ಟೀಮ್ ಇಂಡಿಯಾ ಪರ ಆಡೋದಾಗಿ ಅಂಗಳಕ್ಕೆ ನುಗ್ಗಿದ ಜಾರ್ವೋ ಯಾರು..?

ಟೀಮ್ ಇಂಡಿಯಾ ಪರ ಆಡೋದಾಗಿ ಅಂಗಳಕ್ಕೆ ನುಗ್ಗಿದ ಜಾರ್ವೋ ಯಾರು..?

ಒಂದೆಡೆ ಇಂಡೋ-ಇಂಗ್ಲೆಂಡ್​ ಟೆಸ್ಟ್​​ ಸರಣಿಯ ಬಿಸಿ ಹೆಚ್ಚಾಗ್ತಿದ್ರೆ, ಮತ್ತೊಂದೆಡೆ ಟೀಮ್ ಇಂಡಿಯಾದ 12ನೇ ಆಟಗಾರನ ಕಿತಾಪತಿ ಜಾಸ್ತಿಯಾಗ್ತಿದೆ. ಜೊತೆಗೆ ಆತನ ಕೀಟಲೆಗೆ ಪ್ರೇಕ್ಷಕರು, ಕ್ರಿಕೆಟ್ ಆಟಗಾರರು ಸಹ ಹೊಟ್ಟೆ ಹುಣ್ಣಾಗುವಷ್ಟು ನಗ್ತಿದ್ದಾರೆ. ಹೀಗೆ ಹೊಟ್ಟೆ ಹುಣ್ಣಾಗಿಸ್ತಿರೋ ಆತ ಯಾರು..?

ಜಾರ್ವೋ, ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಹೆಚ್ಚು ಸದ್ದು ಮಾಡ್ತಿರೋ ಹೆಸರು.. ಅದು ಎಷ್ಟರ ಮಟ್ಟಿಗಂದ್ರೆ, ಆಟಗಾರರ ಪ್ರದರ್ಶನಕ್ಕಿಂತ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿರುವ ನಾಮಪದ, ಜಾರ್ವೋ..! ಇದಕ್ಕೆ ಕಾರಣ ಪಂದ್ಯದ ವೇಳೆ ಈತ ಮಾಡೋ ಕುಚೇಷ್ಟೆಗಳು..!

blank

ಹೌದು..! ಕ್ರಿಕೆಟ್ ಕಾಶಿಯ​​ ಪಂದ್ಯದ 3ನೇ ದಿನದಾಟ ಕಾಣಿಸಿಕೊಂಡಿದ್ದ ಈ ಜಾರ್ವೋ, ಕೆಲಕಾಲ ಅಂಗಳದಲ್ಲಿ ಗೊಂದಲ ಸೃಷ್ಟಿಸಿದ್ದ. ಟೀಮ್ ಇಂಡಿಯಾ ಜರ್ಸಿ ಧರಿಸಿ ನಾನು ಟೀಮ್ ಇಂಡಿಯಾ ಪರ ಆಡೋದಾಗಿ ಪಟ್ಟು ಹಿಡಿದಿದ್ದ. ಈತನ ವರ್ತನೆಗೆ ಸ್ವತಃ ಆಟಗಾರರು, ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು.

ಈ ಜಾರ್ವೋ ಕಿತಾಪತಿ ಇಷ್ಟಕ್ಕೆ ಮುಗಿಯಲಿಲ್ಲ.. ಲಾರ್ಡ್ಸ್​ ಟು ಲೀಡ್ಸ್​ವರೆಗೂ, ಇದು ಮುದುವರಿಯಿತು.. ಪಂದ್ಯದ 3ನೇ ದಿನದಾಟವೂ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಜಾರ್ವೋ, ರೋಹಿತ್ ವಿಕೆಟ್ ಪತನದ ಬೆನ್ನಲ್ಲೇ ಸೀದಾ ಬ್ಯಾಟು, ಪ್ಯಾಡ್​ ಕಟ್ಟಿಕೊಂಡು ವಿರಾಟ್ ಕೊಹ್ಲಿ ಬದಲಿಗೆ ಕ್ರೀಸ್​ಗೆ ಆಗಮಿಸಿ ಶಾಕ್ ನೀಡಿದ. ಅಷ್ಟೇ ಅಲ್ಲ.! ಸಿರೀಯಸ್ ಆಗಿ ಪಂದ್ಯವನ್ನ ವೀಕ್ಷಿಸುತ್ತಿದ್ದ ಪ್ರೇಕ್ಷಕರನ್ನ ನಗೆ ಗಡಲಲ್ಲೇ ತೇಲಿಸಿದ.. ಹಾಗಾದ್ರೆ, ಯಾರು ಈ ಜಾರ್ವೋ.?

