ಸಾಮೂಹಿಕ ಅತ್ಯಾಚಾರ; ‘ನನ್ನ ಮಗನ್ನ ಯಾಕೆ ಬಂಧಿಸಿದ್ರೋ ಗೊತ್ತಿಲ್ಲ’ ಎಂದು ಬಿಕ್ಕಿಬಿಕ್ಕಿ ಅತ್ತ ಆರೋಪಿ ತಾಯಿ

ಸಾಮೂಹಿಕ ಅತ್ಯಾಚಾರ; ‘ನನ್ನ ಮಗನ್ನ ಯಾಕೆ ಬಂಧಿಸಿದ್ರೋ ಗೊತ್ತಿಲ್ಲ’ ಎಂದು ಬಿಕ್ಕಿಬಿಕ್ಕಿ ಅತ್ತ ಆರೋಪಿ ತಾಯಿ

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಸಂಬಂಧ ಮೈಸೂರು ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪೈಕಿ ಒಬ್ಬರಾದ ಆರೋಪಿ ಭೂಪತಿ ತಾಯಿ, ಯಾಕೆ ನನ್ನ ಮಗನನ್ನು ಬಂಧಿಸಿದರೋ ಗೊತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.

ಯಾಕೆ ಮಗನನ್ನ ಕರೆದುಕೊಂಡು ಹೋದ್ರು ಎನ್ನುವುದು ಗೊತ್ತಿಲ್ಲ. ಮನೆಯಲ್ಲೇ ಮಗ ಭೂಪತಿ ಮಲಗಿದ್ದ. ಮಲಗಿದ್ದ ಮಗನನ್ನ ನಿನ್ನೆ ಮುಂಜಾನೆ ಏಕಾಏಕಿ ಮನೆಗೆ ನುಗ್ಗಿ ಪೊಲೀಸರು ವಶಕ್ಕೆ ಪಡೆದರು ಎಂದು ತಾಯಿ ಕಸ್ತೂರಮ್ಮ ಕಣ್ಣೀರಿಟ್ಟಿದ್ದಾರೆ.

ನಾನು ಯಾಕೆ ಮಗನನ್ನು ಕರೆದುಕೊಂಡು ಹೋಗ್ತಿರಿ ಎಂದರೂ ಏನೂ ಹೇಳಲಿಲ್ಲ. ಪೊಲೀಸರ ಅಂಗಲಾಚಿದ್ರೂ ಬಿಡಲಿಲ್ಲ. ಕೂಲಿ ಕೆಲಸ ಮಾಡಿಕೊಂಡು ಇಡೀ ಕುಟುಂಬದ ನಿರ್ವಹಣೆ ಹೊತ್ತಿದ್ದ. ಹೀಗೆಂದು ತಮಿಳುನಾಡಿನ ತಾಳವಾಡಿ ತಾಲೂಕಿನ ಸೂಸೈಪುರಂ ಗ್ರಾಮದ ಆರೋಪಿ ತಾಯಿ ಬಿಕ್ಕಿಬಿಕ್ಕಿ ಅತ್ತರು.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ ಆರೋಪಿಗಳು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ

ಇದನ್ನೂ ಓದಿ: ಗ್ಯಾಂಗ್ ರೇಪ್​ ಕೇಸ್​ನ ಓರ್ವ ಆರೋಪಿ ಮೇಲೆ ಪ್ರಿಯತಮೆಯ ತಂದೆಯನ್ನೇ ಕೊಂದ ಆರೋಪ..!

Source: newsfirstlive.com Source link