ಹುಬ್ಬಳ್ಳಿ ಧೂಳಿಗೆ ನಮ್ಮ ಬಟ್ಟೆ ಬಣ್ಣವೇ ಚೇಂಜ್ ಆಗಿ ಹೋಗುತ್ತೆ- ಡಿ.ಕೆ. ಶಿವಕುಮಾರ್ ಹೀಗಂದಿದ್ದೇಕೆ..?

ಹುಬ್ಬಳ್ಳಿ ಧೂಳಿಗೆ ನಮ್ಮ ಬಟ್ಟೆ ಬಣ್ಣವೇ ಚೇಂಜ್ ಆಗಿ ಹೋಗುತ್ತೆ- ಡಿ.ಕೆ. ಶಿವಕುಮಾರ್ ಹೀಗಂದಿದ್ದೇಕೆ..?

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಹುಬ್ಬಳ್ಳಿಯ ಕಾಂಗ್ರೆಸ್ ಕಚೇರಿಯಲ್ಲಿ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿ.. ಬೆಳಿಗ್ಗೆ ನಾನು ಒಂದು ರೌನ್ಡ್ ಹೋಗಿದ್ದೆ. ಹುಬ್ಬಳ್ಳಿ-ಧಾರವಾಡ ನಗರ ಗುಂಡಿಗಳ ನಗರ.. ಡ್ಯಾನ್ಸ್ ಕಲಿಯಬೇಕಿಲ್ಲ, ಕುಳಿತಲ್ಲೇ ಡ್ಯಾನ್ಸ್ ಮಾಡಬಹುದು ಎಂದರು.

ಇದನ್ನೂ ಓದಿ: ‘ಸತ್ತರೆ ಉಚಿತವಾಗಿ ಶವ ಸಂಸ್ಕಾರ’: ಬಿಜೆಪಿ ಪ್ರಣಾಳಿಕೆ ಕಂಡು ಗಾಬರಿ ಬಿದ್ದ ಜನರು

ಎಲ್ಲ ಪೆಟ್ರೋಲ್ ಬಂಕ್ ನಲ್ಲಿ ಅವರದೇ ಫೋಟೋ ಇದೆ. 300 ರೂ ಇದ್ದ ಗ್ಯಾಸ್ ಈಗ 800-900 ಆಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಖಾಸಗಿ ಆಸ್ಪತ್ರೆ ಆರಂಭ ಅಂತ ಹೇಳಿದ್ರು. ಶೆಟ್ಟರ್ ಸಾಹೇಬರೆ ನಾನು ಬರ್ತೀನಿ, ಎಲ್ಲಿದೇ ಆ ಆಸ್ಪತ್ರೆ ನಾನು ನೋಡ್ತೀನಿ. ಸಿಬಿಎಸ್​ಸಿ ಸ್ಕೂಲ್ ಮಾಡ್ತೀವಿ ಅಂತ ಹೇಳಿದ್ರಿ, ಎಲ್ಲಿದೆ ಆ ಸ್ಕೂಲ್ ತೋರಿಸಿ.. ಕಸಮುಕ್ತ ನಗರ ಮಾಡ್ತೀನಿ ಅಂತ ಹೇಳಿದ್ರಿ ಧೂಳಿನ ನಗರ ಆಗಿದೆ, ನಮ್ಮ ಬಟ್ಟೆ ಶರ್ಟ್ ಕಲರ್ ಚೇಂಜ್ ಆಗುತ್ತೆ ಎಂದಿದ್ದಾರೆ.

Source: newsfirstlive.com Source link