blank

ಜಾರ್ವೋ ಪೂರ್ಣ ಹೆಸರು, ಡೇನಿಯಲ್ ಜಾರ್ವಿಸ್ ಅಲಿಯಾಸ್ ಜಾರ್ವೋ.. ಕ್ರಿಕೆಟ್​​ ಹೆಚ್ಚು ಅಭಿಮಾನಿಯಾಗಿರುವ ಈತ, ಇಂಗ್ಲೆಂಡ್​ನ ಫೇಮಸ್ ಪ್ರ್ಯಾಂಕ್​​ಸ್ಟಾರ್​ ಕೂಡ ಆಗಿದ್ದಾನೆ.. ದುಬೈನಲ್ಲಿ ಕೆಲಸ ಮಾಡ್ತಿರುವ ಜಾರ್ವಿಸ್, ವೃತ್ತಿಪರ ಹಾಸ್ಯಗಾರ.. ಪ್ರ್ಯಾಂಕ್​​ಸ್ಟಾರ್​ ಬ್ಯಾಡ್ ಗ್ರಾಂಡ್​​​​​​​​​ಪಾ ಅಂತಾನೇ ಖ್ಯಾತಿಗಳಿಸಿದ್ದಾರೆ. ಪ್ರ್ಯಾಂಕ್ ಮಾಡೋದ್ರಲ್ಲಿ ಎತ್ತಿದ ಕೈ, ಕೇವಲ ಕ್ರಿಕೆಟ್ ಪಂದ್ಯದ ವೇಳೆ ಮಾತ್ರವೇ ಇಂಥಹ ಕುಚೇಷ್ಟೆ ಮಾಡಿಲ್ಲ. ಇತರೆ ಕ್ರೀಡಾಕೂಟಗಳ ವೇಳೆಯೂ, ಈ ರೀತಿಯ ಕುಚೇಷ್ಟೆಗಳಿಂದ ಸದ್ದು ಮಾಡಿದ್ದಾರೆ.

blank

ಒಲಿಂಪಿಕ್ಸ್​ನ ಸ್ವಿಮ್ಮಿಂಗ್ ಡೈವಿಂಗ್ ಫೈನಲ್​​ನಲ್ಲಿ, ಪೂಲ್​​ಗೆ ಡೈವ್​​ ಹೊಡೆದು ಗೊಂದಲವನ್ನೇ ಸೃಷ್ಟಿಸಿದ್ದ ಜಾರ್ವೋ, ಪುಟ್ಬಾಲ್ ಪಂದ್ಯಗಳಲ್ಲೂ ಈ ಥರಹದ ಘಟನೆಗಳಿಗೆ ಸಾಕ್ಷಿಯಾಗಿದ್ದಾರೆ. ಭಿನ್ನ, ವಿಭಿನ್ನ ವೇಷಗಳನ್ನ ಧರಿಸಿ ಪ್ರ್ಯಾಂಕ್ ಮಾಡಿರುವ ಈತ, ಸದ್ಯ ಭಾರತ-ಇಂಗ್ಲೆಂಡ್ ಟೆಸ್ಟ್​ ಸರಣಿಯನ್ನ ತನ್ನ ಖ್ಯಾತಿಗೆ ವೇದಿಕೆಯಾಗಿ ಮಾಡಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಎದ್ದಿದೆ.

 

Source: newsfirstlive.com Source link