ಮೈಸೂರು ಗ್ಯಾಂಗ್‍ರೇಪ್ – ಆರೋಪಿ ಮೇಲಿದೆ 10 ಕೇಸ್‍ಗಳು

ಮೈಸೂರು: ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಓರ್ವ ಆರೋಪಿ 6 ತಿಂಗಳ ತಿಂಗಳ ಹಿಂದೆಯಷ್ಟೇ ಪೊಲೀಸರ ಅತಿಥಿಯಾಗಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

ಶ್ರೀಗಂಧದ ಮರಕದ್ದ ಪ್ರಕರಣದಲ್ಲಿ ಮೈಸೂರಿನ ನಜರ್ ಬಾದ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಸುಮಾರು 5 ಲಕ್ಷ ಮೌಲ್ಯದ ಶ್ರೀಗಂಧ ಹಾಗೂ ಕಾರುಗಳನ್ನು ಈ ವೇಳೆ ವಶಕ್ಕೆ ಪಡೆಯಲಾಗಿತ್ತು. ಈತನ ಮೇಲೆ 10 ಪ್ರಕರಣಗಳು ಇರುವ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಯಾವುದೇ ರಾಜ್ಯಕ್ಕೆ ಹೋದರೂ ಒಂದೇ ವಾಹನ ನಂಬರ್ – ಈಗಿನ ವ್ಯವಸ್ಥೆ ಹೇಗಿದೆ? ಯಾರಿಗೆ ಸಿಗಲಿದೆ?

ಜನವರಿ 9 ರಂದು ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿತ್ತು. ನ್ಯಾಯಾಂಗ ಬಂಧನದ ಬಳಿಕ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಜೈಲಿಗೆ ಹೋಗಿದ್ದರೂ ಬುದ್ಧಿ ಕಲಿಯದ ಈತ ಈಗ ಸಾಮೂಹಿಕ ಅತ್ಯಾಚಾರದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಇದನ್ನೂ ಓದಿ: ಪ್ಯಾರಾಲಂಪಿಕ್ಸ್‌ನಲ್ಲಿ ಬೆಳ್ಳಿ ಪದಕ – ಇತಿಹಾಸ ನಿರ್ಮಿಸಿದ ಭವಿನಾಬೆನ್ ಪಟೇಲ್

ಪೊಲೀಸರು ಆರೋಪಿಗಳನ್ನು ಮೂರನೇ ಜೆಎಂಎಫ್‍ಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಇಂದಿನಿಂದ ತಮ್ಮ ಕಸ್ಟಡಿಯಲ್ಲಿ ಡ್ರಿಲ್ ಮಾಡಲಿರುವ ಪೊಲೀಸರು ಕಾಮುಕರಿಂದ ಮತ್ತಷ್ಟು ಮಾಹಿತಿ ಕಲೆ ಹಾಕುವ ವಿಶ್ವಾಸದಲ್ಲಿದ್ದಾರೆ.

Source: publictv.in Source link