ಶಾಸ್ತ್ರಿ-ಕೊಹ್ಲಿಗೆ ತಲೆನೋವು ತರಿಸಿದ ಪಂತ್​ ವೈಫಲ್ಯ.. ಚಾನ್ಸ್​ ಗಿಟ್ಟಿಸಿಕೊಳ್ತಾರಾ ಸಾಹ?

ಶಾಸ್ತ್ರಿ-ಕೊಹ್ಲಿಗೆ ತಲೆನೋವು ತರಿಸಿದ ಪಂತ್​ ವೈಫಲ್ಯ.. ಚಾನ್ಸ್​ ಗಿಟ್ಟಿಸಿಕೊಳ್ತಾರಾ ಸಾಹ?

ಇಂಗ್ಲೆಂಡ್​ ವಿರುದ್ಧದ 3ನೇ ಟೆಸ್ಟ್​​ನಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲಿಗೆ ಶರಣಾಗಿದೆ. ಇದಕ್ಕೆ ಕಾರಣ ಏನು ಅಂದ್ರೆ, ಬ್ಯಾಟ್ಸ್​​ಮನ್​ಗಳ ವೈಫಲ್ಯ ಅನ್ನೋದು ನೇರ ಉತ್ತರವಾಗಿದೆ. ಅದರಲ್ಲೂ ಈ ಬ್ಯಾಟ್ಸ್​ಮನ್​ ಮೇಲಿಟ್ಟಿದ್ದ ನಿರೀಕ್ಷೆ, ಮತ್ತೊಮ್ಮೆ ಹುಸಿಯಾಗಿರೋದು ಮ್ಯಾನೇಜ್​​ಮೆಂಟ್​​ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

25, 37, 22, 2, 1… ಇದು ಇಂಗ್ಲೆಂಡ್​​​ ಸರಣಿಯಲ್ಲಿ ರಿಷಭ್​​ ಪಂತ್​​ ಗಳಿಸಿದ ರನ್​. ಮೂರು ಪಂದ್ಯಗಳ ಪೈಕಿ ಐದು ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿರುವ ಪಂತ್​​ ಗಳಿಸಿರೋದು ಕೇವಲ 87ರನ್​. ಭಾರತೀಯ ಕ್ರಿಕೆಟ್​​ಗೆ ಹೊಸ ಭರವಸೆ ಮೂಡಿಸಿದ್ದ ಈ ಆಟಗಾರನ ವೈಫಲ್ಯ, ಟೀಮ್​​ ಮ್ಯಾನೇಜ್​ಮೆಂಟ್​​​ಗೆ ಹೊಸ ತಲೆನೋವು ತರಿಸಿದೆ.

blank

ಲೀಡ್ಸ್​ ಟೆಸ್ಟ್​ನಲ್ಲೂ ಕೈಕೊಟ್ಟ ಗೇಮ್​ಚೇಂಜರ್​ ರಿಷಭ್ ಪಂತ್​.!

ಲೀಡ್ಸ್​​ ಟೆಸ್ಟ್​​ನಲ್ಲಿ 238 ರನ್​ಗೆ ಟೀಮ್​ ಇಂಡಿಯಾ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್​​ಗೆ ಬಂದ​ ಪಂತ್​ ಮೇಲೆ ಹೆಚ್ಚಿನ ಹೋಪ್ಸ್​ ಇತ್ತು. ಆದ್ರೆ, 7 ಎಸೆತಗಳನ್ನ ಎದುರಿಸಿದ ಪಂತ್​, ಕೇವಲ 1 ರನ್​ ಗಳಿಸಿ ಔಟಾಗಿ ನಿರಾಸೆ ಮೂಡಿಸಿದ್ರು. ಇದು ಎರಡನೇ ಇನ್ನಿಂಗ್ಸ್​ ಕಥೆ. ಮೊದಲ ಇನ್ನಿಂಗ್ಸ್​​ನಲ್ಲೂ ಪಂತ್​​ರದ್ದು ಇದೇ ರಾಗ.. ಆಗಲೂ 9 ಎಸೆತ ಎದುರಿಸಿ ಕೇವಲ 2 ರನ್​ಗಳಿಸಿ ಪೆವಿಲಿಯನ್​ಗೆ ವಾಪಾಸ್ಸಾಗಿದ್ರು.

blank

ಪಂತ್​ರ ಈ ವೈಫಲ್ಯ ಲೀಡ್ಸ್​​ ಪಂದ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ನಾಟಿಂಗ್​​ಹ್ಯಾಮ್​​, ಲಾರ್ಡ್ಸ್​​ ಟೆಸ್ಟ್​​​ನಲ್ಲೂ ಪಂತ್​ದು ಇದೇ ಕಥೆ. ಕಳೆದ ಇಂಗ್ಲೆಂಡ್​​-ಆಸ್ಟ್ರೇಲಿಯಾ ಸರಣಿಗಳಲ್ಲಿ ಪಂತ್​ ಸ್ಫೋಟಿಸಿದ್ರು ಅನ್ನೋದು ಎಷ್ಟು ನಿಜವೋ, ಇದೀಗ ವೈಫಲ್ಯದ ಸುಳಿಗೆ ಸಿಲುಕಿದ್ದಾರೆ ಅನ್ನೋದು ಕೂಡ ಅಷ್ಟೆ ನಿಜ. ಬ್ಯಾಟಿಂಗ್​​ ಟೆಕ್ನಿಕ್ ಅನ್ನೇ​ ಮರೆತಂತೆ ಕಾಣ್ತಿರೋ ಪಂತ್​, ಬೌಲರ್​ಗಳನ್ನ ರೀಡ್​ ಮಾಡುವಲ್ಲಿ ಎಡವುತ್ತಿದ್ದಾರೆ. ಇದರಿಂದ ಈ ಸರಣಿಯಲ್ಲಂತೂ ಔಟ್ ​ಸೈಡ್ ದ ಆಫ್ ಸ್ಟಂಪ್​ ಎಸೆತಗಳನ್ನ ಕೆಣಕಿ ಪಂತ್​ ವಿಕೆಟ್​​ ಕೈ ಚೆಲ್ಲಿದ್ದಾರೆ.

ಸದ್ಯ ಸರಣಿಯಲ್ಲಿ ಆಡಿರುವ ಬೇಜವಾಬ್ದಾರಿಯುತ ಆಟ ಇದೀಗ ಸ್ಥಾನಕ್ಕೂ ಕುತ್ತು ತಂದಿದೆ. ಬೆಂಚ್​ಗೆ ಸೀಮಿತವಾಗಿರುವ ವೃದ್ಧಿಮಾನ್​ ಸಾಹ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ಪಂದ್ಯದಲ್ಲಿ ಪಂತ್​ಗೆ ರೆಸ್ಟ್​​ ನೀಡಿ ಸಾಹಾಗೆ ಅವಕಾಶ ನೀಡಬೇಕೆಂಬ ಕೂಗೂ ಎದ್ದಿದೆ. ಹೀಗಾಗಿ ಮ್ಯಾನೇಜ್​ಮೆಂಟ್​​​ ಏನು ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ನಿಮ್ಮ ಸಾಧನೆ ಇಡೀ ದೇಶಕ್ಕೆ ಸ್ಪೂರ್ತಿ- ಭವಿನಾ ಪಟೇಲ್​​ಗೆ ಶುಭ ಕೋರಿದ ಪ್ರಧಾನಿ ಮೋದಿ

Source: newsfirstlive.com Source link