ಅಕ್ರಮ ಸಂಬಂಧ ಶಂಕೆ- ಪತ್ನಿಯ ಗುಪ್ತಾಂಗಕ್ಕೆ ಹೊಲಿಗೆ

ಭೋಪಾಲ್: ಅಕ್ರಮ ಸಂಬಂಧದ ಶಂಕೆ ಹಿನ್ನೆಲೆ ಪತ್ನಿಯ ಗುಪ್ತಾಂಗಕ್ಕೆ ಹೊಲಿಗೆ ಹಾಕಿದ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ.

55 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಆಕೆಯ ಗುಪ್ತಾಂಗವನ್ನು ಹೊಲಿದಿದ್ದಾನೆ. ರಾಯ್ಲ ಗ್ರಾಮದಲ್ಲಿ ಅ.24ರಂದು ಈ ಘಟನೆ ನಡೆದಿದೆ.

ತನ್ನ ಹೆಂಡತಿ ತಮ್ಮ ಮನೆಯ ಪಕ್ಕದಲ್ಲಿದ್ದ ಇನ್ನೋರ್ವ ವ್ಯಕ್ತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂಬ ಬಗ್ಗೆ ಆತನಿಗೆ ಅನುಮಾನ ಉಂಟಾಗಿತ್ತು. ಇದೇ ವಿಷಯಕ್ಕೆ ಇಬ್ಬರಿಗೂ ಅನೇಕ ಬಾರಿ ಜಗಳವೂ ಆಗಿತ್ತು. ಒಂದು ದಿನ ಇದೇ ವಿಚಾರವಾಗಿ ಜಗಳವಾಡಿದ ನಂತರ ಆತ ತನ್ನ ಹೆಂಡತಿಯ ಗುಪ್ತಾಂಗಕ್ಕೆ ಹೊಲಿಗೆ ಹಾಕಿದ್ದಾನೆ. ನೋವಿನಿಂದ ನರಳಾಡುತ್ತಿದ್ದ ಆ ಹೆಂಡತಿಯ ಕೂಗಾಟ ಕೇಳಿ ಅಕ್ಕಪಕ್ಕದ ಮನೆಯವರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆಕೆಗೆ ಚಿಕಿತ್ಸೆ ನೀಡಲಾಗಿದೆ. ಇದನ್ನೂ ಓದಿ:  ಹಾಡಹಗಲೇ ಬೆಂಗಳೂರಿನಲ್ಲಿ ಅಪ್ರಾಪ್ತೆಗೆ ಮುತ್ತಿಟ್ಟ ಯುವಕ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ. ತನ್ನ ವಿರುದ್ಧ ಕೇಸ್ ದಾಖಲಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಆರೋಪಿ ಮನೆಯಿಂದ ಪರಾರಿಯಾಗಿದ್ದಾನೆ. ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Source: publictv.in Source link