ರಶ್ಮಿಕಾ ಮಂದಣ್ಣ ಈಗ ಬಾಲಿವುಡ್​ಗೂ ಕ್ರಷ್; ‘ಮಿಷನ್ ಮಜ್ನು’ ಶೂಟಿಂಗ್​ ಕಂಪ್ಲೀಟ್​​..

ರಶ್ಮಿಕಾ ಮಂದಣ್ಣ ಈಗ ಬಾಲಿವುಡ್​ಗೂ ಕ್ರಷ್; ‘ಮಿಷನ್ ಮಜ್ನು’ ಶೂಟಿಂಗ್​ ಕಂಪ್ಲೀಟ್​​..

ರಶ್ಮಿಕಾ ಮಂದಣ್ಣ.. ಟಾಲಿವುಡ್ , ಕಾಲಿವುಡ್ ಹಾಗೂ ಬಾಲಿವುಡ್​ ಸಿನಿ ಲೋಕದಲ್ಲಿ ಸಖತ್​ ಬ್ಯುಸಿಯಾಗಿರೋ ನಟಿಮಣಿ. ಇನ್ನು ‘ಮಿಷನ್​ ಮಜ್ನು’ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟ ಈ ಮಡಿಕೇರಿ ಬ್ಯೂಟಿ ಸದ್ಯ ಬಾಲಿವುಡ್​​ ಬಿಗ್ ಬಿ ಅಮಿತಾಭ್ ಬಚ್ಚನ್ ಜೊತೆ ‘ಗುಡ್​ಬಾಯ್​’ ಅನ್ನೊ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ.

ಇದೀಗ ‘ಮಿಷನ್​ ಮಜ್ನು’ ಸಿನಿಮಾದ ಶೂಟಿಂಗ್​ ಮುಕ್ತಾಯಗೊಂಡಿರುವ ಬಗ್ಗೆ ರಶ್ಮಿಕಾ ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ಹೌದು, ರಶ್ಮಿಕಾ ಮಂದಣ್ಣ ಮತ್ತು ಸಿದ್ಧಾರ್ಥ್ ಮೆಲ್ಹೋತ್ರ ನಟನೆಯ ‘ಮಿಷನ್​ ಮಜ್ನು’ ಚಿತ್ರದ ಶೂಟಿಂಗ್​ ಕಂಪ್ಲೀಟ್​ ಅಗಿದೆ. ನಿರ್ದೇಶಕ ಶಾಂತನು ಬಗ್ಚಿ ಚಿತ್ರಕ್ಕೆ ಆಕ್ಷನ್​ ಕಟ್​ ಹೇಳಿದು, ನಿರ್ಮಾಪಕ ರೋನಿ ಸ್ಕ್ರೂವಾಲಾ ‘ಮಿಷನ್​ ಮಜ್ನು’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಇನ್ನು ‘ಮಿಷನ್​ ಮಜ್ನು’ ರಶ್ಮಿಕಾ ನಟನೆಯ ಮೊದಲ ಬಾಲಿವುಡ್​ ಸಿನಿಮಾ ಅಗಿರೋದು ವಿಶೇಷ. ಸದ್ಯ ಚಿತ್ರದ ಶೂಟಿಂಗ್​ ಕಂಪ್ಲೀಟ್ ಅಗಿದು ರಶ್ಮಿಕಾ ಮಂದಣ್ಣ.. ಮತ್ತು ಸಿದ್ಧಾರ್ಥ್ ಮೆಲ್ಹೋತ್ರ ಒಬ್ಬರಿಗೊಬ್ಬರು ಧನ್ಯವಾದ ತಿಳಿಸಿದ್ದಾರೆ.

Source: newsfirstlive.com Source link