ಪ್ರೀತಿಯ ಮಾವನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಸಮಂತಾ ಹೇಳಿದ್ದೇನು?

ಪ್ರೀತಿಯ ಮಾವನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಸಮಂತಾ ಹೇಳಿದ್ದೇನು?

ಕಳೆದ ಕೆಲ ದಿನಗಳ ಹಿಂದೆ ಸಮಂತಾ ತನ್ನ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ತಮ್ಮ ಹೆಸರಿನ ಜೊತೆಗಿದೆ ಅಕ್ಕಿನೇನಿ ಎಂಬ ಹೆಸರನ್ನು ತೆಗೆದು ಹಾಕಿ ‘‘ಎಸ್​’’ ಎಂದು ಬದಲಾಯಿಸಿಕೊಂಡಿದ್ದರು. ಇನ್ನು ಸಮಂತಾ ಹೆಸರು ಸೋಶಿಯಲ್​ ಮೀಡಿಯಾದಲ್ಲಿ ಬದಲಾವಣೆ ಅಗತ್ತಿದಾಗೆ ಒಂದಷ್ಟು ಗಾಸಿಪ್ ಪಂಡಿತರು ಸಮಂತಾ ಮತ್ತು ಅಕ್ಕಿನೇನಿ ಫ್ಯಾಮಿಲಿ ನಡುವೆ ಮನಸ್ತಾಪ ಉಂಟಾಗಿದೆ ಅಂತೆಲ್ಲ ಮಾತನಾಡಿಕೊಂಡರು.

ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್​ನ ಕೆಲ ಸೀನ್​ಗಳ ಅಕ್ಕಿನೇನಿ ಫ್ಯಾಮಿಲಿಗೆ ಮುಜುಗರ ಉಂಟು ಮಾಡಿದ ಕಾರಣ, ಸ್ಯಾಮ್​ ಮತ್ತು ನಾಗ ಚೈತನ್ಯ ಸಂಸಾರದಲ್ಲಿ ಬಿರುಕು ಮೂಡಿದೆ. ಹೀಗಾಗಿ ಸಮಂತಾ ತಮ್ಮ ಹೆಸರನ್ನ ಬದಲಾಯಿಸಿಕೊಂಡಿದ್ದಾರೆ ಅಂತಾ ಟಾಲಿವುಡ್​ ಅಂಗಳದಲ್ಲಿ ಕೆಲ ಮಾತುಗಳು ಕೇಳಿ ಬಂದಿತ್ತು.

ಇದನ್ನೂ ಓದಿ:ಚಿತ್ರ ನಟಿಯರ ಟ್ಯಾಟೂ ಕ್ರೇಜ್.. ಒಬ್ಬೊಬ್ಬರದ್ದೂ ಒಂದೊಂದು ಟೇಸ್ಟ್​! ಸಖತ್ತಾಗಿದೆ

ಇನ್ನು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಮಂತಾ” ನಾನು ಯಾವುದೇ ವಿವಾದ ಅಥವಾ ಟ್ರೋಲ್‌ಗಳಿಗೆ ನನಗೆ ಪ್ರತಿಕ್ರಿಯಿಸಬೇಕು ಎನಿಸಿದರೆ ಮಾತ್ರ ನಾನು ಪ್ರತಿಕ್ರಿಯೆ ನೀಡುತ್ತೇನೆ. ಯಾರೋ ಪ್ರತಿಕ್ರಿಯೆ ನೀಡಿ ಎಂದ ಮಾತ್ರಕ್ಕೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ. ಇಂತಹ ವಿಚಾರಗಳನ್ನು ಚರ್ಚಿಸುವ ಬಗ್ಗೆಯೂ ನನಗೆ ಇಷ್ಟವಿಲ್ಲ.” ಎಂದು ಹೇಳಿದ್ದರು. ನಂತರ ಸಮಂತಾ ತಾನು ಆ್ಯಕ್ಟಿಂಗ್​ನಿಂದ ಬ್ರೇಕ್​ ಪಡೆಯುವುದಾಗಿಯು ತಿಳಿಸಿದ್ರು.

ಇನ್ನು ಇಂದು ಟಾಲಿವುಡ್​ ನಟ ಅಕ್ಕಿನೇನಿ ನಾಗಾರ್ಜುನರವರ ಬರ್ತ್​ಡೇ ಆಗಿದ್ದು ನಟಿ ಸಮಂತಾ ತಮ್ಮ ಮಾವನಿಗೆ ಜನ್ಮದಿನದ ಶುಭಾಶಯಗಳನ್ನು ಟ್ವಿಟರ್​ ಮೂಲಕ ತಿಳಿಸಿದ್ದಾರೆ.

” ನಿಮ್ಮ ಮೇಲೆ ನಾನು ಹೊಂದಿರುವ ಗೌರವವನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲ. ನಿಮಗೆ ಯಾವಾಗಲೂ ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ಸಿಗಲಿ ಎಂದು ನಾನು ಬಯಸುತ್ತೇನೆ. ಹುಟ್ಟು ಹಬ್ಬದ ಶುಭಾಶಯಗಳು ಮಾಮ ” ಎಂದು ಸಮಂತಾ ಟ್ವೀಟ್​ ಮಾಡಿದ್ದಾರೆ.

 

Source: newsfirstlive.com Source link