ತಾಲಿಬಾನಿಗಳಿಂದ ಮತ್ತೊಂದು ಪೈಶಾಚಿಕ ಕೃತ್ಯ; ಫೇಮಸ್ ಹಾಡುಗಾರನನ್ನ ಹತ್ಯೆಗೈದ ಪಾಪಿಗಳು

ತಾಲಿಬಾನಿಗಳಿಂದ ಮತ್ತೊಂದು ಪೈಶಾಚಿಕ ಕೃತ್ಯ; ಫೇಮಸ್ ಹಾಡುಗಾರನನ್ನ ಹತ್ಯೆಗೈದ ಪಾಪಿಗಳು

ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ಇಡೀ ದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಜನರು ಪ್ರಾಣ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಈ ಹಿಂದೆ ಹಾಸ್ಯ ನಟ, ಓರ್ವ ಭಾರತೀಯ ಪತ್ರಕರ್ತನನ್ನ ಹತ್ಯೆಗೈದಿದ್ದ ತಾಲಿಬಾನಿಗಳು ಇದೀಗ ಮತ್ತೊಂದು ಪೈಶಾಚಿಕ ಕೃತ್ಯ ನಡೆಸಿದ್ದಾರೆ.

ಇದನ್ನೂ ಓದಿ: ISIS-K ವಿರುದ್ಧ ಪ್ರತೀಕಾರದ ಹೆಜ್ಜೆಯಿಟ್ಟ ಅಮೆರಿಕ.. ತಣ್ಣಗಾಗ್ತಾರಾ ಉಗ್ರರು..?

ಅಫ್ಘಾನಿಸ್ತಾನದ ಜನಪ್ರಿಯ ಹಾಡುಗಾರ ಫವಾದ್ ಕಿಶನಾಬಾದ್ ಎಂಬುವರನ್ನ ಬಘ್ಲಾನ್ ಪ್ರಾಂತ್ಯದಲ್ಲಿ ಹತ್ಯೆಗೈದಿದ್ದಾರೆ. ಅಫ್ಘಾನಿಸ್ತಾನದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಹಾಡುವುದನ್ನು ತಾಲಿಬಾನಿಗಳು ನಿಷೇಧಿಸಿದ್ದಾರೆ. ಇನ್ನು ಹಾಡುಗಾರ ಫವಾದ್ ಕಿಶನಾಬಾದ್ ಆ್ಯಂಟಿ ತಾಲಿಬಾನ್ ಹಾಡುಗಳನ್ನ ಕಟ್ಟಿ ಹಾಡುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ತಾಲಿಬಾನಿಗಳು ಫವಾದ್​ರನ್ನ ಹುಡುಕಿ ಹತ್ಯೆಗೈದಿದ್ದಾರೆ.

ಇದಷ್ಟೇ ಅಲ್ಲದೇ ಕಾಬೂಲ್ ಏರ್​ಪೋರ್ಟ್​ನ್ನು ತಾಲಿಬಾನಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಪೆಂಟಗಾನ್ ಈ ವರದಿಯನ್ನು ತಳ್ಳಿಹಾಕಿದ್ದು ಕಾಬೂಲ್ ಏರ್​ಪೋರ್ಟ್ ಈಗಲೂ ಅಮೆರಿಕ ಸೇನೆಯ ಕೈನಲ್ಲಿದೆ ಎಂದು ಹೇಳಿದೆ.

Source: newsfirstlive.com Source link