ರೈಲುಹಳಿಯಲ್ಲಿ ಸಿಲುಕಿದ್ದ ‘ಮೇಕೆ ಮರಿ’ ರಕ್ಷಿಸಿದ ವೀರ, ತನ್ನ ಕಾಲನ್ನೇ ಕಳೆದುಕೊಂಡ..!

ರೈಲುಹಳಿಯಲ್ಲಿ ಸಿಲುಕಿದ್ದ ‘ಮೇಕೆ ಮರಿ’ ರಕ್ಷಿಸಿದ ವೀರ, ತನ್ನ ಕಾಲನ್ನೇ ಕಳೆದುಕೊಂಡ..!

ದಕ್ಷಿಣ ಕನ್ನಡ: ಮೇಕೆ ಮರಿಯೊಂದರ ಕಾಲು ರೈಲು ಹಳಿಯಲ್ಲಿ ಸಿಲುಕಿತ್ತು. ಜನ ಆಡಿನ ನರಳಾಟ ನೋಡಿಕೊಂಡೇ ನಿಂತಿದ್ದರು. ಅಷ್ಟರಲ್ಲಿ ರೈಲು ಕೂಡಾ ಆ ಹಳಿಯಲ್ಲೇ ಆಗಮಿಸಿತು. ಇನ್ನೇನು ರೈಲಿಗೆ ಮೇಕೆ ಮರಿ ಸಿಲುಕಿಕೊಂಡು ಸಾಯುವ ಹೊತ್ತಿಗೆ ಆತ ಬಂದು ಮೇಕೆ ಮರಿಯನ್ನ ರಕ್ಷಿಸಿದ್ದಾನೆ. ದುರಾದೃಷ್ಟವಶಾತ್ ಈ ಸಾಹಸದಲ್ಲಿ ಯುವಕ ತನ್ನ ಕಾಲನ್ನೇ ಕಳೆದುಕೊಂಡಿದ್ದಾನೆ.

ಹೌದು ರೈಲಿಗೆ ಸಿಲುಕುತ್ತಿದ್ದ ಮೇಕೆ ರಕ್ಷಿಸಲು ಹೋಗಿ ಯುವಕ ಕಾಲು ಕಳೆದುಕೊಂಡ ದಾರುಣ ಘಟನೆ ಮಂಗಳೂರು ಹೊರವಲಯದ ಜೋಕಟ್ಟೆ ಎಂಬಲ್ಲಿ ಘಟನೆ ನಡೆದಿದೆ. ಚೇತನ್ ಕುಮಾರ್ ಕಾಲು ಕಳೆದುಕೊಂಡ ನತದೃಷ್ಟ ಯುವಕ.

ರೈಲು ಹಳಿಯ ಉದ್ದಕ್ಕೂ ಓಡಾಡಿಕೊಂಡಿದ್ದ ಮೇಕೆ ಮರಿಯ ಕಾಲು ಹಳಿಯಲ್ಲಿ ಸಿಲುಕಿಸಿಕೊಂಡಿದೆ. ರೈಲು ಬರುವುದನ್ನು ಗಮನಿಸಿದ ಚೇತನ್ ಮೇಕೆ ಮರಿ ರಕ್ಷಣೆಗೆ ಮುಂದಾಗಿದ್ದಾನೆ. ಇನ್ನೇನು ಮರಿ ರಕ್ಷಿಸಿ ಚೇತನ್ ಹಳಿಯಿಂದ ಹೊರಬರುವ ಮೊದಲೇ ಧಾವಿಸಿದ ರೈಲು ಚೇತನ್​ ಕಾಲಿನ ಮೇಲೆ ಹರಿದಿದೆ. ಪರಿಣಾಮ ಚೇತನ್​ ಕಾಲು ಕಳೆದುಕೊಂಡಿದ್ದಾನೆ. ಘಟನೆ ಬಳಿಕ ಗಂಭೀರ ಗಾಯಗೊಂಡಿದ್ದ ಚೇತನ್​ನನ್ನು ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಒಂದು ಕಾಲು ಉಳಿಸಬಹುದು ಎಂದು ವೈದ್ಯರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ರಸ್ತೆ ಮಧ್ಯೆ ಬಿದ್ದಿದ್ದ ಕೈ ಕಂಡು ಕಂಗಾಲಾದ ಜನ.. ಪೊಲೀಸರು ಬಂದು ನೋಡಿದಾಗ ಬಯಲಾಯ್ತು ಸತ್ಯ

Source: newsfirstlive.com Source link