ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಮಾರ್ಗಕ್ಕೆ ಸಿಕ್ತು ಚಾಲನೆ; ಕೇಂದ್ರದ ನಾಯಕರು ಭಾಗಿ

ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಮಾರ್ಗಕ್ಕೆ ಸಿಕ್ತು ಚಾಲನೆ; ಕೇಂದ್ರದ ನಾಯಕರು ಭಾಗಿ

ಬೆಂಗಳೂರು: ಬಹುನಿರೀಕ್ಷಿತ ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಮಾರ್ಗ ಸಂಚಾರಕ್ಕೆ ಗ್ರೀನ್​​ ಸಿಗ್ನಲ್​​ ಸಿಕ್ಕಿದೆ. ಸಿಲಿಕಾನ್​ ಸಿಟಿಯಲ್ಲಿ ನೂತನವಾಗಿ ನಿರ್ಮಿಸಲಾದ ನಾಯಂಡಳ್ಳಿ ಮತ್ತು ಕೆಂಗೇರಿ ಮೆಟ್ರೋ ಮಾರ್ಗವನ್ನ ಇಂದು ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ ಉದ್ಘಾಟನೆ ಮಾಡಿದ್ದಾರೆ.

blank

ಮೊದಲ ಮೆಟ್ರೋ ಸಂಚಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಹಸಿರು ನಿಶಾನೆ ತೊರುವ ಮೂಲಕ ಚಾಲನೆ ನೀಡಿದ್ದಾರೆ. 1,560 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಮಾರ್ಗ 7.5 ಕಿಲೋ ಮೀಟರ್​ ಉದ್ದ ಇದ್ದು, ಈ ಮಾರ್ಗದಲ್ಲಿ 6 ನಿಲ್ದಾಣಗಳು ಬರಲಿವೆ.

ಇದನ್ನೂ ಓದಿ:‘ಸತ್ತರೆ ಉಚಿತವಾಗಿ ಶವ ಸಂಸ್ಕಾರ’: ಬಿಜೆಪಿ ಪ್ರಣಾಳಿಕೆ ಕಂಡು ಗಾಬರಿ ಬಿದ್ದ ಜನರು

blank

ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿಗೆ ಕೇಂದ್ರ ಸಚಿವರಾದ ಹರ್ದೀಪ್‌ ಸಿಂಗ್‌ ಪುರಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತರಾಮನ್‌ ಹಾಗೂ ಶಾಸಕರು, ಸಂಸದರು, ಸಚಿವರು ಸಾಥ್​ ನೀಡಿದ್ದಾರೆ.

blank

Source: newsfirstlive.com Source link