ಪ್ಯಾರಾಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭವಿನಾಗೆ ಕ್ರಿಕೆಟ್​ ದಿಗ್ಗಜರಿಂದ ಅಭಿನಂದನೆಗಳ ಮಹಾಪೂರ

ಪ್ಯಾರಾಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭವಿನಾಗೆ ಕ್ರಿಕೆಟ್​ ದಿಗ್ಗಜರಿಂದ ಅಭಿನಂದನೆಗಳ ಮಹಾಪೂರ

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭವಿನಾ ಬೆನ್ ಪಟೇಲ್​ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಭವಿನಾಳ ಸಾಧನೆಯನ್ನ ಕ್ರಿಕೆಟ್​ ದಿಗ್ಗಜರಾದ ಅನಿಲ್ ಕುಂಬ್ಳೆ, ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ವಾಸೀಂ ಜಾಫರ್ ಸೇರಿದಂತೆ ಹಲವರು ಕೊಂಡಾಡಿದ್ದಾರೆ. ತಮ್ಮ ಸಾಧನೆಯಿಂದ ಲಕ್ಷಾಂತರ ಯುವಕ, ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಹೇಳುತ್ತಾ ಪ್ರಶಂಸೆಯ ಸುರಿಮಳೆಗೈದಿದ್ದಾರೆ.

ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ; ಇತಿಹಾಸ ನಿರ್ಮಿಸಿದ ಭವಿನಾ ಪಟೇಲ್

ಭುವನಾ ಬೆಳ್ಳಿ ಗೆಲ್ಲುತ್ತಿದ್ದಂತೆ ತವರೂರಾದ ಗುಜರಾತ್‌ನ ಮೆಹ್ಸಾನಾದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪಟಾಕಿ ಸಿಡಿಸುವ ಮೂಲಕ ಕುಟುಂಬದ ಸದಸ್ಯರು ಹಾಗೂ ನೆರೆ ಮನೆಯವರು ತಮ್ಮ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ

ಮಹಿಳಾ ಟೇಬಲ್ ಟೆನಿಸ್ ಸಿಂಗಲ್ಸ್​ನಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆ ಮೂಡಿಸಿದ್ದ ಭವಿನಾ, ಇಂದು ನಡೆದ ಫೈನಲ್​ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿ ಜೋ ಯಿಂಗ್ ಎದುರು 3-0 (11-7, 11-5, 11-6) ಸೆಟ್​​ಗಳ ಅಂತರದಿಂದ ಸೋಲು ಅನುಭವಿಸಿದರು. ಇದರಿಂದಾಗಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

Source: newsfirstlive.com Source link