಳ ಪೈಕಿ ಬಹುತೇಕ ಮಕ್ಕಳಿಗೆ ನಿಮೋನಿಯಾ ಕಾಯಿಲೆ ಪತ್ತೆಯಾಗಿದ್ದು, 19 ಮಕ್ಕಳಲ್ಲಿ ಡೆಂಘೀ ಕಾಯಿಲೆ ಪತ್ತೆಯಾಗಿರುವುದು ಜಿಲ್ಲಾಡಳಿತವನ್ನು ಆತಂಕಕ್ಕೀಡು ಮಾಡಿದೆ. ಎದೆ ನೋವು, ನೆಗಡಿ, ಕೆಮ್ಮು ಜ್ವರ ಅಂತಾ ಮಕ್ಕಳು ಆಸ್ಪತ್ರೆಗೆ ಬರ್ತಿದ್ದಾರೆ. ಆಸ್ಪತ್ರೆಗೆ ದಾಖಲಾದ ಹೆಚ್ಚಿನ ಮಕ್ಕಳಲ್ಲಿ ಆಯಾಸ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.

ಸದ್ಯ ವಿಮ್ಸ್​ನಲ್ಲಿ ಸ್ಥಳೀಯ ಮಟ್ಟದ ಚಿಕಿತ್ಸೆ ನೀಡಲಾಗುತ್ತಿದ್ದು, ನ್ಯುಮೋನಿಯಾ, ಡೆಂಘೀ ಕಂಟ್ರೋಲ್ ಮಾಡುವುದು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.

Source: newsfirstlive.com Source link